ಎಂ-ಫಾರ್ಮಾ: ಫೆ.7ರಿಂದ ಇಚ್ಛೆ/ಆಪ್ಷನ್ ನಮೂದಿಸಲು ಅವಕಾಶ- ಕೆಇಎ

1 Min Read

ಬೆಂಗಳೂರು: 2025ನೇ ಸಾಲಿನ ಪ್ರಥಮ ಎಂ-ಫಾರ್ಮಾ ಮತ್ತು ಫಾರ್ಮಾ-ಡಿ ಕೋರ್ಸುಗಳ ಪ್ರವೇಶಕ್ಕೆ ರ‍್ಯಾಂಕ್‌ ಪಟ್ಟಿ ಮತ್ತು ಸೀಟ್ ಮ್ಯಾಟ್ರಿಕ್ಸ್ ಅನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಫೆ.7ರಿಂದ ಫೆ.10 ರ ಬೆಳಗ್ಗೆ 11 ರವರೆಗೆ ಇಚ್ಛೆಗಳನ್ನು ಆದ್ಯತಾ ಕ್ರಮದಲ್ಲಿ ನಮೂದಿಸಲು ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ.

ಫೆ.5ರಿಂದ ಫೆ.9ರ ಬೆಳಗ್ಗೆ 10 ಗಂಟೆಯವರೆಗೆ ನಿಗದಿತ ಲಿಂಕ್‌ಗೆ ಹೋಗಿ ವೆರಿಫಿಕೇಷನ್ ಸ್ಲಿಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಆನ್‌ಲೈನ್‌ನಲ್ಲಿ ಅರ್ಜಿಯಲ್ಲಿ ಪರಿಶಿಷ್ಟ ಜಾತಿ ಮೀಸಲಾತಿ ಕೋರಿರುವ ಅಭ್ಯರ್ಥಿಗಳು (ಪರಿಶಿಷ್ಟ ಜಾತಿ-ಎ, ಬಿ ಮತ್ತು ಸಿ) ಒಳಮೀಸಲಾತಿ ಹಾಗೂ ಜಾತಿಪ್ರಮಾಣ ಪತ್ರದ ಆರ್.ಡಿ.ಸಂಖ್ಯೆ ನಮೂದಿಸಿ ವೆರಿಫಿಕೇಷನ್ ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಮಂಗಳವಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಣಕು ಸೀಟು ಹಂಚಿಕೆ ಫಲಿತಾಂಶ ಫೆ.10ರಂದು ಪ್ರಕಟವಾಗಲಿದೆ. ಫೆ.10ರಿಂದ ಫೆ.11ರ ಮಧ್ಯಾಹ್ನದವರೆಗೆ ಆಯ್ಕೆಗಳನ್ನು ಬದಲಿಸಲು ಅವಕಾಶ ನೀಡಲಾಗುತ್ತದೆ. ಫೆ.11ರ ಸಂಜೆ ನೈಜ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಗೊಳ್ಳಲಿದೆ. ಸೀಟು ಆಯ್ಕೆ ಮಾಡಿಕೊಳ್ಳುವ ಅಭ್ಯರ್ಥಿಗಳು ಫೆ.12ರಿಂದ ಫೆ.16ರೊಳಗೆ ಕಾಲೇಜಿನಲ್ಲಿ ಪ್ರವೇಶ ದೃಢೀಕರಣ ಮಾಡಿಸಿಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ.

Share This Article