ವಿದೇಶದಲ್ಲಿ ನಾನು ಭಾರತದ ವಿರುದ್ಧ ಮಾತನಾಡಲ್ಲ: ಡಿಕೆಶಿ

1 Min Read

ಬೆಂಗಳೂರು: ವಿದೇಶದಲ್ಲಿ ದೇಶದ ವಿರುದ್ದ ನಾನು ಮಾತನಾಡುವುದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಹೇಳಿದ್ದಾರೆ.

ದಾವೋಸ್ (Davos) ಪ್ರವಾಸದಲ್ಲಿ ದೇಶದ ಆರ್ಥಿಕ ಸ್ಥಿತಿ ಚೆನ್ನಾಗಿದೆ ಎಂದು ಹೇಳಿದ್ದೇನೆ. ಬೇರೆ ದೇಶಕ್ಕೆ ಹೋಗಿ ನಮ್ಮ‌ ದೇಶದ ವಿರುದ್ದ ಮಾತನಾಡೋಕೆ ಆಗುತ್ತಾ ಎಂದು ಡಿಸಿಎಂ ಪ್ರಶ್ನಿಸಿದ್ದಾರೆ.

ರಾಹುಲ್‌ ಗಾಂಧಿ ಭಾರತದ ಆರ್ಥಿಕತೆ ಸರಿ ಇಲ್ಲ ಎಂದು ಹೇಳುವಾಗ ನೀವು ಭಾರತವನ್ನು ಹೊಗಳಿದ್ದೀರಿ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಹುಲ್‌ ಗಾಂಧಿ ಯಾವ ಸನ್ನಿವೇಶದಲ್ಲಿ, ಯಾವ ಅರ್ಥದಲ್ಲಿ ಈ ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ. ಅವರು ದೇಶದ ವಿರುದ್ಧ ಹೇಳಿಕೆ ನೀಡಿಲ್ಲ. ಆಂತರಿಕ ವ್ಯವಸ್ಥೆಯ ಬಗ್ಗೆ ಹೇಳಿದ್ದಾರೆ. ರಾಜಕೀಯಕ್ಕೆ ನಾನು ಭಾರತವನ್ನು ಬೈಯಲು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಐಸಿಸಿ ಚಾಟಿಗೆ ಮಂಡಿಯೂರಿದ ಪಾಕ್‌ – ಟಿ20 ವಿಶ್ವಕಪ್‌ಗೆ ತಂಡ ಪ್ರಕಟ; ಬಾಬರ್‌ ಆಜಂ ಬ್ಯಾಕ್‌

 

ನನಗೆ ಅಷ್ಟೋ ಇಷ್ಟೋ ರಾಜಕೀಯ ಅನುಭವ ಇದೆ. ಅದರ ಮೇಲೆ ಹೇಳಿದ್ದೇನೆ. ನಾನು ಯಾವುದೋ ದೇಶಕ್ಕೆ ಹೋಗಿ ನಮ್ಮ ದೇಶಕ್ಕೆ ಧಕ್ಕೆ ತರುವುದಕ್ಕೆ ಆಗುವುದಿಲ್ಲ. ನಾವು ನಮ್ಮ ದೇಶವನ್ನು ಬಿಟ್ಟು ಕೊಡಲು ಸಾಧ್ಯವಿಲ್ಲ. ಮೊದಲು ನಾವು ಭಾರತೀಯರು. ನಾನು ದೇಶವನ್ನು ಪ್ರೀತಿಸುತ್ತೇನೆ ಗೌರವಿಸುತ್ತೇನೆ. ಭಾರತದ ಅಭಿವೃದ್ಧಿಗೆ ನಮ್ಮೆಲ್ಲರ ಕೊಡುಗೆ ಇದೆ. ನಾಳೆ ಭಾರತ 77ನೇ ಗಣರಾಜ್ಯೋತ್ಸವ ಆಚರಣೆ ನಡೆಸಲಿದೆ. ನಾವೆಲ್ಲರೂ ಸಂಭ್ರಮದಿಂದ ಆಚರಿಸೋಣ ಎಂದು ಹೇಳಿದರು.  ಇದನ್ನೂ ಓದಿ: 3 ಲಕ್ಷಕ್ಕೂ ಹೆಚ್ಚು ಸ್ಕೂಟರ್‌ ಹಿಂಪಡೆದ ಯಮಹಾ ಮೋಟಾರ್‌
Share This Article