ಅಫ್ಘಾನ್‌-ಪಾಕ್‌ ಯುದ್ಧದಲ್ಲಿ ಅಮೆರಿಕ ಮಧ್ಯಪ್ರವೇಶ – ಷರೀಫ್‌, ಅಸಿಮ್ ಮುನೀರ್ ಶ್ರೇಷ್ಠ ನಾಯಕರು ಎಂದ ಟ್ರಂಪ್‌

1 Min Read

ನವದೆಹಲಿ: 2ನೇ ಅವಧಿಯ ಆಡಳಿತದಲ್ಲಿ 8 ಯುದ್ಧಗಳನ್ನು ನಿಲ್ಲಿಸಿರುವುದಾಗಿ ಪದೇ ಪದೇ ಬೆನ್ನುತಟ್ಟಿಕೊಳ್ಳುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump), ಇದೀಗ ಅಫ್ಘಾನ್‌ ಜೊತೆಗಿನ ಸಂಘರ್ಷದಲ್ಲಿ (Pakistan Afghanistan conflict) ಪಾಕಿಸ್ತಾನವನ್ನ ಬೆಂಬಲಿಸಿದ್ದಾರೆ.

ಒಂದು ದಿನದ ಹಿಂದೆಯಷ್ಟೇ ನಡೆದ ವಾಯುದಾಳಿಯಲ್ಲಿ (AirStrike) ಪಾಕಿಸ್ತಾನ ಸುಮಾರು 297 ತಾಲಿಬಾನ್‌ ಸೈನಿಕರು, ಉಗ್ರರನ್ನ ಹತ್ಯೆ ಮಾಡಿತ್ತು. 400 ಕ್ಕೂ ಹೆಚ್ಚು ಮಂದಿ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಬಳಿಕ ಅಫ್ಘಾನಿಸ್ತಾನದ ವಿರುದ್ಧ ಬಹಿರಂಗ ಯುದ್ಧವನ್ನ ಪಾಕಿಸ್ತಾನ ಘೋಷಿಸಿತು. ಇದನ್ನೂ ಓದಿ: Afghanistan-Pakistan conflict | ಪಾಕ್‌ನ F-16 ಜೆಟ್‌ ಉಡೀಸ್‌ – ಬಹಿರಂಗ ಯುದ್ಧ ಘೋಷಿಸಿದ ಶೆಹಬಾಜ್ ಷರೀಫ್‌

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್‌, ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌ (Shehbaz Sharif), ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ (Asim Munir) ಅವರ ರಾಜತಾಂತ್ರಿಕ ದೃಷ್ಟಿಕೋನವನ್ನು ಹಾಡಿಹೊಗಳಿದ್ದಾರೆ. ಇದನ್ನೂ ಓದಿ: ಅಫ್ಘಾನ್ ಮಿಲಿಟರಿ ದಾಳಿಗೆ 55 ಸೈನಿಕರು ಬಲಿ – ಪಾಕ್‌ನಿಂದ ಪ್ರತೀಕಾರದ ದಾಳಿ; 3 ಕಡೆ ಬಾಂಬ್‌ ಸ್ಫೋಟ

ನಾನು ಮಧ್ಯಪ್ರವೇಶಿಸಬಹುದು. ಆದರೆ ನಿಮಗೆಲ್ಲ ತಿಳಿದಿರುವಂತೆ ನಾನು ಪಾಕಿಸ್ತಾನದ ಜೊತೆಗೆ ಇರುತ್ತೇನೆ. ಅಲ್ಲಿ ಒಬ್ಬ ಶ್ರೇಷ್ಠ ಪ್ರಧಾನಿ ಹಾಗೂ ಶ್ರೇಷ್ಠ ಜನರಲ್ ಇದ್ದಾರೆ. ಇಬ್ಬರೂ ಉತ್ತಮ ನಾಯಕರಿದ್ದಾರೆ. ನಾನು ಅಪಾರವಾಗಿ ಗೌರವಿಸುವ ಇಬ್ಬರು ಇದ್ದಾರೆ. ಅಫ್ಘಾನಿಸ್ತಾನದ ಜೊತೆಗಿನ ಗಡಿ ಸಂಘರ್ಷ ಪರಿಸ್ಥಿತಿಯನ್ನು ಪಾಕಿಸ್ತಾನ ಅದ್ಭುತವಾಗಿ ನಿಭಾಯಿಸುತ್ತಿದೆ ಎಂದು ಶ್ಲಾಘಿಸಿದ್ದಾರೆ.

ಪಾಕ್‌ ವಾಯುದಾಳಿಗೂ ಮುನ್ನ ಅಫ್ಘಾನ್‌, ಪಾಕಿಸ್ತಾನ್‌ 55 ಸೈನಿಕರನ್ನ ಕೊಂದಿತ್ತು, 23 ಮಂದಿಯನ್ನ ಸೆರೆ ಹಿಡಿದಿತ್ತು. ಇದು 2021 ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಮರಳಿದ ನಂತರ ನಡೆದಿರುವ ಅತ್ಯಂತ ಮಹತ್ವದ ದಾಳಿಗಳಾಗಿವೆ.

Share This Article