ಅಲ್ಪಾಯುಷಿ ಎಂದು ಭವಿಷ್ಯ ನುಡಿದಿದ್ದಕ್ಕೆ ಹೆದರಿ ನೇಣಿಗೆ ಕೊರಳೊಡ್ಡಿದ್ರಾ ಟೆಕ್ಕಿ?

1 Min Read

ಬೆಂಗಳೂರು: ಅಲ್ಪಾಯುಷಿ ಎಂದು ಭವಿಷ್ಯ ನುಡಿದಿದ್ದ ಜ್ಯೋತಿಷಿ ಮಾತಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಳಾ ಎಂಬ ಅನುಮಾನ ಮೂಡಿಸಿದೆ. ಈ ಘಟನೆ ಬೆಂಗಳೂರು (Bengaluru) ನಗರದ ಬಾಗಲಗುಂಟೆಯ (Bagalgunte) ಎಂಇಐ ಲೇಔಟ್‌ನಲ್ಲಿ ನಡೆದಿದೆ.

ವಿದ್ಯಾಜ್ಯೋತಿ (29) ನೇಣುಬಿಗಿದುಕೊಂಡು ಆತ್ಮಹತ್ಯೆ ಶರಣಾಗಿರುವ ಯುವತಿ. ಖಾಸಗಿ ಕಂಪನಿಯೊಂದರಲ್ಲಿ ಮಾಡುತ್ತಿದ್ದು, ಸದ್ಯ ವರ್ಕ್ ಫ್ರಂ ಹೋಮ್ ಕೆಲಸದಲ್ಲಿದ್ದಳು ಎಂದು ತಿಳಿದುಬಂದಿದೆ. ಇದನ್ನೂ ಓದಿ: All The Best Students – ಇಂದಿನಿಂದ ದ್ವಿತೀಯ PUC ಪರೀಕ್ಷೆ; ಅಕ್ರಮ ತಡೆಗೆ ಕಟ್ಟೆಚ್ಚರ

ಮೃತ ವಿದ್ಯಾಜ್ಯೋತಿಗೆ ಜ್ಯೋತಿಷಿಯೊಬ್ಬರು ನೀನು ಅಲ್ಪಾಯುಷಿ ಎಂದು ಭವಿಷ್ಯ ನುಡಿದಿದ್ದರು. ಹೀಗಾಗಿ ಮನೆಯವರು, ಅಪ್ಪ, ಅಮ್ಮ ಮಗಳ ಆಸೆಯಂತೆ ಎಲ್ಲವನ್ನೂ ಮಾಡಿದ್ದರು. ಜೊತೆಗೆ ಕೊಡಗು ಮೂಲದ ಯುವಕನನ್ನ ಪ್ರೀತಿಸುತ್ತಿದ್ದ ವಿದ್ಯಾ ಇಷ್ಟದಂತೆ ಎರಡೂ ಮನೆಯವರು ಒಪ್ಪಿಗೆ ಸೂಚಿಸಿ, ಮದುವೆ ಮಾಡಿಕೊಡಲು ಒಪ್ಪಿಕೊಂಡಿದ್ದರು.

ಇನ್ನೂ ಜ್ಯೋತಿಷಿ 9 ದಿನ ಪೂಜೆ ಮಾಡಲು ಸೂಚಿಸಿದ್ದರು. ಅದರಂತೆ ಮನೆಯಲ್ಲಿ ಒಂಬತ್ತನೇ ದಿನದ ಪೂಜೆ ಮನೆಯಲ್ಲಿ ನಡೆಯುತ್ತಿತ್ತು. ಕೊನೆಯ ದಿನವಾದ್ದರಿಂದ ಮಾರಮ್ಮ ದೇವರಿಗೆ ತಾಳಿ ಕೊಡುವಂತೆ ಜ್ಯೋತಿಷಿ ತಿಳಿಸಿದ್ದರು. ಮನೆಯಲ್ಲಿ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಊಟದ ನಂತರ ವಿದ್ಯಾ ರೂಂಗೆ ಹೋಗಿದ್ದಳು. ಸಂಜೆ ತಾಯಿ ಕೂಗಿದ್ದರೂ ಕೂಡ ವಿದ್ಯಾ ಹೊರಬಂದಿರಲಿಲ್ಲ. ಕೆಲಸ ಮಾಡುತ್ತಿರಬೇಕೆಂದು ಎಲ್ಲರೂ ಸುಮ್ಮನಾಗಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ತಾಯಿ ದೇವಸ್ಥಾನಕ್ಕೆ ತೆರಳಲು ವಿದ್ಯಾಳನ್ನು ಕರೆದಿದ್ದರು. ಬಾಗಿಲನ್ನು ತೆಗೆಯದೇ ಇದ್ದಾಗ ಅನುಮಾನಗೊಂಡು ಕಿಟಕಿಯಲ್ಲಿ ನೋಡಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಘಟನೆ ಸಂಬಂಧ ಬಾಗಲಗುಂಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹವನ್ನ ವಿಕ್ಟೋರಿಯಾ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.ಇದನ್ನೂ ಓದಿ: ರಾಯಚೂರಿನಲ್ಲಿ ಭೀಕರ ಅಪಘಾತ – ಬೈಕ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು

Share This Article