ಬಾಗಲಕೋಟೆ ಕಲ್ಲುತೂರಾಟ| ಬಂಧನಕ್ಕೆ ಒಳಗಾದ 7 ಮಂದಿ ಅಮಾಯಕರು: ಬಿಡುಗಡೆ ಮಾಡುವಂತೆ ಮುಸ್ಲಿಮರ ಮನವಿ

1 Min Read

ಬಾಗಲಕೋಟೆ: ಕಲ್ಲು ತೂರಾಟದಲ್ಲಿ(Stone Pelting) ಬಂಧನಕ್ಕೆ ಒಳಗಾದ 7 ಮಂದಿ ಅಮಾಯಕರಾಗಿದ್ದು ಅವರನ್ನು ಬಿಡುಗಡೆ ಮಾಡುವಂತೆ ಜಿಲ್ಲಾಡಳಿತಕ್ಕೆ ಮುಸ್ಲಿಮ್‌ ಮುಖಂಡರು (Muslim Leaders) ಮನವಿ ಮಾಡಿದ್ದಾರೆ.

ಶುಕ್ರವಾರ ನಡೆದ ಶಾಂತಿ ಸಭೆಗೆ ಮುಸ್ಲಿಮರು ಗೈರಾಗಿದ್ದ ಹಿನ್ನೆಲೆಯಲ್ಲಿ ಇಂದು ಜಿಲ್ಲಾಡಳಿತ ನವನಗರದ ಜಿಲ್ಲಾಡಳಿತ ಭವನದಲ್ಲಿ ಉಸ್ತುವಾರಿ ಸಚಿವ ತಿಮ್ಮಾಪೂರ(RB Timmapur) ನೇತೃತ್ವದಲ್ಲಿ ಮತ್ತೆ ಶಾಂತಿ ಸಭೆಯನ್ನು (Peace Meeting) ಆಯೋಜಿಸಿತ್ತು. ಆದರೆ ಇಂದಿನ ಸಭೆಗೆ ಹಿಂದೂ (Hindu) ಮುಖಂಡರು ಹಾಜರಾಗಿರಲಿಲ್ಲ. ಇದನ್ನೂ ಓದಿ: ಬಾಗಲಕೋಟೆಯಲ್ಲಿ ಉದ್ವಿಗ್ನ – ಮುಸ್ಲಿಂ ಮುಖಂಡರು ಗೈರು, ಶಾಂತಿ ಸಭೆ ವಿಫಲ

 

ಈ ಸಭೆಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಮಾತ್ರ ಭಾಗಿಯಾಗಿ ತಮ್ಮ ಅಹವಾಲುಗಳನ್ನ ಮೌಖಿಕವಾಗಿ ಸಚಿವರಿಗೆ ಸಲ್ಲಿಸಿದರು. ಕಲ್ಲು ತೂರಾಟದಲ್ಲಿ ಬಂಧಿತ 8 ಜನರ ಪೈಕಿ ಓರ್ವ ಮಾತ್ರ ಆರೋಪಿ ಇದ್ದಾನೆ. ಉಳಿದ 7 ಜನ ಅಮಾಯಕರಿದ್ದು ಬಿಡುಗಡೆ ಮಾಡುವಂತೆ ಮುಸ್ಲಿಂ ಮುಖಂಡರ ಮನವಿ ಮಾಡಿದರು. ಇದನ್ನೂ ಓದಿ: ಡಿಕೆಶಿ ಬಿಜೆಪಿ ಜೊತೆ ರಾಜಿ ಆಗಿದ್ರೆ ಎಲ್ಲೋ ಇರ್ತಿದ್ರು – ಹೆಚ್‌.ಸಿ ಬಾಲಕೃಷ್ಣ

ಸಭೆಯ ಬಳಿಕ ಆರ್.ಬಿ.ತಿಮ್ಮಾಪೂರ ಮಾತನಾಡಿ, ಜಿಲ್ಲೆಯ ಎಲ್ಲಾ ಸಮುದಾಯದ ಜನರು ಶಾಂತಿ ಸಂಯಮದಿಂದ ಇರಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಕೊಡದಂತೆ ಮುನ್ನಡೆಯಬೇಕೆಂದು ಕೋರಿಕೊಂಡರು.
Share This Article