ವಾಷಿಂಗ್ಟನ್: ಅಮೆರಿಕ ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ (US Israel Strike) ಇರಾನ್ ಸರ್ವೋಚ್ಛ ನಾಯಕ ಅಯಾತೊಲ್ಲ ಅಲಿ ಖಮೇನಿ (Ayatollah Khamenei) ಹತ್ಯೆಯಾಗಿದ್ದಾರೆ. ಈ ಬಗ್ಗೆ ಇರಾನ್ ಮಾಧ್ಯಮಗಳೂ ಖಚಿತಪಡಿಸಿವೆ. ಈ ಬೆನ್ನಲ್ಲೇ ಇರಾನ್ ಆಡಳಿತ ನಡೆಸಲು ಹೊಸ ನಾಯಕನಿಗಾಗಿ ಹುಡುಕಾಟ ನಡೆದಿದೆ.
ಸುಪ್ರೀಂ ನಾಯಕನ (Supreme Leader) ಸ್ಥಾನಕ್ಕೆ ಖಮೇನಿ 2ನೇ ಪುತ್ರ, ಆಪ್ತ ಶಿಷ್ಯನ ಹೆಸರು ಸೇರಿ ನಾಲ್ವರ ಹೆಸರು ಮುನ್ನೆಲೆಗೆ ಬಂದಿದೆ. ಒಂದು ವೇಳೆ ನಾಯಕನ ಆಯ್ಕೆ ಅಂತ್ಯಗೊಂಡರೆ, ಮುಂದಿನ ಸವಾಲುಗಳೇನು ಅನ್ನೋ ಬಗ್ಗೆಯೂ ಮಾತುಕತೆ ನಡೆಯುತ್ತಿದೆ. ರೇಸ್ನಲ್ಲಿ ಯಾರಿದ್ದಾರೆ ಅಂತ ನೋಡೊದಾದ್ರೆ… ಇದನ್ನೂ ಓದಿ: ಇರಾನ್ ಸರ್ವೋಚ್ಛ ನಾಯಕ ಖಮೇನಿ ಹತ್ಯೆ – ಟ್ರಂಪ್ ಘೋಷಣೆ ಬೆನ್ನಲ್ಲೇ ಖಚಿತಪಡಿಸಿದ ಇರಾನ್
ಮೊಹಮ್ಮದ್ ಗೊಲ್ಲಪಾಯೇಗನಿ
1989 ರಿಂದಲೂ ಖಮೇನಿಯ ಎಲ್ಲಾ ವ್ಯವಹಾರಗಳನ್ನ ನೋಡಿಕೊಳ್ಳುತ್ತಿರವ ಮೊಹಮ್ಮದ್ ಗೊಲ್ಲಪಾಯೇಗನಿ ಖಮೇನಿ ಆಪ್ತ ವಲಯದಲ್ಲಿ ಅತ್ಯಂತ ನಂಬಿಕಾರ್ಹ ವ್ಯಕ್ತಿ. ಶಿಯಾ ಇಸ್ಲಾಮಿಕ್ನ ವಿದ್ವಾಂಸ, ಪರ್ಷಿಯನ್ ಕವಿಯೂ ಆಗಿದ್ದಾರೆ. ಆದ್ರೆ ಗೊಲ್ಲಪಾಯೇಗನಿ ಅವರಿಗೆ ವಯಸ್ಸು 82 ವರ್ಷ ಆಗಿರುವ ಕಾರಣ ದೀರ್ಘಕಾಲದ ನಾಯಕತ್ವ ಕಷ್ಟ ಎಂದು ಹೇಳಲಾಗುತ್ತಿದೆ.
ಅಲಿ ಅಸ್ರರ್ ಹೆಜಾಜಿ
ಖಮೇನಿ ಅವರ ರಾಜಕೀಯ ವ್ಯವಹಾರಗಳ ಮೇಲ್ವಿಚಾರಣೆ ಅಲಿ ಅಸ್ರರ್ ಹೆಜಾಜಿ ಹೆಸರು ಸಹ ಮುಂದಿನ ಸರ್ವೋಚ್ಛ ನಾಯಕನ ರೇಸ್ನಲ್ಲಿದೆ. ಈವರೆಗೆ ಹೆಜಾಜಿ ಅವರು ಖಮೇನಿ ಆಡಳಿತದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾ ಬಂದಿದ್ದಾರೆ. ಇದನ್ನೂ ಓದಿ: Video | ಅಮೆರಿಕ ಸೇನಾ ನೆಲೆಯ ಮೇಲೆ ಮಿಸೈಲ್ ದಾಳಿ; ಯುದ್ಧದ ಭೀಕರತೆ ಬಿಚ್ಚಿಟ್ಟ ಕನ್ನಡಿಗ ಸಫ್ವಾನ್
ಅಲಿರೆಜಾ ಅರಾಫಿ
ಶಿಯಾ ಧರ್ಮೋಪದೇಶಕ, ಬರಹಗಾರನೂ ಆಗಿರುವ ಅಲಿರೆಜಾ ಅರಾಫಿ (65) ಖಮೇನಿ ಅವರ ಅತ್ಯಾಪ್ತ. 2022 ರಿಂದ ಗಾರ್ಡಿಯನ್ ಕೌನ್ಸಿಲ್ನ ಸದಸ್ಯನಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಕಳೆದ 8 ವರ್ಷಗಳಲ್ಲಿ 50 ಮಿಲಿಯನ್ ಜನ ಶಿಯಾಗಳಾಗಿ ಪರಿವರ್ತಿಸಿದ ಖ್ಯಾತಿ ಅರಾಫಿ ಅವರಿಗಿದೆ. ಇದನ್ನೂ ಓದಿ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್ ದಾಳಿ – ನಾಲ್ವರಿಗೆ ಗಾಯ
ಮೊಜ್ತಬಾ ಖಮೇನಿ
ಮೊಜ್ತಬಾ ಖಮೇನಿ ಇರಾನ್ ಸರ್ವೋಚ್ಛ ನಾಯಕ ಖಮೇನಿ ಅವರ 2ನೇ ಪುತ್ರ. ದೇಶದ ಆಡಳಿತದ ಮೇಲೆ ಪ್ರಬಲ ಹಿಡಿತ ಹೊಂದಿದ್ದಾರೆ. ಆದ್ರೆ ಮೊಜ್ತಬಾ ಖಮೇನಿ ಉತ್ತರಾಧಿಕಾರಿಯಾಗುವ ಕುರಿತು ಸಾಕಷ್ಟು ಅನುಮಾನಗಳು ಮೂಡಿವೆ. ಥೀಯೋಲಾಜಿಕಲ್ ಶಾಸ್ತ್ರ ಹೊಂದಿಲ್ಲ ಅನ್ನೋ ಆರೋಪ ಕೂಡ ಇದೆ. ಆದ್ರೆ ಖಮೇನಿ ಬಹಳ ದಿನಗಳ ಹಿಂದೆಯೇ ಮಗನನ್ನು ಮುಂದಿನ ನಾಯಕನಾಗಿ ರೂಪಿಸುವ ಇಂಗಿತ ವ್ಯಕ್ತಪಡಿಸಿದ್ದರು ಎಂದು ಹೇಳಲಾಗಿದೆ.



