ಬಜೆಟ್‌ ಬಳಿಕ ಚಿನ್ನ, ಬೆಳ್ಳಿ ದರ ಇಳಿಯುತ್ತಾ?

2 Min Read

ನವದೆಹಲಿ: ಚಿನ್ನ (Gold) ಮತ್ತು ಬೆಳ್ಳಿಯ (Silver) ದರ ಏರಿಕೆ ಆಗುತ್ತಲೇ ಇದೆ. ಆದರೆ ಬಜೆಟ್‌ ನಂತರ ಈ ದರ ಇಳಿಕೆಯಾಗುತ್ತಾ? ಏರಿಕೆಯಾಗುತ್ತಾ? ಎಂಬ ಪ್ರಶ್ನೆ ಎದ್ದಿದೆ.

ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಫೆ.1 ರಂದು ಬಜೆಟ್‌ (Union Budget) ಮಂಡನೆ ಮಾಡಲಿದ್ದಾರೆ. 8 ಬಜೆಟ್‌ ಮಂಡನೆ ಮಾಡಿರುವ ಸೀತಾರಾಮನ್‌ ಮೇಲೆ ಈ ಬಾರಿ ನಿರೀಕ್ಷೆ ಹೆಚ್ಚಾಗಿದೆ.

ಅಮೆರಿಕದ ಅಧ್ಯಕ್ಷ ಟ್ರಂಪ್‌ ಅವರು ದೇಶಗಳ ಮೇಲೆ ಸುಂಕ ಸಮರದ ಬೆದರಿಕೆ ಹಾಕುತ್ತಿರುವ ಕಾರಣ ಹೂಡಿಕೆದಾರರು ಚಿನ್ನ ಮತ್ತು ಬೆಳ್ಳಿಯ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದಾರೆ. ಇದರಿಂದಾಗಿ ಚಿನ್ನ ಮತ್ತು ಬೆಳ್ಳಿಯ ದರ ಭಾರೀ ಏರಿಕೆ ಕಾಣುತ್ತಿದೆ. ದಿನದಿಂದ ದಿನಕ್ಕೆ ಚಿನ್ನ ಬೆಳ್ಳಿಯ ದರ ದುಬಾರಿಯಾಗುತ್ತಿರುವ ಕಾರಣ ಬಜೆಟ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯ ಮೇಲಿರುವ ಕಸ್ಟಮ್ಸ್‌ ಸುಂಕವನ್ನು ಇಳಿಸುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

ಭಾರತದಲ್ಲಿ ಆಮದಾಗುವ ಚಿನ್ನದ ಮೇಲೆ 6% ಸುಂಕವನ್ನು ವಿಧಿಸಲಾಗುತ್ತಿದೆ. ಇದರಲ್ಲಿ 5% ಮೂಲ ಕಸ್ಟಮ್ಸ್‌ ಸುಂಕ, 1% ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್‌ ಜೊತೆಗೆ ಮೌಲ್ಯದ ಮೇಲೆ 3% ಜಿಎಸ್‌ಟಿ ವಿಧಿಸಲಾಗಿದೆ.  ಇದನ್ನೂ ಓದಿ: ಸೆಕ್ಸ್‌ ಗೆ ಮಗು ಅಡ್ಡಿ – 1 ವರ್ಷದ ಮಗುವನ್ನ ಕೊಲೆಗೈದ ತಂದೆ; ಸಿಕ್ಕಿಬಿದ್ದಿದ್ದೇ ರೋಚಕ!

 

ಹಾಗೆ ನೋಡಿದರೆ 2023ರವರೆಗೆ 15% ಸುಂಕ ವಿಧಿಸಲಾಗುತ್ತಿತ್ತು. ಆದರೆ ಕಳ್ಳಸಾಗಾಣಿಕೆಯ ಮೂಲಕ ಅಕ್ರಮವಾಗಿ ಚಿನ್ನವನ್ನು ತರುವ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಸರ್ಕಾರ 2024ರ ಬಜೆಟ್‌ನಲ್ಲಿ ಸುಂಕವನ್ನು 6% ಇಳಿಕೆ ಮಾಡಿತ್ತು.

ಬಜೆಟ್‌ನಲ್ಲಿ ಯಾವುದೇ ಘೋಷಣೆ ಮಾಡದೇ ಇದ್ದರೆ ಚಿನ್ನ ಮತ್ತು ಬೆಳ್ಳಿ ಮೇಲಿನ ತೆರಿಗೆ ಹಾಲಿ ಇರುವಂತೆ ಮುಂದುವರಿಯಲಿದೆ. ಇಳಿಕೆಯಾದರೆ ಮತ್ರ ಚಿನ್ನದ ದರ ಕಡಿಮೆಯಾಗುವ ಸಾಧ್ಯತೆಯಿದೆ.

ಒಂದು ವೇಳೆ ಸುಂಕ ಇಳಿಕೆಯಾದರೂ ವಿಶ್ವದಲ್ಲಿ ನಡೆಯುವ ವಿದ್ಯಮಾನಗಳು ಚಿನ್ನದ ದರದ ಮೇಲೆ ಪ್ರಭಾವ ಬೀರುತ್ತದೆ. ಒಂದು ವೇಳೆ ಡಾಲರ್‌ ಪ್ರಬಲವಾಗಿ ರೂಪಾಯಿ ಮೌಲ್ಯ ಕಡಿಮೆಯಾದರೆ ಚಿನ್ನದ ದರ ಏರಿಕೆಯಾಗುತ್ತದೆ. ಹೀಗಾಗಿ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್‌ ಯಾವ ಘೋಷಣೆ ಮಾಡಬಹುದು ಎಂಬ ಕುತೂಹಲ ಹೆಚ್ಚಾಗಿದೆ.

Share This Article