NCP ಎರಡು ಬಣಗಳ ವಿಲೀನಕ್ಕೆ ನಿರ್ಧರಿಸಿದ್ದ ಅಜಿತ್ ಪವಾರ್: ತೆರೆಮರೆಯ ರಾಜಕೀಯ ಗುಟ್ಟು ಬಿಚ್ಚಿಟ್ಟ ಆಪ್ತ ಕಿರಣ್ ಗುಜಾರ್

2 Min Read

ಮುಂಬೈ: ಇತ್ತೀಚೆಗೆ ವಿಮಾನ ದುರಂತದಲ್ಲಿ ಮೃತರಾದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಅವರು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (NCP) ಎರಡು ಬಣಗಳನ್ನು ಒಟ್ಟುಗೂಡಿಸಲು ನಿರ್ಧಾರ ಮಾಡಿದ್ದರು. ವಿಲೀನ ಘೋಷಣೆಗೆ ಕೆಲವೇ ದಿನಗಳ ಬಾಕಿ ಇತ್ತು ಎಂದು ಕಿರಣ್ ಗುಜಾರ್ (Kiran Gujar) ಹೇಳಿದ್ದಾರೆ.

1980 ರ ದಶಕದ ಮಧ್ಯಭಾಗದಿಂದ ಅಜಿತ್ ಪವಾರ್ ಅಪ್ತ ಸ್ನೇಹಿತನಾಗಿರುವ ಕಿರಣ್ ಗುಜಾರ್, ವಿಮಾನ ದುರಂತದ ಕೇವಲ ಐದು ದಿನಗಳ ಮೊದಲು ಅಜಿತ್ ಪವಾರ್ ಪಕ್ಷದ ವಿಲೀನದ ಬಗ್ಗೆ ತಮ್ಮೊಂದಿಗೆ ಮಾತನಾಡಿದ್ದರು ಎಂದು ತಿಳಿಸಿದ್ದಾರೆ. ಎರಡೂ ಬಣಗಳನ್ನು ವಿಲೀನಗೊಳಿಸಲು ಅವರು 100% ಉತ್ಸುಕರಾಗಿದ್ದರು. ಸಂಪೂರ್ಣ ಪ್ರಕ್ರಿಯೆಯು ಪೂರ್ಣಗೊಂಡಿದೆ. ಮುಂದಿನ ಕೆಲವು ದಿನಗಳಲ್ಲಿ ವಿಲೀನ ನಡೆಯಲಿದೆ ಎಂದು ನನಗೆ ಹೇಳಿದ್ದರು ಎಂದು ಗುಜಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ಡಿಸಿಎಂ ಸ್ಥಾನಕ್ಕೆ ಅಜಿತ್ ಪವಾರ್‌ ಪತ್ನಿ ಸುನೇತ್ರಾ ಹೆಸರು ಪ್ರಸ್ತಾಪಿಸಲು ಎನ್‌ಸಿಪಿ ಚಿಂತನೆ

ಇತ್ತೀಚೆಗೆ ನಡೆದ ಚುನಾವಣೆಯ ಸಂದರ್ಭದಲ್ಲಿ ಆಯ್ದ ಪತ್ರಕರ್ತರೊಂದಿಗೆ ಅಜಿತ್ ಪವಾರ್ ತಮ್ಮ ಉದ್ದೇಶವನ್ನು ಹಂಚಿಕೊಂಡಿದ್ದರು.‌ ಈ ಚುನಾವಣೆಯಲ್ಲಿ ಎರಡೂ ಎನ್‌ಸಿಪಿ ಬಣಗಳು ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದವು. ತಮ್ಮ ಚಿಕ್ಕಪ್ಪ ಶರದ್ ಪವಾರ್ ಆರೋಗ್ಯವಾಗಿರುವಾಗಲೇ ವಿಲೀನವನ್ನು ಅಧಿಕೃತಗೊಳಿಸಬೇಕೆಂದು ಅಜಿತ್ ಹೇಳಿದ್ದರು. ಜನವರಿ 15 ರಂದು ಪುಣೆ ಮತ್ತು ಪಿಂಪ್ರಿ ಚಿಂಚ್‌ವಾಡ್‌ನಲ್ಲಿ ನಡೆದ ಚುನಾವಣೆಗಳಲ್ಲಿ ಯಶಸ್ವಿಯಾಗಿ ಸ್ಪರ್ಧಿಸಿದ ನಂತರ, ಮುಂದಿನ ತಿಂಗಳು ನಡೆಯಲಿರುವ ಜಿಲ್ಲಾ ಪರಿಷತ್ ಚುನಾವಣೆಗೆ ಎರಡೂ ಬಣಗಳು ತಮ್ಮ ಮೈತ್ರಿಯನ್ನು ಮುಂದುವರಿಸಲು ನಿರ್ಧರಿಸಿದವು. ವಿಲೀನಗೊಂಡ ಪಕ್ಷ ಮತ್ತು ಅದರ ಭವಿಷ್ಯದ ಕಾರ್ಯಚಟುವಟಿಕೆಗೆ ಅಜಿತ್ ಪವಾರ್ ಈಗಾಗಲೇ ಸ್ಪಷ್ಟ ಮಾರ್ಗಸೂಚಿಯನ್ನು ಸಿದ್ಧಪಡಿಸಿದ್ದಾರೆ ಎಂದು ಹೇಳಿದ್ದಾರೆ.

ಶರದ್ ಪವಾರ್ ಅವರೊಂದಿಗೆ ಅಜಿತ್ ಈ ವಿಷಯವನ್ನು ಚರ್ಚಿಸಿದ್ದಾರೆ. ಶರದ್ ಪವಾರ್, ಸುಪ್ರಿಯಾ ಸುಳೆ ಮತ್ತು ಇತರ ಹಿರಿಯ ನಾಯಕರೊಂದಿಗೆ ಸಕಾರಾತ್ಮಕ ಮಾತುಕತೆಗಳು ನಡೆದಿವೆ. ಶರದ್ ಪವಾರ್ ವಿಲೀನವನ್ನು ಅನುಮೋದಿಸುತ್ತಿದ್ದರು ಎಂಬ ಬಲವಾದ ಸೂಚನೆಗಳಿವೆ ಎಂದು ಅಜಿತ್ ಪವಾರ್ ಹೇಳಿದ್ದರು. ಆದರೆ, ವಿಮಾನ ದುರಂತದಲ್ಲಿ ಮೃತರಾದರು ಎಂದರು ಗುಜಾರ್ ಹೇಳಿದ್ದಾರೆ. ಗುಜಾರ್ ಹೇಳಿಕೆಯಿಂದಾಗಿ ಎನ್‌ಸಿಪಿ ಬಣಗಳ ವಿಲೀನ ಊಹಾಪೋಹಗಳಿಗೆ ಈಗ ಮತ್ತಷ್ಟು ಬಲ ಬಂದಿದೆ. ಇದನ್ನೂ ಓದಿ: ಇಂದು ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ ಅಂತ್ಯಕ್ರಿಯೆ – ಅಂತಿಮ ದರ್ಶನಕ್ಕೆ ಜನಸ್ತೋಮ

Share This Article