ದೆಹಲಿ ಶಾಲೆಗಳು, ಪಂಜಾಬ್-ಹರಿಯಾಣ ಸಚಿವಾಲಯಕ್ಕೆ ಬಾಂಬ್ ಬೆದರಿಕೆ

1 Min Read

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ (Delhi) ನಾಲ್ಕು ಖಾಸಗಿ ಶಾಲೆಗಳಿಗೆ (School) ಬಾಂಬ್ ಬೆದರಿಕೆ ಬಂದಿದ್ದು, ಪಂಜಾಬ್- ಹರಿಯಾಣ ಸಚಿವಾಲಯಕ್ಕೂ (Punjab-Haryana Ministry) ಇದೇ ರೀತಿಯ ಬೆದರಿಕೆ ಬಂದಿದೆ. ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿದ್ದು, ತನಿಖೆ ಮುಂದುವರಿದಿದೆ.

ಲಾರೆಟೋ ಕಾನ್ವೆಂಟ್ ಶಾಲೆಗೆ (ದೆಹಲಿ ಕ್ಯಾಂಟ್) ಬೆಳಗ್ಗೆ 8:22ಕ್ಕೆ, ಡಾನ್ ಬಾಸ್ಕೊ ಶಾಲೆಗೆ (ಸಿ.ಆರ್.ಪಾರ್ಕ್) 9:18ಕ್ಕೆ, ಕಾರ್ಮೆಲ್ ಶಾಲೆಗೆ (ಆನಂದ್ ನಿಕೇತನ್) 9:22ಕ್ಕೆ ಹಾಗೂ ಕಾರ್ಮೆಲ್ ಶಾಲೆಗೆ (ಸೆಕ್ಟರ್ 23, ದ್ವಾರಕಾ) 9:25ಕ್ಕೆ ಬೆದರಿಕೆ ಕರೆಗಳು ಬಂದಿವೆ. ಶಾಲೆಗಳಿಗೆ ಬಂದ ಬೆದರಿಕೆ ದೂರವಾಣಿ ಮೂಲಕವಾಗಿದ್ದರೆ, ಪಂಜಾಬ್-ಹರಿಯಾಣ ಸಚಿವಾಲಯಕ್ಕೆ ಇ-ಮೇಲ್ ಮೂಲಕ ಬೆದರಿಕೆ ಬಂದಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಅಧಿಕಾರಿ ಮೇಲೆ ಸಿಎಂ ಶಿಸ್ತು ಕ್ರಮದ ಎಚ್ಚರಿಕೆ – ರಾಜೀನಾಮೆಗೆ ಮುಂದಾಗಿದ್ದ ಜಾರ್ಜ್‌?

ಪೊಲೀಸ್ ತಂಡಗಳು ತಕ್ಷಣ ಶಾಲೆಗಳಿಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದವು. ಆದರೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಹುಸಿ ಬಾಂಬ್ ಬೆದರಿಕೆ ಸಾಧ್ಯತೆ ಇರಬಹುದು ಎನ್ನಲಾಗಿದೆ. ಬುಧವಾರ ಚಂಡೀಗಢ, ಗುರುಗ್ರಾಮ್ ಹಾಗೂ ಹರಿಯಾಣದ ಇತರೆಡೆಯೂ ಹಲವು ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಅನೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿ ಪರಿಶೀಲನೆ ನಡೆಸಲಾಗಿದೆ. ಇದನ್ನೂ ಓದಿ: ನ್ಯಾಯ ಸಿಗುತ್ತೆ, ಎದೆಗುಂದ ಬೇಡಿ ಎಂದು ಕಾಂಗ್ರೆಸ್ಸಿನವ್ರೇ ಹೇಳಿದ್ದಾರೆ: ಸ್ನೇಹಮಯಿ ಕೃಷ್ಣ

Share This Article