ಆಸ್ತಿ ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಆಸ್ತಿಗಳ ಹರಾಜು

2 Min Read

ಬೆಂಗಳೂರು: ಜಿಬಿಎ (GBA) ವ್ಯಾಪ್ತಿಯಲ್ಲಿ ಸುಮಾರು 7,000 ಆಸ್ತಿಗಳಿಂದ 437 ಕೋಟಿ ರೂ.ಗಳಷ್ಟು ಆಸ್ತಿ ತೆರಿಗೆ (Property Tax) ಬಾಕಿ ಉಳಿದಿರುವ ಹಿನ್ನೆಲೆ ಇಂದಿನಿಂದ ಆಸ್ತಿ ಹರಾಜು (Property Auction) ಪ್ರಕ್ರಿಯೆ ಆರಂಭವಾಗಿದೆ.

ನಗರ ಪಾಲಿಕೆಗಳ ಜಂಟಿ ಆಯುಕ್ತರು ಈ ಬಗ್ಗೆ ನೋಟಿಸ್ ಜಾರಿ ಮಾಡಿದ್ದು, ಇಂದು ಬೆಳಗ್ಗೆ 11 ಗಂಟೆಯಿಂದ ಹರಾಜು ಪ್ರಕ್ರಿಯೆ ಆರಂಭಗೊಂಡಿದೆ. ಇದನ್ನೂ ಓದಿ: ಮೈಸೂರು | ನರ್ಸಿಂಗ್ ಕಾಲೇಜಿನಲ್ಲಿ ಅಗ್ನಿ ಅವಘಡ – ಧಗಧಗ ಹೊತ್ತಿ ಉರಿದ ಕಟ್ಟಡ

ಪಾವತಿಸದ ತೆರಿಗೆಗಾಗಿ ಬೇಡಿಕೆ ನೋಟಿಸ್‌ಗಳನ್ನು ಜಾರಿ ಮಾಡಲಾಗಿತ್ತು. ಎಸ್‌ಎಂಎಸ್, ಐವಿಆರ್‌ಎಸ್ ಕರೆಗಳು ಹಾಗೂ ಸ್ಥಳೀಯ ಮಟ್ಟದಲ್ಲಿ ಫಾಲೋ ಅಪ್ ಮಾಡಿದರೂ ಪಾವತಿಸಿಲ್ಲ. ಜಪ್ತಿ ಆದೇಶ ಹೊರಡಿಸಿದ ಬಳಿಕವೂ 60 ದಿನಗಳಿಗಿಂತ ಹೆಚ್ಚು ಅವಧಿ ಕಳೆದರೂ ಪಾವತಿ ಆಗದ ಕಾರಣ, ಕೊನೆಯ ಕ್ರಮವಾಗಿ ಹಾಗೂ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2024 ಅನ್ವಯ ಆಸ್ತಿಗಳನ್ನು ಹರಾಜಿಗೆ ಇಡಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ತಾಖತ್ ಇದ್ರೆ ಮೈಸೂರು ಸಿಟಿಯಲ್ಲಿ ಸ್ಪರ್ಧೆ ಮಾಡೋಕೆ ಹೇಳಿ ನೋಡೋಣ: ಯತೀಂದ್ರಗೆ ಪ್ರತಾಪ್ ಸಿಂಹ ಸವಾಲ್‌

ಹರಾಜು ನಡೆಯುವ ಮೊದಲು ಬಾಕಿದಾರರು ತಮ್ಮ ಬಾಕಿ ತೆರಿಗೆಯನ್ನು ಪಾವತಿಸುವ ಅವಕಾಶವಿದ್ದು, ಪಾವತಿ ಮಾಡಿದಲ್ಲಿ ಹರಾಜು ರದ್ದುಪಡಿಸಲಾಗುತ್ತದೆ. ಆದರೆ ಹಲವರು ಇನ್ನೂ ಪಾವತಿಸಿಲ್ಲ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಬಾಕಿ ಇರುವ ಪ್ರಕರಣಗಳಿಂದ ಪ್ರಾರಂಭಿಸಿ, ವಲಯಗಳ ಜಂಟಿ ಆಯುಕ್ತರು ಶನಿವಾರದಂದು ಹರಾಜು ಪ್ರಕ್ರಿಯೆ ನಡೆಸಿದರು. ಇದನ್ನೂ ಓದಿ: ರಸ್ತೆ ಗುಂಡಿಗೆ ಮಗು ಬಲಿ – ರಸ್ತೆ ಸರಿಯಿಲ್ಲ ಅಂತ ಪ್ರತಿಭಟಿಸಿದವರ ವಿರುದ್ಧ FIR

ಇಂದಿನ ಹರಾಜಿನಲ್ಲಿ ಆಸ್ತಿ ಮಾರಾಟವಾಗಿರುವ ವಿವರ:
ಉತ್ತರ ನಗರ ಪಾಲಿಕೆ – 2
ಪೂರ್ವ ನಗರ ಪಾಲಿಕೆ – 5

ಹರಾಜು ಮಾರಾಟ ಪ್ರಕ್ರಿಯೆ ನಿಯಮಿತವಾಗಿ ಮುಂದುವರಿಯಲಿದೆ. ಹರಾಜು ನೋಟಿಸ್ ಪಡೆದಿರುವ ಎಲ್ಲಾ ಬಾಕಿದಾರರು ತಮ್ಮ ಬಾಕಿ ತೆರಿಗೆಯನ್ನು ತಕ್ಷಣ ಪಾವತಿಸುವಂತೆ ಜಿಬಿಎ ಕಂದಾಯ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.

ಯಾವ ಪಾಲಿಕೆಯಲ್ಲಿ ಎಷ್ಟು ಆಸ್ತಿ ತೆರಿಗೆ ಬಾಕಿ?
ನಗರ ಪಾಲಿಕೆ – ಆಸ್ತಿಗಳು – ಒಟ್ಟು ಬಾಕಿ
* ಪೂರ್ವ – 1,615 – 119.90 ಕೋಟಿ
* ಪಶ್ಚಿಮ – 1,504 – 84.23 ಕೋಟಿ
* ಕೇಂದ್ರ – 1,398 – 81.26 ಕೋಟಿ
* ಉತ್ತರ – 1,156 – 79.83 ಕೋಟಿ
* ದಕ್ಷಿಣ – 1,347 – 72.30 ಕೋಟಿ
ಒಟ್ಟು – 7,020 – 437.55 ಕೋಟಿ

Share This Article