ಕೋಲ್ಕತ್ತಾ: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ (Sanju Samson) ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ವೆಸ್ಟ್ ಇಂಡಿಸ್ (West Indies) ವಿರುದ್ಧ ಭಾರತ (Team India) 5 ವಿಕೆಟ್ಗಳ ರೋಚಕ ಜಯ ಸಾಧಿಸಿ ಸೆಮಿ ಫೈನಲ್ ಪ್ರವೇಶಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ವೆಸ್ಟ್ ಇಂಡೀಸ್ 4 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತು. ಕಠಿಣ ಮೊತ್ತವನ್ನು ಬೆನ್ನಟ್ಟಿದ ಭಾರತ ಇನ್ನೂ 4 ಎಸೆತ ಬಾಕಿ ಇರುವಂತೆಯೇ 5 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿ ಜಯಗಳಿಸಿತು. ಈ ಜಯದೊಂದಿಗೆ ಭಾರತ ಫೆ.5 ಗುರುವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಇಂಗ್ಲೆಂಡ್ (England) ತಂಡವನ್ನು ಎದುರಿಸಲಿದೆ.
ಭಾರತ ಕೊನೆಯ 12 ಎಸೆತಗಳಲ್ಲಿ 12 ರನ್ಗಳ ಅಗತ್ಯವಿತ್ತು. 19ನೇ ಓವರ್ನ ಎರಡನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಔಟಾದಾಗ ಟೀಂ ಇಂಡಿಯಾದ ಅಭಿಮಾನಿಗಳ ಒತ್ತಡ ಹೆಚ್ಚಾಗಿತ್ತು.ಈ ವೇಳೆ ಕ್ರೀಸಿಗೆ ಬಂದ ಶಿವಂ ದುಬೆ 4 ಎಸೆತಗಳಲ್ಲಿ 2 ಬೌಂಡರಿ ಹೊಡೆದು 8 ರನ್ ಹೊಡೆದು ಪಂದ್ಯಕ್ಕೆ ರೋಚಕ ತಿರುವು ನೀಡಿದರು.
Man on a mission! 🚀
Sanju Samson looks in sublime touch as he bring up his fifty! 🙌
ICC Men’s #T20WorldCup, SUPER 8, #INDvWI | LIVE NOW ➡️ https://t.co/Y26WH6p8dS pic.twitter.com/yrCOStYeaF
— Star Sports (@StarSportsIndia) March 1, 2026
ಕೊನೆಯ ಓವರ್ನಲ್ಲಿ ಭಾರತಕ್ಕೆ 7 ರನ್ ಬೇಕಿತ್ತು. ಸಂಜು ಸ್ಯಾಮ್ಸನ್ ಜೋಸೆಫ್ ಅವರ ಮೊದಲ ಎಸೆತವನ್ನು ಸಿಕ್ಸ್ಗೆ ಅಟ್ಟಿದರೆ ಎರಡನೇ ಎಸೆತವನ್ನು ಬೌಂಡರಿಗೆ ಹೊಡೆದು ತಂಡಕ್ಕೆ ಜಯವನ್ನು ತಂದುಕೊಟ್ಟರು.
ಭಾರತ 41 ರನ್ ಗಳಿಸುವಷ್ಟರಲ್ಲಿ ಅಭಿಷೇಕ್ ಶರ್ಮಾ 10 ರನ್, ಇಶನ್ ಕಿಶನ್ 10 ರನ್ ಗಳಿಸಿ ಔಟಾದರೂ ಆರಂಭಿಕ ಆಟಗಾರನಾಗಿ ಬಂದ ಸಂಜು ಸ್ಯಾಮ್ಸನ್ ಅಜೇಯ 97 ರನ್(50 ಎಸೆತ, 12 ಬೌಂಡರಿ, 4 ಸಿಕ್ಸ್) ಹೊಡೆದು ತಂಡವನ್ನು ಸೆಮಿಫೈನಲಿಗೆ ತೆಗೆದುಕೊಂಡು ಹೋದರು. ಈ ಅತ್ಯುತ್ತಮ ಆಟಕ್ಕೆ ಅರ್ಹವಾಗಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಎರಡು ವಿಕೆಟ್ ಪತನದ ಬಳಿಕ ಬಂದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ 35 ಎಸೆತಗಳಲ್ಲಿ 58 ರನ್ ಜೊತೆಯಾಟವಾಡಿದರು. 18 ರನ್(16 ಎಸೆತ, 1 ಬೌಂಡರಿ, 1 ಸಿಕ್ಸ್) ಹೊಡೆದಾಗ ದೊಡ್ಡ ಹೊಡೆತ ಹೊಡೆಯಲು ಹೋಗಿ ಸೂರ್ಯ ವಿಕೆಟ್ ಒಪ್ಪಿಸಿದರು.
Shivam Dube wastes no time as India push to finish this in style to book their semi-final berth. 🔥
ICC Men’s #T20WorldCup, SUPER 8, #INDvWI | LIVE NOW ➡️ https://t.co/Y26WH6p8dS pic.twitter.com/Ta4LWZ1VR2
— Star Sports (@StarSportsIndia) March 1, 2026
ನಂತರ ಬಂದ ತಿಲಕ್ ವರ್ಮಾ ಮತ್ತು ಸಂಜು ಸ್ಯಾಮ್ಸನ್ 26 ಎಸೆತಗಳಲ್ಲಿ 42 ರನ್ ಜೊತೆಯಾಟವಾಡಿದರು. ಉತ್ತಮವಾಗಿ ಆಡುತ್ತಿದ್ದ ತಿಲಕ್ ವರ್ಮಾ 27 ರನ್(15 ಎಸೆತ, 4 ಬೌಂಡರಿ, 1 ಸಿಕ್ಸ್) ಹೊಡೆದು ಔಟಾದರು. ಹಾರ್ದಿಕ್ ಪಾಂಡ್ಯ 17 ರನ್ ಹೊಡೆದು ಕ್ಯಾಚ್ ನೀಡಿ ಹೊರ ನಡೆದರು.
ವೆಸ್ಟ್ ಇಂಡೀಸ್ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟಿಗೆ 68 ರನ್ ಜೊತೆಯಾಟ ಬಂದಿತ್ತು. ಒಂದು ಹಂತದಲ್ಲಿ 102 ರನ್ಗಳಿಗೆ ಒಂದು ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ವಿಂಡೀಸ್ 119 ರನ್ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತ್ತು.
ವಿಕೆಟ್ ಪತನಗೊಂಡಿದ್ದರೂ ರೋವ್ಮನ್ ಪೊವೆಲ್ ಮತ್ತು ಜೇಸನ್ ಫೋಲ್ಡರ್ ಮುರಿಯದ 5ನೇ ವಿಕೆಟಿಗೆ 35 ಎಸೆತಗಳಲ್ಲಿ 76 ರನ್ ಜೊತೆಯಾಟವಾಡಿದ್ದರಿಂದ ವಿಂಡೀಸ್ ಮೊತ್ತ 190 ರನ್ಗಳ ಗಡಿಯನ್ನು ದಾಟಿತ್ತು.
Up and over! 🙌
Suryakumar Yadav charges on with intent and clears the fence with ease! 👏
ICC Men’s #T20WorldCup, SUPER 8, #INDvWI | LIVE NOW ➡️ https://t.co/Y26WH6p8dS pic.twitter.com/vqx5GuCfVn
— Star Sports (@StarSportsIndia) March 1, 2026
ವಿಂಡೀಸ್ ಪರ ಶಾಯ್ ಹೋಪ್ 32 ರನ್(33 ಎಸೆತ, 3 ಬೌಂಡರಿ, 1 ಸಿಕ್ಸ್), ರೋಸ್ಟನ್ ಚೇಸ್ 40 ರನ್(25 ಎಸೆತ, 5 ಬೌಂಡರಿ, 1 ಸಿಕ್ಸ್), ಹೇಟ್ಮಾಯರ್ 27 ರನ್(12 ಎಸೆತ, 1 ಬೌಂಡರಿ, 2 ಸಿಕ್ಸ್) ಹೊಡೆದು ಔಟಾದರು. ರೋವ್ಮನ್ ಪೊವೆಲ್ ಔಟಾಗದೇ 34 ರನ್(19 ಎಸೆತ, 3 ಬೌಂಡರಿ, 2 ಸಿಕ್ಸ್), ಜೇಸನ್ ಫೋಲ್ಡರ್ ಔಟಾಗದೇ 37 ರನ್(22 ಎಸೆತ, 2 ಬೌಂಡರಿ, 3 ಸಿಕ್ಸ್) ಹೊಡೆದರು.
ಟೀಂ ಇಂಡಿಯಾ ಫೀಲ್ಡಿಂಗ್ ಇಂದು ಕಳಪೆಯಾಗಿತ್ತು. ಅಭಿಷೇಕ್ ಶರ್ಮಾ 2 ಕ್ಯಾಚ್ ಬಿಟ್ಟರೆ, ತಿಲಕ್ ವರ್ಮಾ 1 ಕ್ಯಾಚ್ ಬಿಟ್ಟಿದ್ದರು. ವರುಣ್ ಚಕ್ರವರ್ತಿ ಆರಂಭದಲ್ಲಿ ರನೌಟ್ ಮಾಡುವ ಅವಕಾಶವನ್ನೂ ಕೈ ಚೆಲ್ಲಿದ್ದರು. ಜಸ್ ಪ್ರೀತ್ ಮಧ್ಯದಲ್ಲಿ 2 ವಿಕೆಟ್ ಪಡೆದ ಕಾರಣ ವಿಂಡೀಸ್ ರನ್ ಓಟಕ್ಕೆ ಸ್ವಲ್ಪ ಕಡಿವಾಣ ಬಿದ್ದಿತ್ತು.

