ಬಾಗಲಕೋಟೆ: ವಿರಾಟ್ ಹಿಂದೂ ಸಮ್ಮೇಳನದ ಶೋಭಾಯಾತ್ರೆ(Procession) ಯಶಸ್ವಿಯಾಗಿ ಸಂಪನ್ನಗೊಂಡಿದೆ. ಮಾಜಿ ಶಾಸಕ ವೀರಣ್ಣ ಚರಂತಿಮಠ ಸೇರಿ 5 ಸಾವಿಕ್ಕೂ ಅಧಿಕ ಜನರು ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದರು.
ಮಧ್ಯಾಹ್ನ ಬಾಗಲಕೋಟೆ(Bagalkote) ವೆಂಕಟಪೇಟನ ವೆಂಕಟೇಶ್ವರ ದೇವಸ್ಥಾನದ ಬಳಿ ಗೋಪೂಜೆ ಮಾಡುವ ಮೂಲಕ ಶೋಭಾಯಾತ್ರೆಗೆ ಸಂಸದ ಪಿ.ಸಿ ಗದ್ದಿಗೌಡರ್(P. C. Gaddigoudar) ಚಾಲನೆ ಕೊಟ್ಟರು.
ನಗರದ ವೆಂಕಟಪೇಟನ ವೆಂಕಟೇಶ್ವರ ದೇವಸ್ಥಾನದಿಂದ ಕೊತ್ತಲೇಶ್ಚರ ದೇವಸ್ಥಾನ, ಕಿಲ್ಲಾಗಲ್ಲಿ, ಎಂಜಿ ರೋಡ್, ಬಸವೇಶ್ವರ ಸರ್ಕಲ್ ಮಾರ್ಗವಾಗಿ ಬಸವೇಶ್ವರ ವೃತ್ತದಲ್ಲಿ ಅಂತ್ಯಗೊಂಡಿತು. ಇದನ್ನೂ ಓದಿ: ಬಾಗಲಕೋಟೆ ಕಲ್ಲು ತೂರಾಟ ಕೇಸ್ | ಹಿಂದೂ ಯುವಕರ ಬಂಧನ ವೇಳೆ ಪೊಲೀಸರ ಅಡ್ಡಗಟ್ಟಿ ಪ್ರತಿಭಟಿಸಿದ ಮಹಿಳೆಯರು
ಶೋಭಾಯಾತ್ರೆಯಲ್ಲಿ ಮಹಾಪುರುಷರ ಸ್ಥಬ್ಧಚಿತ್ರ, ಮಕ್ಕಳ ವೇಷಭೂಷಣ, ಕರಡಿ ಮಜಲು, ಹಲಗೆ ಮಜಲು, ಡೊಳ್ಳು ಕುಣಿತ ಸೇರಿ ಸ್ವದೇಶಿ ವಾಧ್ಯಗಳು ಗಮನ ಸೆಳೆದವು. ಮಹಿಳೆಯರಿಂದ ಕುಂಭ ಹೊತ್ತು ಮೆರವಣಿಗೆಯಲ್ಲಿ ಭಾಗಿಯಾದರು.
ಬಂಕಾ ಮಸೀದಿ ಬಳಿ ಕಟ್ಟೆಚ್ಚರ ವಹಿಸಲಾಗಿತ್ತು. ಯಾವುದೇ ಗಲಾಟೆ ನಡೆಯದಂತೆ ಮಸೀದಿ ಎದುರು 20 ಅಡಿ ಅಗಲ, 50 ಮೀಟರ್ ಉದ್ದದ ಬಟ್ಟೆಯನ್ನ ಅಳವಡಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸ್ ಭದ್ರತೆ ಹಮ್ಮಿಕೊಳ್ಳಲಾಗಿತ್ತು.
ಫೆ.19 ರಂದು ಶಿವಾಜಿ ಜಯಂತಿ ಮೆರವಣಿಗೆ (Shivaji Jayanti) ವೇಳೆ ರಾತ್ರಿ ಬಂಕಾ ಮಸೀದಿಯಿಂದ ಕಲ್ಲು ತೂರಾಟ (Stone Pelting) ನಡೆದಿತ್ತು. ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದರಿಂದ ಬಾಗಲಕೋಟೆ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.

