ಬೆಳಗಾವಿ: ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ಸರಣಿ ಅಪಘಾತ (Serial Accident) ಸಂಭವಿಸಿ ಭಾರೀ ಅನಾಹುತ ತಪ್ಪಿದ ಘಟನೆ ಬೆಳಗಾವಿ ತಾಲೂಕಿನ ಬಡೇಕೊಳ್ಳಮಠದ ಬಳಿ ನಡೆದಿದೆ.
ಐದು ವಾಹನಗಳ ನಡುವೆ ಸರಣಿ ಅಪಘಾತವಾಗಿದ್ದರೂ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಬಟ್ಟೆತುಂಬಿದ ಕಂಟೇನರ್ ವಾಹನ ಮುಗುಚಿ ಬಿದ್ದ ಪರಿಣಾಮ ಹಿಂದುಗಡೆ ಬರುತ್ತಿದ್ದ ತೈಲ ತುಂಬಿದ ಟ್ಯಾಂಕರ್ ಸರ್ವೀಸ್ ರಸ್ತೆ ದಾಟಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಜಮೀನಿಗೆ ನುಗ್ಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ 40 ಸಾವಿರದ ಉದ್ಯೋಗಕ್ಕೆ ಗುಡ್ಬೈ – ಊರಿನಲ್ಲಿ ಅಡಿಕೆ ಕೊನೆಕಾರನ ಕೆಲಸಕ್ಕೆ ಜೈ
ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಲ್ಲದೇ ಸಾರಿಗೆ ಬಸ್, ಕಾರು ಹಾಗೂ ಟಾಟಾ ಏಸ್ ನಡುವೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದನ್ನೂ ಓದಿ: ಐತಿಹಾಸಿಕ ಲಕ್ಕುಂಡಿಯಲ್ಲಿ ಅಪರೂಪದ ತ್ರಿಮುಖ ನಾಗಶಿಲೆ ಪತ್ತೆ

