ಆಟವಾಡುತ್ತಿದ್ದ ಮಕ್ಕಳ ಮೇಲೆ ಹುಚ್ಚು ನಾಯಿ ದಾಳಿ – 10 ಮಂದಿಗೆ ಗಂಭೀರ ಗಾಯ

1 Min Read

ರಾಯಚೂರು: ಜಿಲ್ಲೆಯ (Raichur) ಮಸ್ಕಿ (Maski) ಪಟ್ಟಣದ ಪಿಂಜಾರ ಓಣಿ, ಬಾಳೇಕಾಯಿ ಮಿಲ್ ಸುತ್ತಮುತ್ತ ಹುಚ್ಚು ನಾಯಿಯೊಂದು (Rabid Dog) ಸಿಕ್ಕಸಿಕ್ಕವರಿಗೆ ಕಡಿದಿದೆ. ಆಟವಾಡುತ್ತಿದ್ದ 10 ಮಕ್ಕಳಿಗೂ ಹುಚ್ಚು ನಾಯಿ‌ ಕಡಿತವಾಗಿದ್ದು ಗಂಭೀರ ಗಾಯಗಳಾಗಿವೆ.

ಹುಚ್ಚು ನಾಯಿ ಕಡಿತದಿಂದ ಗಾಯಗೊಂಡ ಮಕ್ಕಳಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಸಿಂಧನೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಭೇಟಿ ಮಾಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. ಇದನ್ನೂ ಓದಿ: ದೆಹಲಿ | ಯಾವುದೇ ಕಾರಣಕ್ಕೂ ಚಿಕ್ಕ ಮಕ್ಕಳು ರೇಬಿಸ್‌ನಿಂದ ಸಾಯಬಾರದು: ಸುಪ್ರೀಂ ಕೋರ್ಟ್‌

ಹುಚ್ಚು ನಾಯಿ ತಪ್ಪಿಸಿಕೊಂಡಿದ್ದು ಇನ್ನಷ್ಟು ಜನರಿಗೆ ಕಡಿಯುವ ಆತಂಕ ಎದುರಾಗಿದೆ. ಪುರಸಭೆ ಅಧ್ಯಕ್ಷ ಸುರೇಶ್ ಹರಸೂರು ಹುಚ್ಚು ನಾಯಿ ಸೆರೆ ಹಿಡಿಯಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಬೀದಿ ನಾಯಿ ಹಾವಳಿ ಹೆಚ್ಚಾಗಿದ್ದು ಪಟ್ಟಣದಲ್ಲಿ ಹೆಚ್ಚಾಗಿದ್ದು ಅಗತ್ಯ ಕ್ರಮ ಕೈಗೊಳ್ಳುವಂತೆ ಜನರು ಆಗ್ರಹಿಸಿದ್ದಾರೆ. ಇದನ್ನೂ ಓದಿ: 2030ಕ್ಕೆ  ರೇಬೀಸ್‌ ನಿರ್ಮೂಲನೆ – ಪಣ ತೊಟ್ಟ ಕೇಂದ್ರದ ಮುಂದಿರೋ ಸವಾಲುಗಳೇನು? 

Share This Article