ಬೆಂಗಳೂರಿನತ್ತ ಜನ| ನೆಲಮಂಗಲ – ಕುಣಿಗಲ್‌ ರಸ್ತೆಯಲ್ಲಿ 4 ಕಿ.ಮೀ ಟ್ರಾಫಿಕ್‌ ಜಾಮ್‌

0 Min Read

ಬೆಂಗಳೂರು: ಸಾಲು ಸಾಲು ರಜೆ ಮುಗಿಸಿ ಬೆಂಗಳೂರಿನತ್ತ (Bengaluru) ಜನರು ಬರುತ್ತಿದ್ದು ನೆಲಮಂಗಲ ಕುಣಿಗಲ್ ರಸ್ತೆಯಲ್ಲಿ ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್‌ (Traffic Jam) ಸಂಭವಿಸಿದೆ.

ಮೂರು ದಿನಗಳ ರಜೆ ಇದ್ದ ಕಾರಣ ಊರಿಗೆ ತೆರಳಿದ್ದ ಜನರು ಬೆಂಗಳೂರಿಗೆ ಮರಳುತ್ತಿದ್ದರಿಂದ ಹಾಸನ-ಬೆಂಗಳೂರು (Hassana-Bengaluru) ರಸ್ತೆ ಫುಲ್‌ ಜಾಮ್‌ ಆಗಿದೆ. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಗಿಲ್ಲಿ ಕ್ರೇಜ್ – ವೇದಿಕೆ ಏರಿದ ಅಭಿಮಾನಿಗಳ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ

ಸುಮಾರು ನಾಲ್ಕು ಕಿಲೋಮೀಟರ್ ದೂರದವರೆಗೆ ಟ್ರಾಫಿಕ್ ಜಾಮ್‌ ಸಂಭವಿಸಿದ್ದು ವಾಹನ ಸವಾರರ ಪರದಾಟ ನಡೆಸುತ್ತಿದ್ದಾರೆ. ಟ್ರಾಫಿಕ್ ನಿಯಂತ್ರಣ ಮಾಡಲು ನೆಲಮಂಗಲ ಸಂಚಾರಿ ಪೊಲೀಸರ ಹರಸಾಹಸ ಪಡುತ್ತಿದ್ದಾರೆ.
Share This Article