ರಂಜಾನ್ | ಇಡೀ ತಿಂಗಳು ಸಂಜೆ 4ಕ್ಕೆ ಕಚೇರಿಯಿಂದ ತೆರಳಲು ಮುಸ್ಲಿಂ ನೌಕರರಿಗೆ ಅವಕಾಶ: ತೆಲಂಗಾಣ ಸರ್ಕಾರ

1 Min Read

ಹೈದರಾಬಾದ್: ರಂಜಾನ್ (Ramadan) ಹಬ್ಬದ ಉಪವಾಸ ಹಿನ್ನೆಲೆ ಮುಸ್ಲಿಂ ನೌಕರರಿಗೆ ತೆಲಂಗಾಣ ಸರ್ಕಾರ (Telangana Govt) ಅನುಕೂಲ ಮಾಡಿಕೊಟ್ಟಿದೆ. ಧಾರ್ಮಿಕ ಆಚರಣೆ ಹಿನ್ನೆಲೆಯಲ್ಲಿ ರಂಜಾನ್ ಇಡೀ ತಿಂಗಳು ಸಂಜೆ 4 ಗಂಟೆಗೆ ಕಚೇರಿಯಿಂದ ತೆರಳಲು ಅವಕಾಶ ಕಲ್ಪಿಸಿದೆ.

ಇದು ಟೀಚರ್‌ಗಳು, ಗುತ್ತಿಗೆ ಕಾರ್ಮಿಕರು, ಹೊರಗುತ್ತಿಗೆ ಸಿಬ್ಬಂದಿ, ಕಾರ್ಪೊರೇಷನ್‌ನಲ್ಲಿ ಕೆಲಸ ಮಾಡುವವರಿಗೆ ಸೇರಿದಂತೆ ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಸಿಬ್ಬಂದಿಗೆ ಇದು ಅನ್ವಯವಾಗಲಿದೆ. ಇಂದಿನಿಂದ ಸುಮಾರು 30 ದಿನಗಳವರೆಗೆ ತೆಲಂಗಾಣದ ಮುಸ್ಲಿಂ ನೌಕರರು ಸಂಜೆ 4 ಗಂಟೆಗೆ ಕಚೇರಿಯಿಂದ ಹೊರಡಬಹುದಾಗಿದೆ. ಇದನ್ನೂ ಓದಿ: AI ಸಹಯೋಗದ ಬಗ್ಗೆ ಸುಂದರ್‌ ಪಿಚೈ ಜೊತೆ ಮೋದಿ ಮಾತುಕತೆ

ಇದಕ್ಕೆ ಬಿಜೆಪಿ ಆಕ್ಷೇಪಿಸಿದ್ದು, ವೋಟ್‌ಗಾಗಿ ಓಲೈಕೆ ಅಂತ ಟೀಕಿಸಿದೆ. ಇತ್ತ, ಮುಸ್ಲಿಮರಿಗೆ ನೀಡಲಾಗಿದ್ದ ಶೇ.5ರಷ್ಟು ಮೀಸಲಾತಿಯನ್ನು ಮಹಾರಾಷ್ಟç ಸರ್ಕಾರ ರದ್ದುಗೊಳಿಸಿದೆ. ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ನೀಡಲಾಗಿದ್ದ ಶೇ.5ರಷ್ಟು ಮೀಸಲಾತಿಯನ್ನು ಕೋರ್ಟ್ ಮಧ್ಯಂತರ ತಡೆ ಆದೇಶದ ಮೇರೆಗೆ ರದ್ದುಗೊಳಿಸಲಾಗಿದೆ. 10 ವರ್ಷಗಳ ಹಿಂದೆ ಅಂದರೆ 2014ರಲ್ಲಿ ಕಾಂಗ್ರೆಸ್-ಎನ್‌ಸಿಪಿ ಸರ್ಕಾರ ಅಲ್ಪಸಂಖ್ಯಾತ ಸಮುದಾಯಕ್ಕೆ ಶೇಕಡಾ 5ರಷ್ಟು ಮೀಸಲಾತಿಯನ್ನು ಘೋಷಿಸಿತ್ತು.

Share This Article