ರೈಲಿಗೆ ಗುದ್ದಿದ ಬಿಎಂಟಿಸಿ ಬಸ್‌ – ಹಿಂಭಾಗ ಅಪ್ಪಚ್ಚಿ

1 Min Read

ಬೆಂಗಳೂರು: ಬಿಎಂಟಿಸಿ ಬಸ್‌ (BMTC Bus) ರಿವರ್ಸ್‌ ತೆಗೆಯುವಾಗ ರೈಲಿಗೆ (Train) ಗುದ್ದಿದ ಘಟನೆ ಸಾದರಮಂಗಲ (Sadaramangala) ಬಳಿ ನಡೆದಿದೆ. ರೈಲಿಗೆ ಗುದ್ದಿದ ಪರಿಣಾಮ ಬಸ್‌ನ ಹಿಂಭಾಗ ಜಖಂಗೊಂಡಿದೆ.

ಘಟಕ 51ರ ಬಿಎಂಟಿಸಿ ಬಸ್ ರೈಲ್ವೆ ಪ್ಯಾರಲಲ್ ಬಳಿ ರಿವರ್ಸ್ ತೆಗೆಯುವಾಗ ರೈಲಿಗೆ ಡಿಕ್ಕಿಯಾಗಿದೆ. ಬಸ್‌ ಘಟಕದಿಂದ ಕಾಡುಗೋಡಿ ನಿಲ್ದಾಣಕ್ಕೆ ತೆರಳುತ್ತಿತ್ತು. ವಾಹನದಲ್ಲಿ ಯಾವುದೇ ಪ್ರಯಾಣಿಕರು ಇರದ ಕಾರಣ ಅನಾಹುತವೊಂದು ತಪ್ಪಿದಂತಾಗಿದೆ. ಇದನ್ನೂ ಓದಿ: ಅಲೆಗಳ ಅಬ್ಬರಕ್ಕೆ ಮಗುಚಿದ ಬೋಟ್ – 15 ಮಂದಿ ಪ್ರವಾಸಿಗರ ರಕ್ಷಣೆ, ನಾಲ್ವರ ಸ್ಥಿತಿ ಗಂಭೀರ

ಚಾಲಕನ ಅಜಾಗರುಕತೆಯಿಂದ ಈ ಅನಾಹುತ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇದನ್ನೂ ಓದಿ: ಸೆಕ್ಸ್ ಗೆ ಮಗು ಅಡ್ಡಿ – 1 ವರ್ಷದ ಮಗುವನ್ನ ಕೊಲೆಗೈದ ತಂದೆ; ಸಿಕ್ಕಿಬಿದ್ದಿದ್ದೇ ರೋಚಕ!

Share This Article