ಕತ್ತಲು ಹೋದ ಮೇಲೆ ಬೆಳಕು ಬಂದೇ ಬರುತ್ತೆ – ಬಂಧನಕ್ಕೊಳಗಾದ ಪತಿ ನೆನೆದು ಭಾವುಕರಾದ ರಾಜೀವ್‌ ಗೌಡ ಪತ್ನಿ

1 Min Read

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ (Sidlaghatta) ನಗರಸಭೆ ಪೌರಾಯುಕ್ತೆಗೆ ಧಮ್ಕಿ ಹಾಕಿ ಜೈಲು ಪಾಲಾಗಿರುವ ಕಾಂಗ್ರೆಸ್‌ (Congress) ಮುಖಂಡ ರಾಜೀವ್‌ ಗೌಡರನ್ನು (Rajeev Gowda) ನೆನೆದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಅವರ ಪತ್ನಿ ಸಹನಾ ಭಾವುಕರಾಗಿದ್ದಾರೆ.

ಶಿಡ್ಲಘಟ್ಟ ಕಾಂಗ್ರೆಸ್ (Congress) ಕಚೇರಿಯಲ್ಲಿ ಚಿಮುಲ್ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಈ ವೇಳೆ, ರಾಜೀವ್ ಗೌಡ ಕಾಂಗ್ರೆಸ್‌ನ್ನು ಉಸಿರಾಗಿಸಿಕೊಂಡಿದ್ದಾರೆ. ಕಾರಣಾಂತರಗಳಿಂದ ಅವರಿಗೆ ಈ ಪರಿಸ್ಥಿತಿ ಬಂದಿದೆ. ಆದರೆ ಇದು ಶಾಶ್ವತ ಅಲ್ಲ, ಕತ್ತಲು ಹೋದ ಮೇಲೆ ಬೆಳಕು ಬಂದೇ ಬರುತ್ತೆ ಎಂದು ಭಾವುಕರಾಗಿದ್ದಾರೆ. ಇದನ್ನೂ ಓದಿ: ಧಮ್ಕಿ ಪುಢಾರಿ ರಾಜೀವ್‌ ಗೌಡಗೆ ಜೈಲು

ರಾಜೀವ್ ಗೌಡ ಹೊರಗಡೆ ಬರ್ತಾರೆ, ನಿಮ್ಮ ಜೊತೆ ನಿಂತುಕೊಳ್ತಾರೆ. ಈ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ಮತ ನೀಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಪರಾರಿಯಾಗಿದ್ದ ಧಮ್ಕಿ ಪುಢಾರಿ ರಾಜೀವ್‌ ಗೌಡ ಕೊನೆಗೂ ಅರೆಸ್ಟ್‌

Share This Article