ಬುಮ್ರಾ ಸ್ಟನ್ನಿಂಗ್‌ ಕ್ಯಾಚ್‌ – ಅಕ್ಷರ್‌ ಪಟೇಲ್‌ ಶಾಕ್‌!

1 Min Read

ನವದೆಹಲಿ: ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ವೇಗಿ ಜಸ್‌ಪ್ರೀತ್‌ ಬುಮ್ರಾ (Jasprit Bumrah) ಪಡೆದ ಕ್ಯಾಚ್‌ ನೋಡಿ ಸ್ಪಿನ್ನರ್‌ ಅಕ್ಷರ್‌ ಪಟೇಲ್‌ (Axar Patel) ಶಾಕ್‌ ಆಗಿದ್ದಾರೆ.

ಇನ್ನಿಂಗ್ಸ್‌ನ 13ನೇ ಓವರ್‌ನಲ್ಲಿ ಸ್ಟ್ರೈಕ್‌ನಲ್ಲಿ ಮಲನ್ ಕ್ರುಗರ್ ಬ್ಯಾಟ್‌ನಲ್ಲಿದ್ದರು. ಅಕ್ಷರ್‌ ಪಟೇಲ್‌ ಎಸೆದ ಓವರಿನ 3ನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟಲು ಕ್ರುಗರ್‌ ಪ್ರುಯತ್ನಿಸಿದ್ದರು. ಆದರೆ ಚೆಂಡು ಶಾರ್ಟ್‌ ಫೈನ್‌ ಲೆಗ್‌ ಕಡೆಗೆ ಹೋಯ್ತು.

ಲೆಗ್‌ ಸೈಡ್‌ನಲ್ಲೇ ಫೀಲ್ಡ್‌ ಮಾಡುತ್ತಿದ್ದ ಬುಮ್ರಾ ಓಡಿಕೊಂಡು ಹೋಗಿ ಇನ್ನೇನು ಚೆಂಡು ನೆಲಕ್ಕೆ ಬೀಳುತ್ತದೆ ಎನ್ನುವಾಗ ಡೈವ್‌ ಮಾಡಿ ಕ್ಯಾಚ್‌ ಪಡೆದರು. ಬುಮ್ರಾ ಕ್ಯಾಚ್‌ ಹಿಡಿದಿದ್ದನ್ನು ನೋಡಿ ಅಕ್ಷರ್‌ ಪಟೇಲ್‌ ಒಮ್ಮೆ ಶಾಕ್‌ ಆದರು. ಇದನ್ನೂ ಓದಿ: ಕಿಶನ್‌ ದಾಖಲೆಯ ಫಿಫ್ಟಿ, ಪಾಂಡ್ಯ ಆಲ್‌ರೌಂಡರ್‌ ಆಟ – ನಮೀಬಿಯಾ ವಿರುದ್ಧ 93 ರನ್‌ಗಳ ಭರ್ಜರಿ ಜಯ

ಬುಮ್ರಾ ಉತ್ತಮ ಫೀಲ್ಡರ್‌ ಹೌದು. ಆದರೆ ಡೈವ್‌ ಹೊಡೆದು ಕ್ಯಾಚ್‌ ಹಿಡಿಯುವುದು ಅಪರೂಪ. ಪ್ರಧಾನ ಬೌಲರ್‌ ಆಗಿರುವ ಕಾರಣ ಜಾಸ್ತಿ ಡೈವ್‌ ಹೊಡೆಯುವ ಸಾಹಸಕ್ಕೆ ಬುಮ್ರಾ ಹೈ ಹಾಕುವುದಿಲ್ಲ.

ಇಂದಿನ ಪಂದ್ಯದಲ್ಲಿ ಅಕ್ಷರ್‌ ಪಟೇಲ್‌ 2 ವಿಕೆಟ್‌ ಪಡೆದರೆ ಬುಮ್ರಾ 1 ವಿಕೆಟ್‌ ಪಡೆದರು.

Share This Article