ತಂದೆಯೇ ಮಗು ಕೊಂದ ಪ್ರಕರಣ – ಹಲವು ಸೆಕ್ಸ್ ಚಾಟ್ ಗ್ರೂಪಲ್ಲಿ ಆಕ್ಟೀವ್‌ ಆಗಿದ್ದ ಶಿಜಿಲ್‌

2 Min Read

– ಸೆಕ್ಸ್ ಗೆ ಅಡ್ಡಿ ಅಂತ ಮಗು ಕೊಲೆಗೈದ ತಂದೆ

ತಿರುವನಂತಪುರಂ: ಸೆಕ್ಸ್‌ ಅಡ್ಡಿಪಡಿಸುತ್ತಿದೆ ಅಂತ ತನ್ನ 1 ವರ್ಷದ ಮಗುವನ್ನ ಕೊಂದ (Child Murdered) ಪ್ರಕರಣದಲ್ಲಿ ಮತ್ತಷ್ಟು ರೋಚಕ ಸಂಗತಿಗಳು ಬೆಳಕಿಗೆ ಬಂದಿವೆ. ಮಗುವಿನ ತಂದೆಯೂ ಆಗಿರುವ ಕೊಲೆ ಆರೋಪಿ ಶಿಜಿಲ್‌ ಹಲವು ಸೆಕ್ಸ್‌ ಚಾಟ್‌ ಗ್ರೂಪ್‌ಗಳಲ್ಲಿ ಆಕ್ಟೀವ್‌ ಆಗಿದ್ದ ಅನ್ನೋದು ಪೊಲೀಸರ ವಿವಾರಣೆ ವೇಳೆ ಬೆಳಕಿಗೆ ಬಂದಿದೆ.

ಹೌದು. ಆರೋಪಿ ಶಿಜಿಲ್‌ ಮೊಬೈಲ್‌ (Mobile) ಪರಿಶೀಲಿಸಿದಾಗ ಸೆಕ್ಸ್‌ ಚಾಟ್‌ಗಳ ಆಗರವೇ ಕಂಡುಬಂದಿದೆ. ಹಲವು ಸೆಕ್ಸ್‌ ಚಾಟ್‌ ಗ್ರೂಪ್‌ಗಳಲ್ಲಿ (Sex Chat Group) ಆಕ್ಟೀವ್‌ ಆಗಿದ್ದ ಶಿಜಿಲ್‌, ಮಹಿಳೆಯರ ಜೊತೆ ಸೆಕ್ಸ್ ಚಾಟ್ ಗೆಂದೇ ಗ್ರೂಪ್ ಮಾಡಿಕೊಂಡಿದ್ದ ಅನ್ನೋದು ಗೊತ್ತಾಗಿದೆ. ಪೊಲೀಸರಿಂದ ಪ್ರಕರಣದ ತನಿಖೆ ಮುಂದುವರಿದಿದೆ. ಇದನ್ನೂ ಓದಿ: ಸೆಕ್ಸ್ ಗೆ ಮಗು ಅಡ್ಡಿ – 1 ವರ್ಷದ ಮಗುವನ್ನ ಕೊಲೆಗೈದ ತಂದೆ; ಸಿಕ್ಕಿಬಿದ್ದಿದ್ದೇ ರೋಚಕ!

ಏನಾಗಿತ್ತು?
ಇತ್ತೀಚೆಗಷ್ಟೇ ತಿರುವನಂತಪುರಂನ ನೆಯ್ಯಟ್ಟಿಂಕರದಲ್ಲಿ (Neyyattinkara) 1 ವರ್ಷದ ಮಗು ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಬಳಿಕ ಪೊಲೀಸರ ತನಿಖೆಯಲ್ಲಿ, ಸೆಕ್ಸ್‌ ಗೆ ಅಡ್ಡಿಪಡಿಸಿದ್ದಕ್ಕೆ ತಂದೆಯೇ ಮಗುವನ್ನ ಕೊಲೆಗೈದಿರುವುದು ಗೊತ್ತಾಯಿತು.

ಪ್ರಕರಣಕ್ಕೆ ಟ್ವಿಸ್ಟ್‌ ಕೊಟ್ಟ ಪತ್ನಿ ಹೇಳಿಕೆ
ಜನವರಿ 16 ರಂದು ಐಕಾರವಿಳಕ್ಕಂನ ಕವಲಕುಲಂನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಶಿಜಿಲ್ ಮತ್ತು ಕೃಷ್ಣಪ್ರಿಯಾ ದಂಪತಿ ತಮ್ಮ 1 ವರ್ಷದ ಮಗು ಇಹಾನ್ (ಅಪ್ಪು) ನನ್ನ ಆಸ್ಪತ್ರೆಗೆ ಕರೆತಂದಿದ್ದರು. ಬಿಸ್ಕೆಟ್‌, ದ್ರಾಕ್ಷಿ ತಿಂದ ಬಳಿಕ ಮಗು ಕುಸಿದು ಬಿದ್ದಿದೆ ಎಂದು ಇಬ್ಬರೂ ಹೇಳಿದ್ದರು. ಬಳಿಕ ತುರ್ತು ವಿಭಾಗದಲ್ಲಿ ಇಹಾನ್‌ನನ್ನ ಪರೀಕ್ಷಿಸಿದ ವೈದ್ಯರು ಅವನ ಹೊಟ್ಟೆ ಭಾಗದಲ್ಲಿ ಗಾಯವಾಗಿರುವುದನ್ನ ಪತ್ತೆಹಚ್ಚಿದ್ದರು. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಯಿತು. ಪೊಲೀಸರು ತನಿಖೆ ಕೈಗೆತ್ತಿಕೊಂಡರು.

ಪ್ರಾಥಮಿಕ ವಿಚಾರಣೆ ಬಳಿಕ ದಂಪತಿಯನ್ನ ಮನೆಗೆ ಕಳಿಸಿದ್ದ ಪೊಲೀಸರು ಮರಣೋತ್ತರ ಪರೀಕ್ಷಾ ವರದಿ ಹಾಗೂ ಫೊರೆನ್ಸಿಕ್ ರಿಪೋರ್ಟ್ ಬಂದ ಬಳಿಕ ಪುನಃ ವಿಚಾರಣೆಗೆ ಕರೆಸಿದರು. ಈ ಸಂದರ್ಭದಲ್ಲಿ ಪತ್ನಿ ನೀಡಿದ ಹೇಳಿಕೆ ಪ್ರಕರಣಕ್ಕೆ ಟ್ವಿಸ್ಟ್‌ ನೀಡಿತು. ಇದನ್ನೂ ಓದಿ: ಪ್ರವಚನ ಮುಗಿಸಿ ಹೊರಟವರ ಮೇಲೆ ಬೀದಿ ನಾಯಿಗಳ ದಾಳಿ – 10ಕ್ಕೂ ಹೆಚ್ಚು ಮಂದಿಗೆ ಗಾಯ

ಹೌದು. 2ನೇ ಬಾರಿಗೆ ವಿಚಾರಣೆಗೆ ಹಾಜರಾದಾಗ, ʻಘಟನೆ ನಡೆದ ದಿನ ರಾತ್ರಿ ಗಂಡ ಹೆಂಡತಿ ಸೆಕ್ಸ್ ವೇಳೆ ಮಗು ಅಳೋಕೆ ಶುರು ಮಾಡಿತು. ಇದರಿಂದ ಸಿಟ್ಟಿಗೆದ್ದ ತಂದೆ ಮಗುವನ್ನ ಮಡಿಲಲ್ಲಿಟ್ಟುಕೊಂಡು ಹೊಟ್ಟೆ, ಎದೆ ಭಾಗಕ್ಕೆ ಕೈಯಲ್ಲಿ ಗುದ್ದಿದ್ದಾನೆ. ಈ ಹಿಂದೆಯೂ ಮಗುವನ್ನ ಜೊತೆಯಲ್ಲಿ ಮಲಗಿಸಿದಾಗ ಬೆಡ್ ಶೀಟ್ ನಿಂದ ಮಗುವಿನ ಮುಖ ಮುಚ್ತಿದ್ದ ಅಂತ ಪತ್ನಿ ಕೃಷ್ಣಪ್ರಿಯಾ ಹೇಳಿದ್ದಳು. ಈ ಬೆನ್ನಲ್ಲೇ ಪೋಸ್ಟ್‌ ಮಾರ್ಟಂ ವರದಿಯಲ್ಲೂ ಮಗು ಆಂತರಿಕ ರಕ್ತಸ್ರಾವದಿಂದ ಸಾವನ್ನಪ್ಪಿರುವುದು ದೃಢವಾಗಿತ್ತು.

ವರದಿ ಆಧರಿಸಿ ತನಿಖೆ ನಡೆಸಿದಾಗ ತಂದೆ ಶಿಜಿಲ್‌ ಸತ್ಯ ಬಾಯ್ಬಿಟ್ಟಿದ್ದಾನೆ. ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Share This Article