ಒಂದನೇ ತರಗತಿಗೆ ದಾಖಲಾತಿ ವಯಸ್ಸಿನ ಮಿತಿ ಸಡಿಲ ಮಾಡಿ: ಸರ್ಕಾರಕ್ಕೆ ಪೋಷಕರ ಮನವಿ

1 Min Read

ಬೆಂಗಳೂರು: ಒಂದನೇ ತರಗತಿಗೆ ದಾಖಲಾಗುವ 6 ವರ್ಷ ವಯಸ್ಸಿನ ಮಿತಿಯನ್ನ ಈ ವರ್ಷವೂ ಸಡಿಲ ಮಾಡಬೇಕು ಎಂದು ಮತ್ತೆ ಪೋಷಕರು ಸರ್ಕಾರವನ್ನ ಒತ್ತಾಯಿಸಿದ್ದಾರೆ.

- Advertisement -

ವಯಸ್ಸಿನ ಮಿತಿ ಸಡಿಲ ಮಾಡುವಂತೆ ಒತ್ತಾಯಿಸಿ ಪೋಷಕರು ಮತ್ತು ವಿದ್ಯಾರ್ಥಿಗಳು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಸರ್ಕಾರ ಮತ್ತು ಶಾಲಾ ಶಿಕ್ಷಣ ಇಲಾಖೆಗೆ ‌ಮನವಿ ಮಾಡಿದರು. ಮಕ್ಕಳು ಪೋಸ್ಟರ್ ಹಿಡಿದು ವಯಸ್ಸಿನಲ್ಲಿ ಮಿತಿ ಸಡಿಲ ಮಾಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ನಾಳೆ ರಕ್ತ ಚಂದ್ರಗ್ರಹಣ – ಬೆಂಗಳೂರಿನ ವಿವಿಧ ದೇವಾಲಯಗಳಲ್ಲಿ ಪೂಜಾ, ದರ್ಶನ ಸಮಯ ಬದಲು

- Advertisement -

- Advertisement -

ಈ ವೇಳೆ ಮಾತಾಡಿದ ಪೋಷಕರು, ಈ ವರ್ಷದ ದಾಖಲಾತಿಗೆ 90 ದಿನಗಳ ಸಡಿಲಿಗೆ ಕೊಡಬೇಕು. ವಯಸ್ಸಿನ ಸಡಿಲಿಕೆ ಸಮಸ್ಯೆಯಿಂದ 2.30 ಲಕ್ಷ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತದೆ. ರಾಜ್ಯ ಶಿಕ್ಷಣ ನೀತಿ (SEP) ಪ್ರಕಾರ 90 ದಿನ ಸಡಿಲಿಕೆ ಕೊಡುವ ಅವಕಾಶ ಇದೆ. ಈ ವರ್ಷಕ್ಕೆ ಅನ್ವಯ ಆಗುವಂತೆ ಸಡಲಿಕೆ ಕೊಡಬೇಕು ಎಂದು ಕೋರಿದರು.

- Advertisement -

Share This Article