ಗೋವಾ ಥಾರ್ ಅಪಘಾತ ಪ್ರಕರಣ – 19 ವರ್ಷದ ದೆಹಲಿ ಯುವಕನ ವಿರುದ್ಧ FIR

1 Min Read

– ಕಾರು ಚಲಾಯಿಸುತ್ತಿದ್ದಿದ್ದು ಮಹಿಳೆ, ರಕ್ಷಣೆಗೆ ಸೀಟು ಬದಲು: ಸ್ಥಳೀಯರ ಆರೋಪ

ಪಣಜಿ: ಗೋವಾದಲ್ಲಿ (Goa) ಸಂಭವಿಸಿರುವ ಮಹೀಂದ್ರ ಥಾರ್ ಅಪಘಾತ (Thar Accident) ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಮೊನ್ನೆ ನಡೆದ ಅಪಘಾತದಲ್ಲಿ 65 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ದೆಹಲಿಯ (Delhi) 19 ವರ್ಷದ ಯುವಕನ ವಿರುದ್ಧ ಕೇಸ್ ದಾಖಲಿಸಲಾಗಿದೆ.

ಆದರೆ ಅಪಘಾತದ ವೇಳೆ ಯುವತಿ ಥಾರ್ ಡ್ರೈವ್ ಮಾಡ್ತಿದ್ದು, ಆಕೆಯನ್ನು ಬಚಾವ್ ಮಾಡಲು ಯುವಕ ಹೊಣೆ ಹೊತ್ತಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಥಾರ್ ಜೀಪಿನಲ್ಲಿ ಯುವಕನ ಜೊತೆ ಮೂವರು ಯುವತಿಯರು ಇದ್ದರು. ಐ-20 ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸಾವನ್ನಪ್ಪಿದ್ದು, ಕಾರಿನಲ್ಲಿದ್ದ ಮಗು ಹಾಗು ಮತ್ತಿಬ್ಬರಿಗೆ ಗಾಯವಾಗಿತ್ತು. ಇದನ್ನೂ ಓದಿ: ದೆಹಲಿಗೆ ಇಂದ್ರಪ್ರಸ್ಥ ಹೆಸರನ್ನು ಮರುನಾಮಕರಣ ಮಾಡಿ – ಶಾಗೆ ಬಿಜೆಪಿ ಸಂಸದನಿಂದ ಪತ್ರ

ಡ್ರೈವರ್ ಸೀಟ್ ಅದಲು-ಬದಲು?
ಪೊಲೀಸರ ಎಫ್‌ಐಆರ್‌ನಲ್ಲಿ ಶೌರ್ಯ ಗೋಯಲ್ ಹೆಸರಿದ್ದರೂ, ಸ್ಥಳೀಯ ಪ್ರತ್ಯಕ್ಷದರ್ಶಿಗಳು ಯುವತಿ ಥಾರ್ ಚಲಾಯಿಸುತ್ತಿದ್ದಳು ಎಂದು ಹೇಳಿದ್ದಾರೆ. ಅಪಘಾತವಾದ ತಕ್ಷಣ ಕಾರನ್ನು ಒಬ್ಬ ಯುವತಿ ಚಲಾಯಿಸುತ್ತಿದ್ದಳು. ಡಿಕ್ಕಿಯಾದ ಕೂಡಲೇ ಸೀಟುಗಳನ್ನು ಬದಲಾಯಿಸಲಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಆರೋಪಿಸಿದ್ದಾರೆ. ಇದನ್ನೂ ಓದಿ: ಭರ್ತಿಯಾಗಿದ್ದು 8,157 ಹುದ್ದೆ, 40 ಸಾವಿರ ಎಲ್ಲಿ ಮುಖ್ಯಮಂತ್ರಿಗಳೇ? – ದಾಖಲೆಯೊಂದಿಗೆ ತಿರುಗೇಟು ನೀಡಿದ ಸಿಟಿ ರವಿ

ಸ್ಥಳೀಯರ ಆರೋಫದ ಹಿನ್ನೆಲೆ ಅಂಜುನಾ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಅಪಘಾತಕ್ಕೆ ಮೊದಲು ವಾಹನ ಯಾವ ದಿಕ್ಕಿನಿಂದ ಬಂದಿದೆ ಮತ್ತು ಯಾರು ಚಾಲನೆ ಮಾಡುತ್ತಿದ್ದರು ಎಂಬುದನ್ನು ಪತ್ತೆಹಚ್ಚಲು ಸಿಸಿಟಿವಿ ಆಧರಿಸಿ ತನಿಖೆ ನಡೆಸುತ್ತಿದ್ದಾರೆ.‌ ಇದನ್ನೂ ಓದಿ: ನ್ಯಾಯಾಂಗಕ್ಕೆ ಕಳಂಕ ತರಲು ಬಿಡಲ್ಲ – NCERT ನ್ಯಾಯಾಂಗ ಭ್ರಷ್ಟಾಚಾರ ಅಧ್ಯಾಯದ ಬಗ್ಗೆ ಸುಪ್ರೀಂ ಗರಂ

Share This Article