ತಂಬಾಕು ಜಾಹೀರಾತುಗಳ ವಿರುದ್ಧ ಕನ್ನಡಿಗರ ಸಮರ – ಸಾರಿಗೆ ಬಸ್‌ಗಳ ಮೇಲೆ ಅಂಟಿಸಿದ್ದ ಪೋಸ್ಟರ್ ತೆರವು

2 Min Read

– ಜಾಹೀರಾತು ಸ್ಟಿಕ್ಕರ್ ಕಿತ್ತೆಸೆದ ಕನ್ನಡ ಸಂಘಟನೆಗಳು

ಬೆಂಗಳೂರು: ಗುಟ್ಕಾ ಜಾಹಿರಾತುಗಳ (Tobacco Advertisements) ವಿರುದ್ಧ ಕನ್ನಡಿಗರು ಸಿಡಿದೆದ್ದಿದ್ದಾರೆ. ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಹಾಕಿದ್ದ ಗುಟ್ಕಾ ಜಾಹೀರಾತುಗಳ ಪೋಸ್ಟರನ್ನು (Poster) ಕನ್ನಡ ಸಂಘಟನೆಗಳ ಕಾರ್ಯಕರ್ತರು ಕಿತ್ತೆಸೆಯುತ್ತಿದ್ದಾರೆ. ಸಾರಿಗೆ ಇಲಾಖೆಯ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ಗಳ ಮೇಲೆ ಅಂಟಿಸಿದ್ದ ತಂಬಾಕು ಜಾಹಿರಾತುಗಳನ್ನ ಕನ್ನಡಿಗರು ಕಿತ್ತೆಸೆಯುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಆರಂಭವಾದ ಈ ಕಿಚ್ಚು ಇದೀಗಾ ಬೆಂಗಳೂರಿಗೂ (Bengaluru) ವ್ಯಾಪಿಸಿದೆ.

ಹೌದು, ಮೆಜೆಸ್ಟಿಕ್, ಕೆಆರ್ ಪುರಂ ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಜಾಹಿರಾತುಗಳನ್ನ ಹರಿದು ಹಾಕಿದ್ದಾರೆ. ವಿಮಲ್, ಆರ್‌ಎಂಡಿ ಸೇರಿ ತಂಬಾಕು ಉತ್ಪನ್ನಗಳ ಜಾಹಿರಾತು ಪೋಸ್ಟರ್‌ಗಳನ್ನ ಸಾರಿಗೆ ಬಸ್‌ಗಳ ಮೇಲೆ ಅಂಟಿಸಿರೋದನ್ನ ಕನ್ನಡ ಸಂಘಟನೆಗಳು ಕೂಡ ವಿರೋಧಿಸಿ ಪೋಸ್ಟರ್ ತೆರವು ಮಾಡುತ್ತಿದ್ದಾರೆ. ಇದನ್ನೂ ಓದಿ: ಅಪೆಕ್ಸ್‌ ಬ್ಯಾಂಕ್‌ ಚುನಾವಣಾ ಸಭೆ; ಸಿಎಂ ಎದುರೇ ಕೆ.ಎನ್‌ ರಾಜಣ್ಣ – ಸಚಿವ ಸುಧಾಕರ್ ನಡ್ವೆ ಜಟಾಪಟಿ

ರೂಪೇಶ್ ರಾಜಣ್ಣ ನೇತೃತ್ವದ ಯುವ ಕರ್ನಾಟಕ ತಂಡದ ಕಾರ್ಯಕರ್ತರು ಮೆಜೆಸ್ಟಿಕ್‌ನ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ನುಗ್ಗಿ ಪೋಸ್ಟರ್, ಸ್ಟಿಕ್ಕರ್‌ಗಳನ್ನ ತೆರವು ಮಾಡಿದರು. ಈ ವೇಳೆ ಸಾರ್ವಜನಿಕರು ಕೂಡ ಕನ್ನಡ ಪರ ಹೋರಾಟಗಾರರಿಗೆ ಬೆಂಬಲಿಸಿದರು. ಕೂಡಲೇ ಎಲ್ಲಾ ಬಸ್‌ಗಳ ಮೇಲೆ ಅಂಟಿಸಿರೋ ಪೋಸ್ಟರ್‌ಗಳನ್ನ ತೆರವು ಮಾಡಬೇಕು. ಇಲ್ಲದಿದ್ದರೆ ಕಂಡ ಕಂಡಲ್ಲಿ ಬಸ್‌ಗಳನ್ನ ನಿಲ್ಲಿಸಿ ಜಾಹಿರಾತುಗಳಿಗೆ ಮಸಿ ಬಳಿಯುತ್ತೇವೆ ಅಂತ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಶಿವರಾತ್ರಿ ಪ್ರಯುಕ್ತ ಬೆಂಗಳೂರು – ವಿಜಯಪುರ ನಡುವೆ ವಿಶೇಷ ರೈಲು

ಒಂದು ವರ್ಷಕ್ಕೆ ಬಿಎಂಟಿಸಿ ಬಸ್‌ಗಳಿಗೆ ಅಳವಡಿಸಿರುವ ಜಾಹಿರಾತುಗಳಿಂದಲೇ 60 ಕೋಟಿ ಆದಾಯವು ನಿಗಮಕ್ಕೆ ಬರುತ್ತದೆ. ಕೇಂದ್ರ ಸರ್ಕಾರವೇ ತಂಬಾಕು ನಿಷೇಧ ಮಾಡಲಿ ಅಂತ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದರು. ಸಚಿವರ ಹೇಳಿಕೆಗೆ ಕೆಂಡವಾಗಿರುವ ಕನ್ನಡ ಸಂಘಟನೆಯ ಕಾರ್ಯಕರ್ತರು ಆದಾಯ ಆಸೆ ಬಿಟ್ಟು, ಸಮಾಜದ ಸ್ವಾಸ್ಥ್ಯವನ್ನ ಕಾಪಾಡಿ. ಹೀಗೆ ಮೊಂಡುತನ ಪ್ರದರ್ಶನ ಮಾಡೋದು ಸರಿಯಲ್ಲ ಅಂತ ಎಚ್ಚರಿಸಿದ್ದಾರೆ. ಹುಬ್ಬಳಿ- ಧಾರವಾಡದಲ್ಲಿ ಗುಟ್ಕಾ ಜಾಹಿರಾತುಗಳ ವಿರುದ್ಧ ಎದ್ದಿದ್ದ ಕಿಚ್ಚು ಇದೀಗ ರಾಜ್ಯಾದ್ಯಂತ ವ್ಯಾಪಿಸುತ್ತಿದೆ. ಸಂಘಟನೆಗಳು ಮಾತ್ರವಲ್ಲ. ನಾಗರೀಕರು ಕೂಡ ಸಾರಿಗೆ ಇಲಾಖೆಯ ವಿರುದ್ಧ ಧ್ವನಿ ಮೊಳಗಿಸಿದ್ದಾರೆ. ಇದನ್ನೂ ಓದಿ: ರಾಕ್ ಕ್ಲೈಂಬಿಂಗ್ ಕ್ರೀಡೆಗೆ ಆನೆಗೊಂದಿ ಫೇಮಸ್

Share This Article