ಚುನಾವಣೆಗೆ ಮೊದಲು ತಮಿಳುನಾಡು ಮಹಿಳೆಯರ ಖಾತೆಗೆ ಬಿತ್ತು 5 ಸಾವಿರ ರೂ.

1 Min Read

ಚೆನ್ನೈ: ತಮಿಳುನಾಡು ಚುನಾವಣೆಗೆ (Tamil Nadu Election) ಮೊದಲೇ ಡಿಎಂಕೆ (DMK) ಸರ್ಕಾರ ಮಹಿಳೆಯರ(Women) ಖಾತೆಗೆ 5 ಸಾವಿರ ರೂ. ಹಣವನ್ನು ಜಮೆ ಮಾಡಿದೆ.

ಕಲೈಗ್ನಾರ್ ಮಗಲಿರ್ ಉರಿಮೈ ತೊಗೈ ಯೋಜನೆಯಡಿ 1.31 ಕೋಟಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ತಲಾ 5 ಸಾವಿರ ರೂ. ಜಮೆಯಾಗಿದೆ. ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಹಣದ ಜೊತೆ ಬೇಸಿಗೆ ಸಮಯದಲ್ಲಿ ನೆರವಾಗಲು 2 ಸಾವಿರ ರೂ. ಹಣವನ್ನು ಹಾಕಲಾಗಿದೆ.

ವಿಧಾನಸಭಾ ಚುನಾವಣೆ ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಏರಿದರೆ ದ್ರಾವಿಡ 2.0 ಸರ್ಕಾರದ ಅಡಿಯಲ್ಲಿ ಫಲಾನುಭವಿಗಳಿಗೆ ನೀಡಲಾಗುವ ತಿಂಗಳ ಮೊತ್ತವನ್ನು 2 ಸಾವಿರ ರೂ.ಗೆ ಏರಿಸಲಾಗುವುದು ಸಿಎಂ ಸ್ಟಾಲಿನ್‌ (Stalin) ಭರವಸೆ ನೀಡಿದ್ದಾರೆ.ಇದನ್ನೂ ಓದಿ:  ಪುರಸಭೆ ಚುನಾವಣೆಯಲ್ಲಿ ಸೋಲುವ ಭಯ – ಕುಕ್ಕರ್‌, ಹಣ ವಾಪಸ್‌ ಕೇಳಿದ ಕಾಂಗ್ರೆಸ್‌ ಅಭ್ಯರ್ಥಿ


ಕಲೈಗ್ನರ್ ಮಗಲಿರ್ ಉರಿಮೈ ತೊಗೈ ಯೋಜನೆಯನ್ನು ಸೆಪ್ಟೆಂಬರ್ 2023 ರಲ್ಲಿ ಪ್ರಾರಂಭಿಸಲಾಗಿತ್ತು. ಆರಂಭದಲ್ಲಿ 1.13 ಕೋಟಿ ಮಹಿಳೆಯರಿಗೆ 1 ಸಾವಿರ ರೂ. ನೀಡಲಾಗಿತ್ತು. ಈಗ ರಾಜ್ಯಾದ್ಯಂತ 1.31 ಕೋಟಿ ಮಹಿಳೆಯರಿಗೆ ಈ ಯೋಜನೆಯನ್ನು ವಿಸ್ತರಿಸಲಾಗಿದೆ.

ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಕಳೆದ ತಿಂಗಳು ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯ ಮೊದಲ ಪಟ್ಟಿಯಲ್ಲಿ ಇದೇ ರೀತಿಯ ಭರವಸೆಯನ್ನು ನೀಡಿದ್ದರು.

Share This Article