ಬಾಲಿವುಡ್ ನಟ ರಣವೀರ್ ಸಿಂಗ್‌ಗೆ (Ranveer Singh) ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ (Lawrence Bishnoi) ಮತ್ತೆ ಬೆದರಿಕೆ ಬಂದಿದೆ.
ಈ ಬಾರಿ ಕೇವಲ ರಣವೀರ್ ಸಿಂಗ್ ಮಾತ್ರವಲ್ಲ. ಅವರ ಇಡೀ ಸಿಬ್ಬಂದಿ ಮತ್ತು ಮ್ಯಾನೇಜರ್‌ಗಳನ್ನು ಗುರಿಯಾಗಿಸುವುದಾಗಿ ಗ್ಯಾಂಗ್ ಎಚ್ಚರಿಸಿದೆ. ಇದನ್ನೂ ಓದಿ: ಮಂಗಳೂರು| ಮಾದಕವಸ್ತು ಮಾರಾಟ ಮಾಡಲು ಯತ್ನಿಸಿದ್ದ ಮೂವರು ಪೆಡ್ಲರ್‌ಗಳ ಬಂಧನ
ಫೆಬ್ರವರಿ 10ರಂದು ರಣವೀರ್‌ಗೆ ಮೊದಲ ಬಾರಿಗೆ 1 ಕೋಟಿ ರೂ ಬೇಡಿಕೆಯಿರುವ ವಾಟ್ಸಾಪ್ ವಾಯ್ಸ್ ನೋಟ್ ಬಂದಿತ್ತು. ಈಗ 2ನೇ ವಾಯ್ಸ್ ನೋಟ್ ಬಂದಿದ್ದು, ಮಾತು ತಪ್ಪಿದರೆ ಶಿಕ್ಷೆ ಏನು ಎಂಬುದು ತೋರಿಸುತ್ತೇವೆ ಎಂದು ಬೆದರಿಸಲಾಗಿದೆ. ನಿರ್ದೇಶಕ ರೋಹಿತ್ ಶೆಟ್ಟಿ ಹೆಸರನ್ನೂ ಪ್ರಸ್ತಾಪಿಸಿರುವ ಗ್ಯಾಂಗ್ ಲೈನ್‌ಗೆ ಬನ್ನಿ ಇಲ್ಲದಿದ್ದರೆ ಬಾಲಿವುಡ್ ಪರಿಣಾಮ ಎದುರಿಸಬೇಕಾಗುತ್ತೆ ಎಂದು ಎಚ್ಚರಿಸಿದೆ.
ಸದ್ಯ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ವಾಸಿಸುವ ಅಪಾರ್ಟ್ಮೆಂಟ್‌ಗೆ ಸಶಸ್ತ್ರ ಗಾರ್ಡ್‌ಗಳನ್ನು ನಿಯೋಜಿಸಲಾಗಿದ್ದು, ಮುಂಬೈ ಪೊಲೀಸರು ತನಿಖೆ ಚುರುಕುಗೊಳಸಿದ್ದಾರೆ.ಇದನ್ನೂ ಓದಿ: ಸಾವಿರ ದಿನಗಳಲ್ಲಿ ಸಾವಿರಾರು ಹಗರಣಗಳ ಸರದಾರ ಸಿಎಂ: ಆರ್.ಅಶೋಕ್

