-ಸಿದ್ದಗಂಗಾ ಮಠಕ್ಕೆ ನೀರು ಹರಿಸೋ ಹೊನ್ನೆನಹಳ್ಳಿ ಪಂಪ್ ಹೌಸ್ನಿಂದ ಬಾಕಿಯಿದ್ದ ಬಿಲ್
ತುಮಕೂರು: ಸಿದ್ದಗಂಗಾ ಮಠಕ್ಕೆ ನೀರು ಹರಿಸುವ ಹೊನ್ನೆನಹಳ್ಳಿ ಪಂಪ್ ಹೌಸ್ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿತ್ತು. ಈ ಬಗ್ಗೆ `ಪಬ್ಲಿಕ್ ಟಿವಿ’ ಸುದ್ದಿ ಬಿತ್ತರಿಸಿತ್ತು. ವರದಿ ಬೆನ್ನಲ್ಲೇ ಎಚ್ಚೆತ್ತ ಕೆಐಎಡಿಬಿ ಬಾಕಿ ಉಳಿದಿದ್ದ 1.96 ಕೋಟಿ ರೂ. ಬಿಲ್ ಪಾವತಿಸಿದೆ.
ಗುರುವಾರ (ಜ.29) ಬಿಲ್ ಬಾಕಿ ಉಳಿದ ಬಗ್ಗೆ `ಪಬ್ಲಿಕ್ ಟಿವಿ’ ನಿರಂತರವಾಗಿ ಸುದ್ದಿ ಬಿತ್ತರಿಸಿತ್ತು. ಅಲ್ಲದೇ ಇದರಿಂದ ಸಿದ್ದಗಂಗಾ ಮಠದಲ್ಲಿ ನೀರಿನ ಹಾಹಾಕಾರ ಉಂಟಾಗುವ ಆಗುವ ಸಾಧ್ಯತೆಯಿದೆ ಎಂದು ತಿಳಿಸಿತ್ತು. ವರದಿ ಬೆನ್ನಲ್ಲೇ ಕೆಐಎಡಿಬಿ ಮಧ್ಯಾಹ್ನ ಹೊತ್ತಿಗೆ ಬಾಕಿ ಉಳಿದ ವಿದ್ಯುತ್ ಬಿಲ್ನ್ನು ಚೆಕ್ ಮೂಲಕ 1.96 ಕೋಟಿ ರೂ. ಬೆಸ್ಕಾಂಗೆ ಪಾವತಿ ಮಾಡಿದೆ. ಹಣ ಸಂದಾಯ ಆಗುತ್ತಿದ್ದಂತೆ ಬೆಸ್ಕಾಂ ಸಿಬ್ಬಂದಿ ಹೊನ್ನೆನಹಳ್ಳಿ ಪಂಪ್ ಹೌಸ್ಗೆ ತೆರಳಿ ವಿದ್ಯುತ್ ಸಂಪರ್ಕ ಕೊಟ್ಟಿದ್ದಾರೆ. ಇದನ್ನೂ ಓದಿ: ಸಿದ್ದಗಂಗಾ ಮಠಕ್ಕೆ ಎದುರಾಗುತ್ತಾ ನೀರಿನ ಹಾಹಾಕಾರ? – 10 ಸಾವಿರ ಮಕ್ಕಳು, ಭಕ್ತಾದಿಗಳಿಗೆ ನೀರು ನೀಡಲು ಲೆಕ್ಕಾಚಾರ
ಪಂಪ್ ಹೌಸ್ಗೆ ವಿದ್ಯುತ್ ಸಂಪರ್ಕ ಇಲ್ಲದೆ ಇದ್ದರಿಂದ ಸಿದ್ದಗಂಗಾ ಮಠಕ್ಕೆ ನೀರು ಹರಿಸಲು ತೊಂದರೆ ಆಗಿತ್ತು. ಕಳೆದ 7-8 ತಿಂಗಳಿAದ ಬಂದ್ ಆಗಿದ್ದ ಪಂಪ್ ಹೌಸ್ ಇದೀಗ ಓಪನ್ ಆಗಿದೆ. ಸದ್ಯ ಪಂಪ್ ಹೌಸ್ನಲ್ಲಿ ಕೆಲವು ತಾಂತ್ರಿಕ ತೊಂದರೆ ಇರುವುದರಿಂದ ಶುಕ್ರವಾರ (ಜ.30) ದೇವರಾಯಪಟ್ಟಣ ಕೆರೆಗೆ ನೀರು ಹರಿಯಲಿದೆ.

