18 ಟ್ರಾಫಿಕ್ ಹಾಟ್‌ಸ್ಪಾಟ್ ಪ್ರದೇಶಗಳಲ್ಲಿ ಸ್ಕೈವಾಕ್ ನಿರ್ಮಾಣಕ್ಕೆ ಜಿಬಿಎ ಪ್ಲ್ಯಾನ್

2 Min Read

ಬೆಂಗಳೂರು: ಟ್ರಾಫಿಕ್ ಹಾಟ್‌ಸ್ಪಾಟ್ ಪ್ರದೇಶಗಳಲ್ಲಿ ಸ್ಕೈವಾಕ್ (Skywalk) ನಿರ್ಮಾಣಕ್ಕೆ ದಕ್ಷಿಣ ನಗರ ಪಾಲಿಕೆ ಪ್ಲ್ಯಾನ್ ಮಾಡಿದೆ. ಔಟರ್ ರಿಂಗ್ ರೋಡ್, ದಕ್ಷಿಣ ಪಾಲಿಕೆ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ, ಪಾದಚಾರಿ ಮಾರ್ಗ ಸುಲಭ ಮಾಡಲು ಪಣ ತೊಟ್ಟಿದೆ. ಬರೋಬ್ಬರಿ 18 ಏರಿಯಾಗಳಲ್ಲಿ ಸ್ಕೈವಾಕ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ.

ಬೆಂಗಳೂರು ನಗರ ಎರಡನೇ ಟ್ರಾಫಿಕ್ ಸಿಟಿ ಅಂತಾ ಕುಖ್ಯಾತಿ ಪಡೆದಿದೆ. ಟ್ರಾಫಿಕ್ ಸಮಸ್ಯೆ, ಸಂಚಾರ ದಟ್ಟಣೆಯಿಂದ ರಸ್ತೆ ದಾಟುವುದು ಕೂಡ ಕಷ್ಟ ಆಗುತ್ತಿದೆ. ಹೀಗಾಗಿ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಸ್ಕೈ ವಾಕ್‌ಗಳ ನಿರ್ಮಾಣಕ್ಕೆ ಪ್ಲ್ಯಾನ್ ಮಾಡುತ್ತಿದೆ. ಪ್ರಾಥಮಿಕ ಹಂತದಲ್ಲಿ 18 ಸ್ಕೈವಾಕ್‌ಗಳನ್ನ ನಿರ್ಮಾಣ ಮಾಡುವ ಕುರಿತು ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ. ಇದನ್ನೂ ಓದಿ: ʻಪವರ್‌ ಫೈಟ್‌ʼ ನಡುವೆ ನಾಳೆಯಿಂದ 27 ಶಾಸಕರ ಫಾರಿನ್ ಟ್ರಿಪ್‌ ಫಿಕ್ಸ್?‌

ಔಟರ್ ರಿಂಗ್ ರೋಡ್, ಐಟಿಬಿಟಿ ಕಂಪನಿಗಳು ಇರುವ ರಸ್ತೆಗಳಲ್ಲಿ ಸ್ಕೈವಾಕ್ ಮಾಡುವುದರ ಜೊತೆಗೆ ಟ್ರಾಫಿಕ್ ಹಾಟ್ ಸ್ಪಾಟ್ ಅಂತಲೇ ಕರೆಯುವ ಪ್ರದೇಶಗಳಲ್ಲಿ ಸ್ಕೈವಾಕ್ ನಿರ್ಮಾಣ ಮಾಡುವ ಸಾಧ್ಯತೆ ಇದೆ. 18 ಏರಿಯಾಗಳಲ್ಲಿ ಸ್ಕೈವಾಕ್ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಿದೆ. ಇದನ್ನೂ ಓದಿ: ಭಾರೀ ಮುಖಭಂಗ – ಪಾಕ್‌ ಸೋಲೋದು ಗೊತ್ತಾಗ್ತಿದ್ದಂತೆ ಮೈದಾನದಿಂದ ಪೇರಿಕಿತ್ತ ಪಿಸಿಬಿ ಅಧ್ಯಕ್ಷ

18 ಕಡೆಗಳಲ್ಲಿ ಸ್ಕೈ ವಾಕ್:
– ಕೋಣನಕುಂಟೆ ಕ್ರಾಸ್ ಬಳಿ ಸ್ಕೈವಾಕ್
– ಕುಮಾರಸ್ವಾಮಿ ಲೇಔಟ್ ಜಂಕ್ಷನ್
– ಯಲಚೇನಹಳ್ಳಿ ಮೆಟ್ರೋ ಸಮೀಪ
– ಸಾರಕ್ಕಿ ಜಂಕ್ಷನ್ ಬಳಿ
– ವಸಂತಪುರ ಕ್ರಾಸ್ ಬಳಿ
– ಎಟುಬಿ ಜಂಕ್ಷನ್ ಗುಬ್ಬಲಾಳ ಜಂಕ್ಷನ್
– ಬೊಮ್ಮನಹಳ್ಳಿ ಸರ್ವಿಸ್ ರಸ್ತೆ
– ರಿಂಗ್ ರೋಡ್ ಮೆಟ್ರೋ ಪಿಲ್ಲರ್ 119 & 130
– ಈಸ್ಟ್ ಎಂಡ್ ಜಂಕ್ಷನ್
– ಬಿಟಿಎಂ ಲೇಔಟ್ 16 ಹಂತ
– ಇಬ್ಬಲೂರು ಜಂಕ್ಷನ್
– ಆರ್.ವಿ ಡೆಂಟಲ್ ಜಂಕ್ಷನ್ ಸೇರಿದಂತೆ ಇನ್ನು ಹಲವೆಡೆ ನೂತನ ಸ್ಕೈವಾಕ್ ನಿರ್ಮಾಣವಾಗಲಿದೆ.

ಎರಡು-ಮೂರು ವರ್ಷಗಳಲ್ಲಿ ಸ್ಕೈವಾಕ್ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಲಾಗುತ್ತಿದ್ದು, ದಕ್ಷಿಣ ನಗರ ಪಾಲಿಕೆ ಪ್ರಸ್ತಾವನೆಗೆ ಸರ್ಕಾರ, ನಗರಾಭಿವೃದ್ಧಿ ಇಲಾಖೆ ಒಪ್ಪಿಗೆ ಸಿಕ್ಕಿ ಸ್ಕೈವಾಕ್ ನಿರ್ಮಾಣದಿಂದ ಸುಲಭ ಸಂಚಾರಕ್ಕೆ ಅನುಕೂಲ ಆಗುತ್ತಾ ಕಾದು ನೋಡಬೇಕಿದೆ. ಇದನ್ನೂ ಓದಿ: ಎಲೆಕ್ಟ್ರಿಕ್ ಬಸ್ ನಿರ್ವಹಣೆ ಬಗ್ಗೆ ಅಸಮಾಧಾನ – ಸಾರಿಗೆ ಸಚಿವರಿಂದ ಮತ್ತೆ ಕೇಂದ್ರಕ್ಕೆ ಪತ್ರ

Share This Article