ಅಪ್ಪ.. ನಾನು ಅಜಿತ್‌ ಪವಾರ್‌ ಅವ್ರ ವಿಮಾನದಲ್ಲಿ ಹೋಗ್ತಿದ್ದೇನೆ, ನಾಳೆ ಊರಿಗೆ ಬರ್ತೀನಿ: ತಂದೆ ಜೊತೆ ಫ್ಲೈಟ್‌ ಅಟೆಂಡೆಂಟ್‌ ಕೊನೆ ಮಾತು

2 Min Read

ಮುಂಬೈ: ‘ಅಪ್ಪ, ನಾನು ಅಜಿತ್‌ ಪವಾರ್‌ (Ajit Pawar) ಅವರ ವಿಮಾನ ಓಡಿಸಲು ಹೋಗುತ್ತಿದ್ದೇನೆ. ನಾಳೆ ಊರಿಗೆ ಬರ್ತೀನಿ’.. ಇದು ಪತನಗೊಂಡ ವಿಮಾನದಲ್ಲಿದ್ದ ಫ್ಲೈಟ್‌ ಅಟೆಂಡೆಂಟ್‌ ಪಿಂಕಿ ಮಾಲಿ ತನ್ನ ತಂದೆ ಜೊತೆ ನಡೆಸಿದ ಕೊನೆಯ ಫೋನ್‌ ಸಂಭಾಷಣೆ.

ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ ಅವರ ಸಾವಿಗೆ ಕಾರಣವಾದ ವಿಮಾನದಲ್ಲಿ ಇಬ್ಬರು ಮಹಿಳಾ ಪೈಲಟ್‌ಗಳಿದ್ದರು. ಅವರು ಕೂಡ ವಿಮಾನ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಇಬ್ಬರು ಪೈಲಟ್‌ಗಳ ಪೈಕಿ ಪಿಂಕಿ ಮಾಲಿ, ಹೊರಡುವುದಕ್ಕೂ ಮುನ್ನ ತನ್ನ ತಂದೆ ಶಿವಕುಮಾರ್‌ಗೆ ಕೊನೆಯದಾಗಿ ಕರೆ ಮಾಡಿದ್ದರು. ಮಗಳು ಮತ್ತು ತಂದೆ ನಡೆಸಿದ ಫೋನ್‌ ಸಂಭಾಷಣೆ ಈಗ ಹೊರಬಿದ್ದಿದೆ. ಇದನ್ನೂ ಓದಿ: ದಟ್ಟ ಮಂಜಿನಿಂದಾಗಿ ವಿಮಾನ ಪತನ; ವಾಚ್‌, ಬಟ್ಟೆಯಿಂದ ಅಜಿತ್‌ ಪವಾರ್‌ ಗುರುತು ಪತ್ತೆ

ಮುಂಬೈನ ವರ್ಲಿಯ ನಿವಾಸಿ ಪಿಂಕಿ ತನ್ನ ತಂದೆಗೆ, ‘ಅಪ್ಪಾ, ನಾನು ಅಜಿತ್ ಪವಾರ್ ಜೊತೆ ಬಾರಾಮತಿಗೆ ವಿಮಾನದಲ್ಲಿ ಹೋಗುತ್ತಿದ್ದೇನೆ. ಅವರನ್ನು ಬಿಟ್ಟು ಬಂದ ನಂತರ, ನಾನು ನಾಂದೇಡ್‌ಗೆ (ಸ್ವಂತ ಊರು) ಹೋಗುತ್ತೇನೆ. ನಾವು ನಾಳೆ ಮಾತನಾಡೋಣ” ಎಂದು ಹೇಳಿದ್ದರು. ತಂದೆ ಶಿವಕುಮಾರ್ ಅವರು ಕೆಲಸದ ನಂತರ ಮರುದಿನ ಮಾತನಾಡುವುದಾಗಿ ಪ್ರತಿಕ್ರಿಯಿಸಿದ್ದರು.

‘ನಾನು ಅವಳಿಗೆ ಹೇಳಿದ್ದೆ. ನಾವು ನಾಳೆ ನಿನ್ನ ಕೆಲಸದ ನಂತರ ಮಾತನಾಡೋಣ ಅಂತ. ಆದರೆ, ಆ ನಾಳೆ ಎಂದಿಗೂ ಬರುವುದಿಲ್ಲ’ ಎಂದು ಮಗಳನ್ನು ನೆನೆದು ದುಃಖ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಹಲವಾರು ಪ್ರವಾಸಗಳಲ್ಲಿ ಅವರು ಪವಾರ್ ಜೊತೆಗಿದ್ದರು ಎಂದು ಶಿವಕುಮಾರ್ ಉಲ್ಲೇಖಿಸಿದ್ದಾರೆ. ತೀವ್ರ ದುಃಖಿತರಾದ ಶಿವಕುಮಾರ್‌, ನಾನು ನನ್ನ ಮಗಳನ್ನು ಕಳೆದುಕೊಂಡಿದ್ದೇನೆ. ನಿಖರವಾಗಿ ಏನಾಯಿತು ಎಂದು ನನಗೆ ತಿಳಿದಿಲ್ಲ. ಏಕೆಂದರೆ ಅಂತಹ ಘಟನೆಗಳ ಬಗ್ಗೆ ನನಗೆ ಯಾವುದೇ ತಾಂತ್ರಿಕ ಜ್ಞಾನವಿಲ್ಲ. ನನ್ನ ಮಗಳ ಅಂತ್ಯಕ್ರಿಯೆಯನ್ನು ಗೌರವದಿಂದ ಮಾಡಲು ನನಗೆ ಅವಳ ದೇಹವು ಬೇಕು. ನಾನು ಬಯಸುವುದು ಇಷ್ಟೇ ಎಂದು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: Ajit Pawar Dies | ಲ್ಯಾಂಡ್‌ ಆಗಲು ಇನ್ನೇನು 100 ಅಡಿ ಬಾಕಿಯಿದ್ದಾಗ ಪತನಗೊಂಡು ಸ್ಫೋಟ: ಪ್ರತ್ಯಕ್ಷದರ್ಶಿ

ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದ ಬಳಿ ಬುಧವಾರ ಬೆಳಗ್ಗೆ ಡಿಸಿಎಂ ಅಜಿತ್‌ ಪವಾರ್‌ ಇದ್ದ ವಿಮಾನ ಪತನಗೊಂಡಿತು. ದೆಹಲಿ ಮೂಲದ ವಿಎಸ್ಆರ್ ವೆಂಚರ್ಸ್ ನಿರ್ವಹಿಸುವ ವಿಟಿ-ಎಸ್‌ಎಸ್‌ಕೆ ನೋಂದಣಿ ಹೊಂದಿರುವ ಲಿಯರ್‌ಜೆಟ್ 45 ವಿಮಾನ ಅಪಘಾತಕ್ಕೀಡಾಯಿತು. ವಿಮಾನದಲ್ಲಿದ್ದ ಮೂವರು ಪೈಲಟ್‌ಗಳು, ಡಿಸಿಎಂ ಅಂಗರಕ್ಷಕ ಕೂಡ ದುರ್ಮರಣಕ್ಕೀಡಾದರು.

ವಿಮಾನದಲ್ಲಿ ಐದು ಜನರು ಇದ್ದರು. ಉಪಮುಖ್ಯಮಂತ್ರಿ ಅಜಿತ್ ಪವಾರ್, ಅವರ ಭದ್ರತಾ ಸಿಬ್ಬಂದಿ ವಿದೀಪ್ ಜಾಧವ್, ಫ್ಲೈಟ್‌ ಅಟೆಂಡೆಂಟ್‌ ಪಿಂಕಿ ಮಾಲಿ, ಪೈಲಟ್-ಇನ್-ಕಮಾಂಡ್ ಸುಮಿತ್ ಕಪೂರ್ ಮತ್ತು ಸೆಕೆಂಡ್-ಇನ್-ಕಮಾಂಡ್ ಶಾಂಭವಿ ಪಾಠಕ್ ಪತನಗೊಂಡ ವಿಮಾನದಲ್ಲಿದ್ದರು.

Share This Article