ಭಾರತದ ವ್ಯಾಪಾರ ಒಪ್ಪಂದಕ್ಕೆ ಶ್ವೇತಭವನದ ಜೊತೆ ಹೋರಾಟ- ಟ್ರಂಪ್, ವ್ಯಾನ್ಸ್‌ನಿಂದ ಸಾಧ್ಯವಾಗುತ್ತಿಲ್ಲ: ಸ್ಫೋಟಕ ಆಡಿಯೋ ಔಟ್‌

1 Min Read

ವಾಷಿಂಗ್ಟನ್‌: ಭಾರತ (India) ಮತ್ತು ಅಮೆರಿಕದ (USA) ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಅಂತಿಮವಾಗದೇ ಇರಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ಶ್ವೇತಭವನದ ವ್ಯಾಪಾರ ಸಲಹೆಗಾರ ಪೀಟರ್ ನವರೊ ಕಾರಣ ಎಂದು ರಿಪಬ್ಲಿಕನ್‌ ಪಕ್ಷದ ಜನಪ್ರತಿನಿಧಿಯೊಬ್ಬರು ದೂಷಿಸಿದ್ದಾರೆ.

ಸುಮಾರು 2 ದಶಕಗಳಿಂದ ಯುರೋಪ್‌ ಮತ್ತು ಭಾರತದ ನಡುವೆ ನಡೆಯುತ್ತಿದ್ದ ಮುಕ್ತ ವ್ಯಾಪಾರ ಒಪ್ಪಂದ ಮಾತುಕತೆಗೆ  ಸಹಿ ಬೀಳುತ್ತಿದ್ದಂತೆ ಟ್ರಂಪ್‌ (Donald Trump) ಅವರ ರಿಪಬ್ಲಿಕನ್‌ ಪಕ್ಷದ ಸೆನೆಟರ್ ಟೆಡ್ ಕ್ರೂಜ್ (Ted Cruz) ಅವರು ದಾನಿಗಳ ಜೊತೆ ಮಾತನಾಡಿದ್ದ ಆಡಿಯೋ ಬಹಿರಂಗವಾಗಿದೆ.

ಅಮೆರಿಕದ ಮಾಧ್ಯಮ Axios ಈ ಸುದ್ದಿಯನ್ನು ಪ್ರಕಟಿಸಿದೆ. ಆಡಿಯೋದಲ್ಲಿ ಟೆಡ್ ಕ್ರೂಜ್ ಭಾರತದ ಜೊತೆ ವ್ಯಾಪಾರ ಒಪ್ಪಂದ ಸಹಿ ಹಾಕುವಂತೆ ನಾನು ಸಾಕಷ್ಟು ಪ್ರಯತ್ನಪಟ್ಟರೂ ಇದು ಸಾಧ್ಯವಾಗಲಿಲ್ಲ.  ರಿಪಬ್ಲಿಕನ್ ಪಕ್ಷದ ಉನ್ನತ ಅಧಿಕಾರಿಗಳಿಂದಕ್ಕಾಗಿ ಮಾತುಕತೆ ಮುಂದುವರಿಯುತ್ತಿಲ್ಲ ಎಂದಿದ್ದಾರೆ.  ಇದನ್ನೂ ಓದಿ: ಮೋದಿ ಟ್ರಂಪ್‌ಗೆ ಕರೆ ಮಾಡಿಲ್ಲ, ವ್ಯಾಪಾರ ಒಪ್ಪಂದ ಅಂತಿಮಗೊಂಡಿಲ್ಲ: ಅಮೆರಿಕ

ಆಡಿಯೋದಲ್ಲಿ ಏನಿದೆ?

ರಷ್ಯಾದಿಂದ ತೈಲ ಖರೀದಿ ಮಾಡಿದ್ದಕ್ಕೆ ಭಾರತೀಯ ವಸ್ತುಗಳ ಮೇಲೆ ಹೆಚ್ಚುವರಿಯಾಗಿ 25% ಸುಂಕ ವಿಧಿಸಿದ ನಂತರ ಭಾರತ ಮತ್ತು ಅಮೆರಿಕದ ಸಂಬಂಧ ಹದಗೆಟ್ಟವು. ಇದರಿಂದಾಗಿ ಭಾರತದ ವಸ್ತುಗಳ ಮೇಲೆ ಸುಂಕ 50% ಏರಿಕೆಯಾಗಿದೆ.

ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಕಳೆದ ವರ್ಷದಿಂದ ಹಲವು ಸುತ್ತಿನ ಮಾತುಕತೆ ನಡೆದರೂ ಕೃಷಿ ಮತ್ತು ಡೈರಿ ವಲಯಗಳನ್ನು ತೆರೆಯಬೇಕೆಂಬ ಅಮೆರಿಕ ಬೇಡಿಕೆಗೆ ಭಾರತ ಒಪ್ಪಿಗೆ ನೀಡಲಿಲ್ಲ. ಇದನ್ನೂ ಓದಿ: ಗುಡ್‌ ನ್ಯೂಸ್‌ – ಭಾರತದ ಮೇಲಿನ 25% ಹೆಚ್ಚುವರಿ ಸುಂಕ ತೆಗೆಯಲು ಟ್ರಂಪ್‌ ಸಿದ್ಧತೆ!

ಮೇ ತಿಂಗಳಲ್ಲಿ ಭಾರತ-ಪಾಕಿಸ್ತಾನ ಸಂಘರ್ಷವನ್ನು ನಾನು ಕೊನೆಗೊಳಿಸಿದೆ ಎಂದು ಟ್ರಂಪ್‌ ಅವರ ಹೇಳಿಕೆ, ಅಮೆರಿಕದ ಹೊಸ ವಲಸೆ ನೀತಿಯಿಂದ ಭಾರತದ ಜೊತೆಗಿನ ಸಂಬಂಧ ಹಳಸಿತು. ನಾನು ಬಹಳ ಪ್ರಯತ್ನಪಟ್ಟರೂ ವ್ಯಾನ್ಸ್, ಪೀಟರ್ ನವರೊ, ಟ್ರಂಪ್‌ ಅವರ ವಿರೋಧದಿಂದಾಗಿ ಇನ್ನೂ ಭಾರತದ ಜೊತೆ ವ್ಯಾಪಾರ ಒಪ್ಪಂದಕ್ಕೆ ಸಹಿ ಬಿದ್ದಿಲ್ಲ ಎಂದು ಆಡಿಯೋದಲ್ಲಿ ಹೇಳಿದ್ದಾರೆ.
Share This Article