ನಾನು ರಾಜೀನಾಮೆ ನೀಡಿಲ್ಲ, ಆ ಪ್ರಶ್ನೆಯೇ ಉದ್ಭವ ಆಗಿಲ್ಲ: ಕೆ.ಜೆ ಜಾರ್ಜ್ ಸ್ಪಷ್ಟನೆ

1 Min Read

ಬೆಂಗಳೂರು: ನಾನು ರಾಜೀನಾಮೆ ನೀಡಿಲ್ಲ, ಆ ಪ್ರಶ್ನೆಯೇ ಉದ್ಭವವಾಗಿಲ್ಲ ಎಂದು ತಮ್ಮ ರಾಜೀನಾಮೆ ವದಂತಿಗೆ ಇಂಧನ ಸಚಿವ ಕೆ.ಜೆ ಜಾರ್ಜ್ (KJ George) ವಿಧಾನಸಭೆಯಲ್ಲಿ (Assembly) ಸ್ಪಷ್ಟನೆ ಕೊಟ್ಟಿದ್ದಾರೆ.

ಕಲಾಪ ನಡೆಯುತ್ತಿರುವಾಗ ವಿಚಾರ ಎತ್ತಿದ ಶಾಸಕ ಸುನೀಲ್ ಕುಮಾರ್, ಜಾರ್ಜ್ ಅವರು ರಾಜೀನಾಮೆ ಕೊಟ್ಟಿದ್ದಾರೆ ಅಂತ ಮಾಧ್ಯಮಗಳಲ್ಲಿ ಬರ್ತಿದೆ. ಸದನದಲ್ಲೇ ಸಚಿವ ಜಾರ್ಜ್ ಇದ್ದಾರೆ. ಸಿಎಂ ಮಗನ ಹಸ್ತಕ್ಷೇಪ ಜಾಸ್ತಿ ಆಗಿದೆ ಅಂತ ರಾಜೀನಾಮೆ ಕೊಟ್ಟಿದ್ದಾರೆ ಅಂತ ಬರ್ತಿದೆ, ಜಾರ್ಜ್ ಅವರು ಸ್ಪಷ್ಟನೆ ಕೊಡಿ ಅಂತ ಆಗ್ರಹಿಸಿದ್ರು. ಇದನ್ನೂ ಓದಿ: ಹರಿಪ್ರಸಾದ್ ರಿಂದ ವಿವಾದಾತ್ಮಕ ಮಾತು – ವಿಧಾನ ಪರಿಷತ್ ‌ಕಲಾಪವೇ ಬಲಿ

ಈ ವೇಳೆ ತಮ್ಮ ರಾಜೀನಾಮೆ ವದಂತಿ ಬಗ್ಗೆ ಸಚಿವ ಜಾರ್ಜ್ ಸ್ಪಷ್ಟನೆ ಕೊಟ್ರು. ನಾನು ರಾಜೀನಾಮೆ ಕೊಟ್ಟಿಲ್ಲ. ಟಿವಿಯವ್ರಿಗೆ ನಾನು ಹೇಳಿದೀನಾ? ರಾಜಿನಾಮೆ ಕೊಟ್ಟಿದೀನಿ ಅಂತ? ಸುನೀಲ್ ಕುಮಾರ್ ಟಿವಿಯಲ್ಲಿ ನೋಡಿರೋದಾಗಿ ಹೇಳಿದ್ದಾರೆ. ಅವರೇ ಸೃಷ್ಟಿ ಮಾಡಿದ್ದಾರೆ, ನಾನು ಎಲ್ಲಿ ರಾಜೀನಾಮೆ ಕೊಟ್ಟಿದೀನಿ ಅಂತ ತೋರಿಸಲಿ ಅವರು. ನಾನು ರಾಜೀನಾಮೆ ಕೊಟ್ಟಿಲ್ಲ, ಆ ಪ್ರಶ್ನೆ ಉದ್ಭವ ಆಗಿಲ್ಲ, ಆಥರ ಏನಿಲ್ಲ. ನನಗೆ ಸಿಎಂ ಮೇಲೆ ಸಂಪೂರ್ಣ ವಿಶ್ವಾಸ ಇದೆ. ನನಗೆ ಗೊತ್ತಿಲ್ಲದ ವಿಚಾರ ಇದು. ಸಿಎಂ ಜತೆ ನಾವೆಲ್ಲ ಇದೀವಿ ಅಂತ ಕೆಜೆ ಜಾರ್ಜ್ ಸ್ಪಷ್ಟೀಕರಣ ಕೊಟ್ರು. ಇದನ್ನೂ ಓದಿ: ಕರ್ನಾಟಕ ಪೊಲೀಸರಿಗೆ ರಜೆ ಭಾಗ್ಯ – ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ಸಾಂದರ್ಭಿಕ ರಜೆ 

Share This Article