ಯಾವುದೇ ಸಾಲವಿಲ್ಲ, ಶತ್ರುಗಳಿಲ್ಲ.. ಐಟಿ ಅಧಿಕಾರಿಗಳ ಒತ್ತಡ ಇತ್ತು: ಸಿಜೆ ರಾಯ್ ಬಗ್ಗೆ ಸಹೋದರ ಮಾತು

1 Min Read

ಬೆಂಗಳೂರು: ಸಿ.ಜೆ.ರಾಯ್‌ಗೆ (C.J.Roy) ಯಾವುದೇ ಸಾಲವಿಲ್ಲ, ಶತ್ರುಗಳಿಲ್ಲ. ಆದರೆ, ಐಟಿ ಅಧಿಕಾರಿಗಳ ಒತ್ತಡ ಇತ್ತು ಎಂದು ಸಹೋದರನ ಬಗ್ಗೆ ಸಿ.ಜೆ.ಬಾಬು ಮಾತನಾಡಿದ್ದಾರೆ.

‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ನಿನ್ನೆ ಬೆಳಗ್ಗೆ 10 ಗಂಟೆಗೆ ರಾಯ್ ಕರೆ ಮಾಡಿದ್ದರು. ಒತ್ತಡ ಜಾಸ್ತಿ ಆಗ್ತಿದೆ ಅಂತ ಹೇಳಿದ್ದರು. ಅವರಿಗೆ ಐಟಿ ಒತ್ತಡ ಇತ್ತು. ಕುಟುಂಬದ ಕಡೆಯಿಂದ ದೂರು ನೀಡುವ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಬಾಬು ತಿಳಿಸಿದ್ದಾರೆ. ಇದನ್ನೂ ಓದಿ: ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ – ಅಶೋಕ್ ನಗರ ಪೊಲೀಸರಿಂದ ಯುಡಿಆರ್ ದಾಖಲು

ಕಂಪನಿ ಲಾಸ್ ಅಲ್ಲಿ ಇರಲಿಲ್ಲ. ನಮ್ಮ ಕಂಪನಿ ಲಾಭದಲ್ಲಿ ಇತ್ತು. ವಿದೇಶಕ್ಕೆ ತೆರಳುವ ಮೊದಲು ಸಿಜೆ ರಾಯ್ ಅವರನ್ನು ಭೇಟಿ ಮಾಡಿದ್ದೆ. ಯಾವುದೂ ಸಾಲವಿಲ್ಲ, ಶತ್ರುಗಳಿಲ್ಲ.. ಐಟಿ ಫ್ರೆಷರ್ ಅಷ್ಟೇ ಇತ್ತು ಎಂದು ಪ್ರತಿಕ್ರಿಯಿಸಿದ್ದಾರೆ.

ತಮ್ಮ ಕಂಪನಿ ಮೇಲೆ ಐಟಿ ದಾಳಿ ವೇಳೆ ಪಿಸ್ತೂಲ್‌ನಿಂದ ಎದೆಗೆ ಗುಂಡು ಹಾರಿಸಿಕೊಂಡು ಖ್ಯಾತ ಉದ್ಯಮಿ ಹಾಗೂ ಕಾನ್ಫಿಡೆಂಟ್ ಕಂಪನಿ ಮುಖ್ಯಸ್ಥ ಸಿ.ಜೆ.ರಾಯ್ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದನ್ನೂ ಓದಿ: ಹಣ ನೀಡಿ ನನ್ನ ಬದುಕಿಗೆ ದಾರಿ ದೀಪವಾಗಿದ್ರಿ, ನಿಮ್ಮ ಋಣ ಮರೆಯೋಕಾಗಲ್ಲ – ಸಿಜೆ ರಾಯ್ ನೆನೆದು ಹನುಮಂತು ಭಾವುಕ

ರಾಯ್ ಅವರು ಬೆಂಗಳೂರು, ಕೇರಳ, ತಮಿಳುನಾಡು ಸೇರಿದಂತೆ ದೇಶ-ವಿದೇಶಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿದ್ದರು. ಆದಾಯ ತೆರಿಗೆ ವಿಚಾರವಾಗಿ 2 ತಿಂಗಳಿಂದ ಕೇರಳ ಐಟಿ ಅಧಿಕಾರಿಗಳು ರಾಯ್ ಕುರಿತು ತನಿಖೆ ನಡೆಸುತ್ತಿದ್ದರು. ಕಳೆದ ಮೂರು ದಿನಗಳಿಂದ ಬೆಂಗಳೂರಿನ ಕಚೇರಿ ಮೇಲೆ ದಾಳಿ ನಡೆದಿತ್ತು. ಈ ವೇಳೆ ರಾಯ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Share This Article