ಭರ್ತಿಯಾಗಿದ್ದು 8,157 ಹುದ್ದೆ, 40 ಸಾವಿರ ಎಲ್ಲಿ ಮುಖ್ಯಮಂತ್ರಿಗಳೇ? – ದಾಖಲೆಯೊಂದಿಗೆ ತಿರುಗೇಟು ನೀಡಿದ ಸಿಟಿ ರವಿ

2 Min Read

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು (CM Siddaramaiah) 40 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿದ್ದೇನೆ ಎಂದು ಸುಳ್ಳು ಹೇಳಿದ್ದಾರೆ ಎಂದು ಪರಿಷತ್‌ ಬಿಜೆಪಿ ಸದಸ್ಯ ಸಿಟಿ ರವಿ (CT Ravi) ದಾಖಲೆ ಸಮೇತ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ಸರ್ಕಾರ (Congress Government) ಬಂದ ನಂತರದ ಮೂರು ವರ್ಷಗಳಲ್ಲಿ ಭರ್ತಿಯಾಗಿರುವ ಹುದ್ದೆ ಕೇವಲ 8,157. ಇನ್ನೂ 3,081 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಬಾಕಿಯಲ್ಲಿದೆ. ಹಾಗಾದರೆ ಸಿದ್ದರಾಮಯ್ಯನವರ 40,000 ಹುದ್ದೆಗಳು ಯಾರಿಗೆ ಹೋಗಿದೆ ಎಂದು ಸಿಟಿ ರವಿ ಸಾಮಾಜಿಕ ಜಾಲತಾಣದಲ್ಲಿ ದಾಖಲೆಯನ್ನು ಹಂಚಿಕೊಳ್ಳುವ ಮೂಲಕ ಪ್ರಶ್ನಿಸಿದ್ದಾರೆ.


ಸಿಟಿ ರವಿ ಹೇಳಿದ್ದೇನು?
ಸ್ವತಃ ಸರ್ಕಾರದ ಮುಖ್ಯಸ್ಥರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಾಯಿಬಿಟ್ಟರೆ ಬರುವುದು ಹಸಿ ಸುಳ್ಳು. ಕಾಂಗ್ರೆಸ್‌ ಸರ್ಕಾರ 40 ಸಾವಿರ ಸರ್ಕಾರಿ ಹುದ್ದೆಗಳನ್ನು (Jobs) ಭರ್ತಿ ಮಾಡಿರುವುದಾಗಿ ಸಿದ್ದರಾಮಯ್ಯನವರು ಹೇಳಿಕೆ ನೀಡಿದ್ದಾರೆ. ಹಾಗಾದರೆ ಅಧಿವೇಶನದಲ್ಲಿ ಸಿದ್ದರಾಮಯ್ಯನವರು ಹೇಳಿರುವ ಸಂಖ್ಯೆಯ ವಾಸ್ತವ ಏನು?

ಕಾಂಗ್ರೆಸ್ ಸರ್ಕಾರ ಬಂದ ನಂತರದ ಮೂರು ವರ್ಷಗಳಲ್ಲಿ ಭರ್ತಿಯಾಗಿರುವ ಹುದ್ದೆ ಕೇವಲ 8,157. ಇನ್ನೂ 3,081 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಬಾಕಿಯಲ್ಲಿದೆ. ಹಾಗಾದರೆ ಸಿದ್ದರಾಮಯ್ಯನವರ 40,000 ಹುದ್ದೆಗಳು ಯಾರಿಗೆ ಹೋಗಿದೆ?

ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ ಉಳಿದಿವೆ. ಇದಕ್ಕಾಗಿ ಯುವಕರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಸ್ವತಃ ಮುಖ್ಯಮಂತ್ರಿಗಳೇ ಸರ್ಕಾರದ ಪರವಾಗಿ ಸುಳ್ಳು ಹೇಳತೊಡಗಿದರೆ, ಯುವ ಜನರು ಯಾರನ್ನು ನಂಬಬೇಕು?

ಮುಖ್ಯಮಂತ್ರಿಗಳ ಜವಾಬ್ದಾರಿ ಪ್ರಜೆಗಳಿಗೆ ಉತ್ತಮ ಆಡಳಿತ ನೀಡುವುದು. ಆದರೆ ಮುಖ್ಯಮಂತ್ರಿಗಳು ಮಾಡುವುದೇನು? ಸುಳ್ಳು ಹೇಳುವುದು. ರಾಜ್ಯದ ಜನರನ್ನು ಏಮಾರಿಸುವುದೇ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದ ಹವ್ಯಾಸವಾಗಿದೆ. ನುಡಿದಂತೆ ನಡೆದ ಸರ್ಕಾರ ಎಂದು ಸುಳ್ಳು ಹೇಳುತ್ತಾ, ನುಡಿದ ಯಾವುದನ್ನೂ ಈಡೇರಿಸದ ಸರ್ಕಾರ ಇದು. ಈ ಸರ್ಕಾರ ಈಗಾಗಲೇ ಪ್ರಜೆಗಳ ವಿಶ್ವಾಸವನ್ನೇ ಕಳೆದುಕೊಂಡಿದೆ.

Share This Article