ವಿಶ್ವಕಪ್‌ನಲ್ಲಿ ಪಾಕ್‌ ವಿರುದ್ಧ ಭಾರತಕ್ಕೆ 16-1 ಮುನ್ನಡೆ

2 Min Read

ಕೊಲಂಬೋ: 61 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಐಸಿಸಿ ವಿಶ್ವಕಪ್‌ನಲ್ಲಿ (ICC World Cup) ಭಾರತ (Team India) ಪಾಕಿಸ್ತಾನದ ವಿರುದ್ಧ 16-1 ಮುನ್ನಡೆ ಸಾಧಿಸಿದೆ.

ಹೌದು, ಇಲ್ಲಿಯವರೆಗೆ ಟಿ20 ವಿಶ್ವಕಪ್‌ ಭಾರತ ಪಾಕ್‌ (Pakistan) ಮಧ್ಯೆ 9 ಪಂದ್ಯ ನಡೆದಿದೆ. ಈ ಪೈಕಿ 8 ಪಂದ್ಯದಲ್ಲಿ ಭಾರತ ಗೆದ್ದರೆ 1 ಪಂದ್ಯವನ್ನು ಮಾತ್ರ ಪಾಕ್‌ ಗೆದ್ದಿದೆ. ಇದನ್ನೂ ಓದಿ: ಪಾಕ್‌ ವಿರುದ್ಧ ದಾಖಲೆಯ ಜಯ, ಇತಿಹಾಸ ನಿರ್ಮಾಣ – ಸೂಪರ್‌ 8ಕ್ಕೆ ಭಾರತ ಎಂಟ್ರಿ

50 ಓವರ್‌ಗಳ ವಿಶ್ವಕಪ್‌ನಲ್ಲಿ ಇಲ್ಲಿಯವರೆಗೆ 9 ಪಂದ್ಯ ನಡೆದಿದ್ದು ಎಲ್ಲಾ ಪಂದ್ಯವನ್ನು ಭಾರತವೇ ಗೆದ್ದಿದೆ. ಹೀಗಾಗಿ ಐಸಿಸಿ ಆಯೋಜನೆಯ ವಿಶ್ವಕಪ್‌ನಲ್ಲಿ ಭಾರತ 16 ಪಂದ್ಯವನ್ನು ಗೆದ್ದುಕೊಂಡಿದೆ.

ದುಬೈನಲ್ಲಿ ನಡೆದ 2021 ಗ್ರೂಪ್‌ ಪಂದ್ಯದಲ್ಲಿ ಭಾರತ 7 ವಿಕೆಟ್‌ ನಷ್ಟಕ್ಕೆ 151 ರನ್‌ ಹೊಡೆದಿತ್ತು. ಈ ಪಂದ್ಯವನ್ನು ಪಾಕಿಸ್ತಾನ 17.5 ಓವರ್‌ಗಳಲ್ಲಿ ಚೇಸ್‌ ಮಾಡಿ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು. ಇದನ್ನೂ ಓದಿ: ಪಾಕ್‌ ವಿರುದ್ಧ ವಿಶಿಷ್ಟ ಸಾಧನೆ ಬರೆದ ಭಾರತ

ಟಿ20 ವಿಶ್ವಕಪ್ ಮುಖಾಮುಖಿ
2007 – ಬೌಲ್ ಔಟ್‌ನಲ್ಲಿ ಗೆದ್ದ ಭಾರತ
2007 – ಭಾರತಕ್ಕೆ 5 ರನ್ ಜಯ(ಫೈನಲ್)
2012 – ಭಾರತಕ್ಕೆ 8 ವಿಕೆಟ್ ಗೆಲುವು
2014 – ಭಾರತಕ್ಕೆ 7 ವಿಕೆಟ್ ಜಯ
2014 – ಭಾರತಕ್ಕೆ 6 ವಿಕೆಟ್ ಗೆಲುವು
2021 – ಪಾಕ್‌ಗೆ 10 ವಿಕೆಟ್ ಜಯ
2022 – ಭಾರತಕ್ಕೆ 4 ವಿಕೆಟ್ ಗೆಲುವು
2024 – ಭಾರತಕ್ಕೆ 6 ರನ್ ಗಜಯ
2026 – ಭಾರತಕ್ಕೆ 61 ರನ್‌ಗಳ ಗೆಲುವು

Share This Article