ಮುಂಬೈ: ಇಸ್ರೇಲ್, ಅಮೆರಿಕಾ – -ಇರಾನ್ (Isreal, USA- Iran) ನಡುವಿನ ಯುದ್ಧದ ಭೀಕರತೆಯಿಂದಾಗಿ ಭಾರತದ ಷೇರುಪೇಟೆಯಲ್ಲಿ (Share Market) ಇಂದು ಒಂದೇ ದಿನ 8 ಲಕ್ಷ ಕೋಟಿ ರೂ. ನಷ್ಟವಾಗಿದೆ. ಫೆಬ್ರವರಿ ಆರಂಭದಲ್ಲಿ ಸ್ವಲ್ಪ ಕುಸಿದಿದ್ದ ಚಿನ್ನದ ಬೆಲೆ (Gold Price) ಮತ್ತೆ ಏರಿಕೆಯತ್ತ ಸಾಗಿವೆ.
ನಿನ್ನೆಗಿಂತ ಕೊಂಚ ದರ ಇಳಿಕೆಯಾದರೂ ಮತ್ತೆ ಚಿನ್ನದ ದರ ಏರಿಕೆಯ ಭೀತಿ ಎದುರಾಗಿದೆ. ಭಾರತದಲ್ಲಿ 10 ಗ್ರಾಂ ಚಿನ್ನದ ದರ 2 ಲಕ್ಷ ಗಡಿ ದಾಟಬಹುದು ಎನ್ನಲಾಗುತ್ತಿದೆ. ಇದನ್ನೂ ಓದಿ: ಇರಾನ್ ಸರ್ವೋಚ್ಚ ನಾಯಕ ಖಮೇನಿ ಹತ್ಯೆಯನ್ನು ಭಾರತ ಖಂಡಿಸಿಲ್ಲ ಯಾಕೆ?
ಎಷ್ಟಿದೆ ಚಿನ್ನದ ದರ?
24 ಕ್ಯಾರಟ್ 1 ಗ್ರಾಂ – 17,051 ರೂ.
24 ಕ್ಯಾರಟ್ 10 ಗ್ರಾಂ – 1,70,510 ರೂ.
22 ಕ್ಯಾರಟ್ 1 ಗ್ರಾಂ – 15, 630 ರೂ.
22 ಕ್ಯಾರಟ್ 10 ಗ್ರಾಂ – 1,56,300 ರೂ.
ಯಾಕೆ ಏರಿಕೆ?
ಯುದ್ಧ ಭೀತಿಯಿಂದ ಷೇರು ಮಾರುಕಟ್ಟೆ ವಿಶ್ವಾದ್ಯಂತ ಕುಸಿತ ಕಂಡಿದೆ. ಯುದ್ಧ ಭೀತಿ ಬಂದಾಗ ಹೂಡಿಕೆದಾರರು ಷೇರುಗಳ ಮೇಲಿನ ಹೂಡಿಕೆಯನ್ನು ಬಿಟ್ಟು ಲಾಭದ ದೃಷ್ಟಿಯಿಂದ ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಮೊದಲೇ ಚಿನ್ನದ ಪೂರೈಕೆ ಕಡಿಮೆಯಿದೆ. ದಿಢೀರ್ ಬೇಡಿಕೆ ಹೆಚ್ಚಾಗುತ್ತಿದ್ದಂತೆ ದರ ಭಾರೀ ಏರಿಕೆ ಕಾಣುವ ಸಾಧ್ಯತೆಯಿದೆ. ಇದನ್ನೂ ಓದಿ: ಕುವೈತ್ ಎಡವಟ್ಟಿಗೆ ಅಮೆರಿಕದ 3 F-15 ವಿಮಾನ ಪತನ

