ಬೆಂಗಳೂರು ಟ್ರಾಫಿಕ್ ಕಂಟ್ರೋಲ್‌ಗೆ ಹೊಸ ಪ್ಲಾನ್- ವಾರದಲ್ಲಿ 1 ದಿನ ವರ್ಕ್‌ ಫ್ರಂ ಹೋಂ?

1 Min Read

– ಫೆಬ್ರವರಿ ಮೊದಲ ವಾರದಲ್ಲಿ ಐಟಿ-ಬಿಟಿ ಕಂಪನಿಗಳ ಜೊತೆ ಸಭೆ

ಬೆಂಗಳೂರು: ವಿಶ್ವದಲ್ಲೇ ಬೆಂಗಳೂರು (Bengaluru) ಎರಡನೇ ಟ್ರಾಫಿಕ್ ಸಿಟಿ (Traffic City) ಎಂಬ ಹಣೆಪಟ್ಟಿ ಪಡೆದಿದೆ. ಇದರಿಂದ ಹೊರ ಬರರಲು ಬೆಂಗಳೂರು ಟ್ರಾಫಿಕ್ ಪೊಲೀಸರು ಮೆಗಾ ಪ್ಲ್ಯಾನ್ ಮಾಡಿದ್ದಾರೆ. ಐಟಿ-ಬಿಟಿ (IT-BT) ಕಂಪನಿಗಳ ಜೊತೆ ಸಭೆ ಮಾಡುವುದಕ್ಕೆ ಸಂಚಾರಿ ವಿಭಾಗದ ಜಂಟಿ ಆಯುಕ್ತರು ನಿರ್ಧರಿಸಿದ್ದಾರೆ.

ಟ್ರಾಫಿಕ್ ನಿಯಂತ್ರಣಕ್ಕೆ ಹೊಸ ನಿಯಮ ಜಾರಿ ಮಾಡುವುದಕ್ಕೆ ಚಿಂತನೆ ನಡೆದಿದೆ. ಬೆಂಗಳೂರು ಸಂಚಾರಿ ವಿಭಾಗದ ಜಂಟಿ ಆಯುಕ್ತರು, ಬೆಂಗಳೂರು ಸಿಟಿ ಪೊಲೀಸ್ ಕಮೀಷನರ್ ಹಾಗೂ ಜಿಬಿಎ ಮುಖ್ಯ ಆಯುಕ್ತರು ಸೇರಿ ಟ್ರಾಫಿಕ್ ನಿಯಂತ್ರಣಕ್ಕೆ ಹೊಸ ನಿಯಮಗಳನ್ನು ಜಾರಿ ಮಾಡಲು ಸಿದ್ಧತೆ ನಡೆಸಿದ್ದಾರೆ.

ಔಟರ್ ರಿಂಗ್ ರೋಡ್‌ನಲ್ಲಿ ಹೆಚ್ಚು ಟ್ರಾಫಿಕ್ ಜಾಮ್ ಆಗುತ್ತಿರುವ ಜಾಗಗಳನ್ನು ಗುರುತು ಮಾಡಲಾಗಿದೆ. ಹೀಗಾಗಿ ಔಟರ್ ರಿಂಗ್ ರೋಡ್ ಸೇರಿ ನಗರದ ಒಳಗೆ ಟ್ರಾಫಿಕ್ ಸಮಸ್ಯೆ ನಿವಾರಿಸಲು ಮುಂದಾಗಿದೆ. ಫೆಬ್ರವರಿ ಮೊದಲ ವಾರದಲ್ಲಿ ಐಟಿ-ಬಿಟಿ ಕಂಪನಿಗಳ ಜೊತೆ ಸಭೆ ನಡೆಸುವ ಸಾಧ್ಯತೆಯಿದೆ.  ಇದನ್ನೂ ಓದಿ: ವೇತನ ಹಿಂಬಾಕಿ, ಪರಿಷ್ಕರಣೆಗೆ ಆಗ್ರಹ – ಸಾರಿಗೆ ನೌಕರರಿಂದ ನಾಳೆ ಬೆಂಗಳೂರು ಚಲೋಗೆ ಕರೆ

 

ಟ್ರಾಫಿಕ್ ನಿಯಂತ್ರಣಕ್ಕಿರುವ ಆಯ್ಕೆಗಳೇನು?
1. 500ಕ್ಕಿಂತ ಹೆಚ್ಚು ಉದ್ಯೋಗಿಗಳಿದ್ದರೆ ವಾಹನಗಳಿಗೆ ಕಡಿವಾಣ
2. ವೆಹಿಕಲ್ ಓಡಾಟ ಕಡಿಮೆಯಾದರೆ ಟ್ರಾಫಿಕ್ ನಿಯಂತ್ರಣ
3. ಐಟಿ-ಬಿಟಿ ಕಂಪನಿಗಳಿಗೆ ಮನವಿ ಮಾಡಿ ವಾರದಲ್ಲಿ 1 ದಿನ ವರ್ಕ್ ಫ್ರಂ ಹೋಂ ಜಾರಿ
4. ಒಂದು ದಿನ ಕಾರು ಫ್ರೀ ಡೇ, ಕಾರ್‌ ಪೂಲಿಂಗ್‌ ಆರಂಭಿಸುವಂತೆ ಮನವಿ
5. ಬಸ್ ಪೂಲಿಂಗ್ ಆರಂಭ ಮಾಡುವ ಬಗ್ಗೆ ಚಿಂತನೆ
6. 10% ವಾಹನ ತಗ್ಗಿದರೆ 40% ಟ್ರಾಫಿಕ್ ಕಡಿಮೆ ನಿರೀಕ್ಷೆ

Share This Article