ಟಿಕೆಟ್ ಇಲ್ಲದೇ ಬಸ್ಸಿನಲ್ಲಿ ಪ್ರಯಾಣಿಸಿದವರಿಗೆ ಬಿಸಿ – 6.34 ಲಕ್ಷ ದಂಡ ವಸೂಲಿ

1 Min Read

ಬೆಂಗಳೂರು: ಟಿಕೆಟ್ ಇಲ್ಲದೇ ಬಸ್ಸಿನಲ್ಲಿ ಪ್ರಯಾಣ ಮಾಡುವವರ ವಿರುದ್ಧ ಬಿಎಂಟಿಸಿ (BMTC) ನಿಗಮದ ತನಿಖಾ ತಂಡಗಳು ಭರ್ಜರಿ ಕಾರ್ಯಾಚರಣೆ ನಡೆಸಿದೆ.

2025ರ ಡಿಸೆಂಬರ್ ತಿಂಗಳಲ್ಲಿ ಒಟ್ಟು 18,409 ಟ್ರಿಪ್‌ಗಳ ತನಿಖೆ ನಡೆಸಿದ್ದು, ಈ ವೇಳೆ 2,801 ಮಂದಿ ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿರೋದು ಬೆಳಕಿಗೆ ಬಂದಿದೆ. ಇದರಿಂದ ಒಟ್ಟು 6,34,865 ರೂ. ದಂಡ ವಸೂಲಿ ಮಾಡಿದ್ದು, ಈ ಸಂಬಂಧ ನಿರ್ವಾಹಕರ ವಿರುದ್ಧ 1748 ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಉಡುಪಿಯಲ್ಲಿ ಮಗುಚಿದ ಬೋಟ್ – ಮೈಸೂರಿನ ಇಬ್ಬರು ಸಾವು, ಇನ್ನಿಬ್ಬರು ಗಂಭೀರ

ಇನ್ನೂ ಮಹಿಳಾ ಪ್ರಯಾಣಿಕರಿಗೆಂದೇ ಮೀಸಲು ಆಸನಗಳಲ್ಲಿ ಕುಳಿತು ಪ್ರಯಾಣಿಸಿದ 250 ಪುರುಷ ಪ್ರಯಾಣಿಕರಿಗೆ ದಂಡ ವಿಧಿಸಲಾಗಿದೆ. ಮೋಟಾರು ವಾಹನ ಕಾಯ್ದೆ 1988ರ ಕಾಲಂ 177 ಮತ್ತು 94ರ ಪ್ರಕಾರ ದಂಡ ಹಾಕಿ, ಒಟ್ಟು 25,000 ರೂ. ದಂಡ ವಸೂಲಿ ಮಾಡಲಾಗಿದೆ.

ಇನ್ನೂ ಕಳೆದ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ 3,051 ಪ್ರಯಾಣಿಕರಿಗೆ ದಂಡ ವಿಧಿಸಿ, ಒಟ್ಟು 6,59,865 ರೂ. ವಸೂಲಿ ಮಾಡಲಾಗಿದೆ.ಇದನ್ನೂ ಓದಿ: ಹಾಡಹಗಲೇ ಪಿಸ್ತೂಲ್ ತೋರಿಸಿ ದರೋಡೆ – 205 ಗ್ರಾಂ ಚಿನ್ನಾಭರಣ, 1 ಕೆಜಿ ಬೆಳ್ಳಿ ದೋಚಿದ ಖದೀಮರು

Share This Article