ನಾಪತ್ತೆಯಾದ 400 ಕೋಟಿ ಹಣ ಗುಜರಾತಿನ ಪ್ರಭಾವಿ ರಾಜಕಾರಣಿಯದ್ದು?

1 Min Read

ಬೆಳಗಾವಿ: ಕರ್ನಾಟಕ ಗೋವಾ ಗಡಿಯಲ್ಲಿ (Karnataka- Goa Border) ನಾಪತ್ತೆಯಾದ 400 ಕೋಟಿ ರೂ. ಹಣ ಗುಜರಾತಿನ (Gujarat) ಪ್ರಭಾವಿ ರಾಜಕಾರಣಿಗೆ ಸೇರಿದ್ದಾ ಎಂಬ ಪ್ರಶ್ನೆ ಎದ್ದಿದೆ.

ಹೌದು. ರಾಬರಿ ಪ್ರಕರಣಕ್ಕೆ (Robbery Case) ಸಂಬಂಧಿಸಿದಂತೆ ಬಗೆದಷ್ಟು ಸತ್ಯಾಂಶಗಳು ಬಯಲಾಗುತ್ತಿದೆ. ಈ ಪ್ರಕರಣವನ್ನು ಮಹಾರಾಷ್ಟ್ರ ಸರ್ಕಾರ (Maharashtra Government) ಗಂಭೀರವಾಗಿ ಪರಿಗಣಿಸಿ ವಿಶೇಷ ತನಿಖಾ ತಂಡವನ್ನು ರಚಿಸಿದೆ.

ತನಿಖೆಯ ವೇಳೆ ಈ ಹಣ ಗುಜರಾತಿನ ಪ್ರಭಾವಿ ರಾಜಕಾರಣಿಗೆ ಸೇರಿದ್ದು ಎನ್ನಲಾಗುತ್ತಿದೆ. ಕಿಶೋರ್ ಸಾಳ್ವೆ ಅಲಿಯಾಸ್ ಸೇಠ್ ಬರೀ ಮಧ್ಯವರ್ತಿಯಾಗಿ ಕೆಲಸ ಮಾಡಿರುವ ಬಗ್ಗೆ ಅನುಮಾನ ಎದ್ದಿದೆ. ಇದನ್ನೂ ಓದಿ: ಬೆಳಗಾವಿ | ದೇಶದ ಅತಿದೊಡ್ಡ ರಾಬರಿ ಪ್ರಕರಣ ಬೆಳಕಿಗೆ – 400 ಕೋಟಿ ದರೋಡೆ

 

ಗೋವಾದಿಂದ 2 ಸಾವಿರ ರೂ. ನೋಟನ್ನು ಬದಲಾವಣೆ ಮಾಡಲು ತೆಗೆದುಕೊಂಡು ಹೋಗಲಾಗುತ್ತಿತ್ತು. ಇದರ ಜವಾಬ್ದಾರಿಯನ್ನು ಆರೋಪಿ ವಿರಾಟ್‌ಗೆ ಕಿಶೋರ್‌ ನೀಡಿದ್ದ ಎನ್ನಲಾಗಿದೆ‌. ವಿರಾಟ್ ಹುಡುಗರಿಂದ ಹಣ ಸಾಗಾಟದ ವೇಳೆ ಕಂಟೇನರ್ ನಾಪತ್ತೆಯಾಗಿದ್ದು ವಿರಾಟ್‌ ಹುಡುಗರು ಹಣದ ಸಮೇತ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಕಿಶೋರ್ ಮತ್ತು ಜಯೇಶ್ ಮಾತನಾಡಿರುವ ಸಂಭಾಷಣೆಯಲ್ಲಿ ವಿಚಾರ ಬೆಳಕಿಗೆ ಬಂದಿದೆ.

ಸದ್ಯ ವಿರಾಟ್‌ನನ್ನು ಬಂಧಿಸಲಾಗಿದೆ. ಫೋನ್‌ ಆಡಿಯೋ ಹಾಗೂ ವಾಟ್ಸಪ್ ಕಾಲ್ ಸಂಭಾಷಣೆ ಆಧಾರದ ಮೇಲೆ ಮಹಾರಾಷ್ಟ್ರದ ಎಸ್ಐಟಿ ಅಧಿಕಾರಿಗಳು ಈಗ ತನಿಖೆ ಮುಂದುವರಿಸಿದ್ದಾರೆ.

Share This Article