ಸೆಂಟ್ರಲ್ ಬಜೆಟ್‌ನಿಂದ ರಾಜ್ಯಕ್ಕೆ ಯಾವ ಅನುಕೂಲ ಆಗಿಲ್ಲ, ಯಾವ ಸ್ಪೀಡ್ ರೈಲೂ ಬರಲ್ಲ- ಡಿಕೆಶಿ

2 Min Read

ರಾಮನಗರ: ಬಜೆಟ್‌ನಿಂದ (Union Budget 2026) ರಾಜ್ಯಕ್ಕೆ ಯಾವ ಅನುಕೂಲ ಆಗಿಲ್ಲ. ಬಜೆಟ್‌ನಿಂದ ನಮ್ಮ ರಾಜ್ಯಕ್ಕೆ ಯಾವುದೇ ದೊಡ್ಡ ಪಾಲು ಬಂದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

ಕೇಂದ್ರ ಬಜೆಟ್ ಘೋಷಣೆ ಬಗ್ಗೆ ಕನಕಪುರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನು ಇಷ್ಟೊತ್ತು ಗಮನಿಸಿದೆ, ಈಗೇನೋ ಯಾವುದೋ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಟ್ಟಿದ್ದಾರೆ. ನಾವು ಮನರೇಗಾ ಹೆಸರಲ್ಲಿ ನಮ್ಮ ಕ್ಷೇತ್ರದಲ್ಲೇ ಮ್ಯಾರಥಾನ್ ಮಾಡಿದ್ದೇವೆ. ಮನರೇಗಾ ಬದಲಾವಣೆ ವಾಪಸ್ ತೆಗೆದುಕೊಳ್ಳಲಿ. ಹಿಂದೆ ಯಾವ ಸ್ಕೀಂ ಇತ್ತು ಅದೇ ಸ್ಕೀಂ ಮುಂದುವರೆಯಲಿ. 60:40 ಯಾವುದೇ ಕಾರಣಕ್ಕೂ ನಡೆಯಲ್ಲ. ಯಾವ ಸರ್ಕಾರವೂ ಬಂಡವಾಳ ಹಾಕಲು ಆಗಲ್ಲ ಎಂದರು. ಇದನ್ನೂ ಓದಿ: 17 ಕ್ಯಾನ್ಸರ್‌ ಔಷಧಿ ದರ ಇಳಿಕೆ, 10,000 ಕೋಟಿಗೆ ‘ಬಯೋಫಾರ್ಮಾ ಶಕ್ತಿ ಮಿಷನ್’‌ – ಆರೋಗ್ಯ ವಲಯಕ್ಕೆ ಸಿಕ್ಕಿದ್ದೇನು?

ಕೃಷಿ ವಲಯದಲ್ಲಿ ಎಐ ಬಳಕೆಗೆ ಒತ್ತು ನೀಡಿರೋ ವಿಚಾರದ ಕುರಿತು ಮಾತನಾಡಿ, ಮನರೇಗಾಗೂ  ಕೂಡಾ ಎಐ (AI) ಬಳಕೆ ಮಾಡಿ ಕೂಲಿ ತೀರ್ಮಾನ ಮಾಡುತ್ತೇವೆ. ವ್ಯವಸಾಯದ ಕಾಲದಲ್ಲಿ ಕೂಲಿ ಕೊಡಲಿಲ್ಲ ಇವರು. ಎಐನಿಂದ ವ್ಯವಸಾಯಕ್ಕೆ ಪ್ರಯೋಜನ ಇಲ್ಲ. ರೈತರ ಬೆಳೆ ರೇಷ್ಮೆಗೆ ಉತ್ತೇಜನ ಕೊಡಬೇಕು. ಸಕ್ಕರೆ ಬೆಲೆ ಯಾಕೆ ಏರಿಕೆ ಮಾಡುತ್ತಿಲ್ಲ, ಇದರಿಂದ ರೈತರಿಗೆ ನಷ್ಟ ಆಗುತ್ತಿದೆ. ಸಕ್ಕರೆ ಬೆಲೆ ಏರಿಸಲಿಲ್ಲ ಅಂದರೆ ಕೋಪರೇಟಿವ್ ಸೆಕ್ಟರ್‌ಗಳು ಮುಚ್ಚುವ ಹಂತಕ್ಕೆ ಬರುತ್ತದೆ. ನಮ್ಮ ಭಾಗದ ಐದು ಜಿಲ್ಲೆಯಲ್ಲಿ ಕಬ್ಬು ಬೆಳೆಯುತ್ತಾರೆ. ರೈತರಿಗೆ ಕೇಂದ್ರ ಏನು ಸಹಾಯ ಮಾಡಿದೆ? 8ರಿಂದ 9 ವರ್ಷ ಆದರೂ ಸಕ್ಕರೆ ಬೆಲೆ ಏರಿಕೆ ಮಾಡಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ರಕ್ಷಣಾ ಬಜೆಟ್‌ ಬರೋಬ್ಬರಿ 7.85 ಲಕ್ಷ ಕೋಟಿಗೆ ಏರಿಕೆ – ಯಾವ ವರ್ಷ ಎಷ್ಟಿತ್ತು?

ಇನ್ನೂ ಬೆಂಗಳೂರಿಗೆ ಹೈಸ್ಪೀಡ್ ರೈಲು ಘೋಷಣೆ ವಿಚಾರದ ಬಗ್ಗೆ ಮಾತನಾಡಿ, ಯಾವ ಹೈಸ್ಪೀಡ್ ರೈಲು ರೀ? ಯಾವ ಸ್ಪೀಡ್ ರೈಲೂ ಬರಲ್ಲ. 50:50 ಅನುಪಾತದಲ್ಲಿ ಮಾಡಲು ಆಗಲ್ಲ, ಬೇಕಿದ್ರೆ 90:10 ಕೊಡಲಿ. ಆಗ ನಾವು 10% ನಾವು ಕೊಡುತ್ತೇವೆ. ಬೇರೆ ರಾಜ್ಯಗಳಿಗೆ ಅವರೇ ಮಾಡಿಕೊಟ್ಟಿದ್ದಾರೆ. ನಮ್ಮ ರಾಜ್ಯಕ್ಕೂ 90% ಮಾಡಲಿ. ಬೆಂಗಳೂರು ಬಗ್ಗೆ ಅತಿಹೆಚ್ಚು ನಿರೀಕ್ಷೆ ಇತ್ತು. ಮೋದಿಯವರೇ ಇದನ್ನ ಗ್ಲೋಬಲ್ ಸಿಟಿ ಅಂತ ಹೇಳಿದರು. ಆ ಗ್ಲೋಬಲ್ ಸಿಟಿಗೆ ಏನು ಒತ್ತು ಕೊಟ್ಟಿದ್ದಾರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಮಾತನಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಲಕ್‌ಪತಿ ದೀದಿಯಿಂದ ‘SHE-ಮಾರ್ಟ್‌’ವರೆಗೆ – ಬಜೆಟ್‌ನಲ್ಲಿ ಗ್ರಾಮೀಣ ಮಹಿಳೆಯರಿಗೆ ಒತ್ತು

Share This Article