ಮೈಸೂರಿನಲ್ಲಿ ಅಗ್ನಿ ಅವಘಡ – ಸಾಲು ಸಾಲು ಗೋದಾಮುಗಳಿಗೆ ಬೆಂಕಿ

1 Min Read

ಮೈಸೂರು: ಹಳೆ ವಸ್ತುಗಳು ಸಂಗ್ರಹಿಸಿಡುವ ಗುಜರಿಗೆ ಬೆಂಕಿ (Fire) ಬಿದ್ದ ಪರಿಣಾಮ ಸಾಲು ಸಾಲು ಗೋದಾಮುಗಳು (Godowns) ಸುಟ್ಟು ಹೋಗಿರುವ ಘಟನೆ ಮೈಸೂರು (Mysuru) ಹೊರವಲಯದ ಹಳೆ ಕೆಸರೆ ಗ್ರಾಮದಲ್ಲಿ ನಡೆದಿದೆ.

ಮೈಸೂರು ಬೆಂಗಳೂರು ಹೈವೇ ಬಳಿಯ ಹಳೆ ಕೆಸರೆ ಗದಲ್ಲಿನ ಗುಜರಿಗೆ ಬೆಂಕಿ ಬಿದ್ದ ಪರಿಣಾಮ ಬಹಳಷ್ಟು ಗೋದಾಮುಗಳು ಹೊತ್ತಿ ಉರಿಯುತ್ತಿವೆ. ಬೆಳಗ್ಗೆ 3:30ರ ವೇಳೆಗೆ ಬೆಂಕಿ ಬಿದ್ದಿದೆ.

ಸ್ಥಳೀಯರು 4:30 ರ ವೇಳೆಗೆ ಅಗ್ನಿಶಾಮಕ ದಳಕ್ಕೆ ಮಾಹಿತಿ ಕೊಟ್ಟಿದ್ದಾರೆ. ಕೆಲ ಕ್ಷಣದಲ್ಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ನಿರಂತರವಾಗಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ. ಆದರೂ ಇನ್ನೂ ಬೆಂಕಿ ಸಂಪೂರ್ಣವಾಗಿ ನಂದಿಲ್ಲ. ಬಹಳಷ್ಟು ಗೋದಾಮುಗಳು ಇನ್ನೂ ಉರಿಯುತ್ತಲೇ ಇವೆ.

12ಕ್ಕೂ ಹೆಚ್ಚು ವಿವಿಧ ರೀತಿಯ ಗೋದಾಮುಗಳು ಬೆಂಕಿನ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿವೆ. ಅಗ್ನಿಶಾಮಕ ದಳ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದೆ. ಎನ್ ಆರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article