ಫೇರ್‌ವೆಲ್‌ ಪಾರ್ಟಿ ಮುಗಿಸಿ ವಾಪಸ್‌ ಆಗ್ತಿದ್ದ ವಿದ್ಯಾರ್ಥಿ ಕಾರು ಡಿಕ್ಕಿ; 6 ವರ್ಷದ ಬಾಲಕ ಸಾವು

1 Min Read

ಲಕ್ನೋ: ಫೇರ್‌ವೆಲ್‌ ಪಾರ್ಟಿ ಮುಗಿಸಿ ವಾಪಸ್‌ ಆಗುತ್ತಿದ್ದ ವಿದ್ಯಾರ್ಥಿ ಕಾರು ಹಲವರಿಗೆ ಡಿಕ್ಕಿ ಹೊಡೆದಿದ್ದು, 6 ವರ್ಷದ ಬಾಲಕ ಮೃತಪಟ್ಟಿದ್ದಾನೆ.

ಲಕ್ನೋದಲ್ಲಿ (Lucknow) ಈ ಘಟನೆ ನಡೆದಿದೆ. 21 ವಯಸ್ಸಿನ ವಿದ್ಯಾರ್ಥಿ ಕಾರಿನಲ್ಲಿ ವಾಪಸ್‌ ಆಗುತ್ತಿದ್ದ. ಈ ವೇಳೆ ಕಾರು ನಿಯಂತ್ರಣ ತಪ್ಪಿ ನಿಲ್ಲಿಸಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ನಂತರ ಐವರ ಮೇಲೆ ಕಾರು ಹರಿದಿದೆ. ಅಪಘಾತದಲ್ಲಿ 6 ವರ್ಷದ ಬಾಲಕ ಸಾವಿಗೀಡಾಗಿದ್ದಾನೆ. ಇತರೆ ನಾಲ್ವರು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಮುಂಬೈನಲ್ಲಿ ತನ್ನ ಲವ್ವರ್‌ನ ಟೀನೇಜ್‌ ಗರ್ಲ್‌ಫ್ರೆಂಡ್‌ ಮುಖಕ್ಕೆ ಗುಂಡು ಹಾರಿಸಿ ಕೊಂದ ಯುವತಿ

ವಿದ್ಯಾರ್ಥಿ ಗೌರವ್ ಸಿಂಗ್ ಕಾರಿನ ಟೈರ್ ಸ್ಫೋಟಗೊಂಡು ಈ ಅಪಘಾತ ಸಂಭವಿಸಿದೆ. ಘಟನೆ ಬೆನ್ನಲ್ಲೇ ವಿದ್ಯಾರ್ಥಿ ಕಾರನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದ. ಪೊಲೀಸರು ವಾಹನವನ್ನು ವಶಕ್ಕೆ ಪಡೆದಿದ್ದಾರೆ. ವೇಗವಾಗಿ ಬಂದ ಕಾರು ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಕೆಳಗೆ ಬಿದ್ದಿದ್ದು, ಅಪಘಾತದ ಪರಿಣಾಮವಾಗಿ ಕಾರು ನಿಯಂತ್ರಣ ತಪ್ಪಿ ರಸ್ತೆಬದಿಯ ಕಡೆಗೆ ತಿರುಗಿದೆ.

ಆ ವಾಹನವು ಹತ್ತಿರದಲ್ಲಿ ನಿಂತಿದ್ದ ಅರ್ಮಾನ್, ಸಾಧನಾ ಪಟೇಲ್, ಆಕೆಯ ತಾಯಿ ಮೀನಾ ದೇವಿ ಮತ್ತು ಸಾಧನಾ ಅವರ ಆರು ವರ್ಷದ ಮಗ ದೀಕ್ಷಾಂತ್ ಮೇಲೆ ಹರಿದಿದೆ. ನಂತರ ಕಾರು ಇ-ರಿಕ್ಷಾ ಮತ್ತು ಆಟೋಗೆ ಡಿಕ್ಕಿ ಹೊಡೆದಿದೆ. ಇ-ರಿಕ್ಷಾ ಚಾಲಕ ಅವಧ್ ಬಿಹಾರಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಕಡ್ಡಾಯವಾಗಿ 24 ಗಂಟೆಯ ಒಳಗಡೆ ವಿದೇಶಿ ವಿದ್ಯಾರ್ಥಿಗಳ ಪ್ರವೇಶದ ವಿವರ ನೀಡಿ – ಶಾಲೆ, ಕಾಲೇಜುಗಳಿಗೆ ಕೇಂದ್ರ ಸೂಚನೆ

ತೀವ್ರವಾಗಿ ಗಾಯಗೊಂಡಿದ್ದ ಬಾಲಕ ದೀಕ್ಷಾಂತ್‌ನನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಬಾಲಕ ಕೇಂದ್ರೀಯ ವಿದ್ಯಾಲಯದಲ್ಲಿ 2 ನೇ ತರಗತಿಯಲ್ಲಿ ಓದುತ್ತಿದ್ದ.

Share This Article