ಈ ಬಾರಿ ಪ್ರಾದೇಶಿಕ ಯುದ್ಧವಾಗಿರುತ್ತೆ – ಅಮೆರಿಕಕ್ಕೆ ಖಮೇನಿ ಎಚ್ಚರಿಕೆ

1 Min Read

– ಟ್ರಂಪ್‌ ಬೆದರಿಕೆಗೆ ಇರಾನಿಯನ್ನರು ಹೆದರಬೇಡಿ ಅಂತ ಕರೆ

ಟೆಹ್ರಾನ್‌/ವಾಷಿಂಗ್ಟನ್‌: ಟ್ರಂಪ್‌ ಬೆದರಿಕೆಗಳಿಗೆ ಇರಾನಿಯನ್ನರು ಹೆದರದಂತೆ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಕರೆ ಕೊಟ್ಟಿದ್ದಾರೆ. ಜೊತೆಗೆ ಅಮೆರಿಕ ವಿರುದ್ಧ ಮತ್ತೊಂದು ದಾಳಿಯ ಎಚ್ಚರಿಕೆಯನ್ನೂ ನೀಡಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸೇನೆಯನ್ನ (US Army) ಸಜ್ಜುಗೊಳಿಸಿದೆ. ಇತ್ತ ಇರಾನ್‌ನಲ್ಲಿ ಆರ್ಥಿಕ ದಂಗೆ ಮುಂದುವರಿದಿದ್ದು, ಅನೇಕ ರಾಷ್ಟ್ರಗಳು ಒತ್ತಡ ಹೇರಿವೆ. ಈ ಮಧ್ಯೆ ಮಾತನಾಡಿರುವ ಖಮೇನಿ, ಅಮೆರಿಕವು ನಡೆಸುವ ಯಾವುದೇ ಮಿಲಿಟರಿ ದಾಳಿಯು ಪ್ರಾದೇಶಿಕ ಯುದ್ಧಕ್ಕೆ ಪ್ರಚೋದನೆ ನೀಡುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Budget 2026 | ಇರಾನ್‌ಗೆ ಇಲ್ಲ, ಬಾಂಗ್ಲಾ ಅನುದಾನ ಅರ್ಧ ಕಡಿತ

ಅಮೆರಿಕನ್ನರು (Americans) ಯುದ್ಧ ಆರಂಭಿಸಿದರೆ, ಈ ಬಾರಿ ಅದು ಪ್ರಾದೇಶಿಕ ಯುದ್ಧವಾಗಿರುತ್ತದೆ ಅನ್ನೋದು ಅವರಿಗೆ ತಿಳಿದಿರಬೇಕು. ಹಾಗಾಗಿ ಇರಾನಿಯನ್ನರು ಟ್ರಂಪ್‌ ಬೆದರಿಕೆಗಳಿಗೆ ಭಯಪಡಬೇಕಿಲ್ಲ ಎಂದಿದ್ದಾರೆ.

ಇರಾನ್‌ ಮೇಲೆ ಅಮೆರಿಕ ಯುದ್ಧದ ಮುನ್ಸೂಚನೆ ಬಳಿಕ ಖಮೇನಿ ಅವರ ಹೇಳಿಕೆ ಹೊರಬಂದಿದೆ. ಇದನ್ನೂ ಓದಿ: ಅಮೆರಿಕದ ಎಪ್‌ಸ್ಟೀನ್ ಲೈಂಗಿಕ ಕೇಸ್‌ನ ಮತ್ತೊಂದು ಫೈಲ್ ರಿಲೀಸ್; ಟ್ರಂಪ್ ಹೆಸರು, ಮೋದಿ ಇಸ್ರೇಲ್ ಭೇಟಿಯ ಉಲ್ಲೇಖ

Share This Article