ಮೂರು ವರ್ಷದ ಒಳಗಡೆ ಎರಡನೇ ಬಾರಿ ವಿಎಸ್‌ಆರ್‌ ಕಂಪನಿಯ ವಿಮಾನ ಪತನ

2 Min Read

ನವದೆಹಲಿ: ಮೂರು ವರ್ಷದ ಒಳಗಡೆ ಎರಡನೇ ಬಾರಿ ಎಸ್ಆರ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುವ ಲಿಯರ್‌ಜೆಟ್ 45 (Bombardier Learjet 45) ವಿಮಾನ ಪತನಗೊಂಡಿದೆ.

ಮಹಾರಾಷ್ಟ್ರದ ಡಿಸಿಎಂ ಅಜಿತ್‌ ಪವಾರ್‌ (Ajit Pawar) ಇಂದು ಲಿಯರ್‌ಜೆಟ್ 45 ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಮುಂಬೈನಿಂದ ಟೇಕಾಫ್‌ ಆಗಿದ್ದ ಲಿಯರ್‌ಜೆಟ್ 45 ವಿಮಾನ ಬಾರಾಮತಿ ವಿಮಾನ ನಿಲ್ದಾಣದಲ್ಲಿ (Baramati Air Port) ಲ್ಯಾಂಡಿಂಗ್‌ ಆಗುವ ವೇಳೆ ಪತನಗೊಂಡಿದೆ.

ಎಸ್ಆರ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ದೆಹಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಸೆಪ್ಟೆಂಬರ್ 2023 ರಲ್ಲಿ ಮುಂಬೈನಲ್ಲಿ VT-DBL ವಿಮಾನ ಪತನಗೊಂಡಿತ್ತು. ವಿಶಾಖಪಟ್ಟಣದಿಂದ ಟೇಕಾಫ್‌ ಆಗಿದ್ದ ವಿಮಾನ ಮುಂಬೈ ವಿಮಾನ ನಿಲ್ದಾಣದ ಬಳಿ ಪತನಗೊಂಡಿತ್ತು. ವಿಮಾನ ಪತನಗೊಂಡಿದ್ದರೂ 6 ಮಂದಿ ಪಾರಾಗಿದ್ದರು.  ಇದನ್ನೂ ಓದಿ: 2ನೇ ಬಾರಿ ಲ್ಯಾಂಡಿಂಗ್‌ ಪ್ರಯತ್ನದಲ್ಲಿದ್ದಾಗ ಅಜಿತ್‌ ಪವಾರ್‌ ವಿಮಾನ ಪತನ

15 ವರ್ಷಗಳ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಕಂಪನಿಯಲ್ಲಿ 60 ಕ್ಕೂ ಹೆಚ್ಚು ಪೈಲಟ್‌ಗಳು ಕೆಲಸ ಮಾಡುತ್ತಿದ್ದಾರೆ. ​​ವಿಜಯ್ ಕುಮಾರ್ ಸಿಂಗ್ ಅವರ ಒಡೆತನದಲ್ಲಿರುವ ಸಂಸ್ಥೆ ಹ್ಯಾವೆಲ್ಸ್ ಇಂಡಿಯಾ, ವೆಲ್ಸ್ಪನ್ ಮತ್ತು APL ಅಪೊಲೊ ತಮ್ಮ ಪ್ರಮುಖ ಗ್ರಾಹಕರು ಎಂದು ಹೇಳಿಕೊಂಡಿದೆ. ಜೆಟ್ ಚಾರ್ಟರ್, ಖಾಸಗಿ ಜೆಟ್ ಗುತ್ತಿಗೆ, ಏರ್ ಆಂಬ್ಯುಲೆನ್ಸ್‌ಗಳನ್ನು ಈ ಕಂಪನಿ ಸೇವೆ ನೀಡುತ್ತದೆ.

ಒಂಬತ್ತು ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿರುವ ಲಿಯರ್‌ಜೆಟ್ 45 ಟ್ವಿನ್‌ ಎಂಜಿನ್‌ ವಿಮಾನವಾಗಿದೆ. 1990 ರಲ್ಲಿ ಪರಿಚಯಿಸಲಾಗಿದ್ದ ವಿಮಾನವನ್ನು 1998 ರಲ್ಲಿ ಸೇವೆಗೆ ಸೇರ್ಪಡೆ ಮಾಡಲಾಗಿದೆ. ಮುಖ್ಯವಾಗಿ ಸಣ್ಣ ಮತ್ತು ಮಧ್ಯಮ ದೂರದ ಪ್ರಯಾಣಕ್ಕಾಗಿ ವಿಮಾನವನ್ನು ವಿನ್ಯಾಸ ಮಾಡಲಾಗಿದೆ. ಪ್ರಯಾಣದ ಸಮಯವನ್ನು ಉಳಿಸುವ ಕಾರಣ ಉದ್ಯಮಿಗಳು, ಚಿತ್ರ ಕಲಾವಿದರು, ರಾಜಕಾರಣಿಗಳು ಈ ವಿಮಾನವನ್ನು ಬಳಕೆ ಮಾಡುತ್ತಿದ್ದಾರೆ. ಇದನ್ನೂ ಓದಿ: ವಿಮಾನ, ಹೆಲಿಕಾಪ್ಟರ್ ದುರಂತದಲ್ಲಿ ದುರ್ಮರಣಕ್ಕೀಡಾದ ಪ್ರಮುಖ ರಾಜಕಾರಣಿಗಳು..!

ವಿಮಾನವು ಸಾಮಾನ್ಯವಾಗಿ ಅದರ ಒಳಾಂಗಣ ವಿನ್ಯಾಸವನ್ನು ಅವಲಂಬಿಸಿ 6 ರಿಂದ 9 ಪ್ರಯಾಣಿಕರ ಆಸನ ಸಾಮರ್ಥ್ಯವನ್ನು ಹೊಂದಿರುತ್ತದೆ. ಸಣ್ಣ ಸೋಫಾದ ಜೊತೆ ಕ್ಯಾಬಿನ್‌ನ ಹಿಂಭಾಗದಲ್ಲಿ ಒಂದು ಸಣ್ಣ ರಿಫ್ರೆಶ್‌ಮೆಂಟ್ ಪ್ರದೇಶ ಮತ್ತು ಶೌಚಾಲಯವಿದೆ.

Share This Article