3 ಲಕ್ಷಕ್ಕೂ ಹೆಚ್ಚು ಸ್ಕೂಟರ್‌ ಹಿಂಪಡೆದ ಯಮಹಾ ಮೋಟಾರ್‌

1 Min Read

ನವದೆಹಲಿ: ದೋಷಪೂರಿತ ಬ್ರೇಕ್ ಭಾಗವನ್ನು (Faulty Brake Part) ಸರಿಪಡಿಸಲು 3 ಲಕ್ಷಕ್ಕೂ ಹೆಚ್ಚು RayZR 125 Fi Hybrid ಮತ್ತು Fascino 125 Fi Hybrid  ಸ್ಕೂಟರ್ ಮಾದರಿಗಳನ್ನು ಹಿಂಪಡೆಯಲಾಗುತ್ತಿದೆ ಎಂದು ಇಂಡಿಯಾ ಯಮಹಾ ಮೋಟಾರ್ (India Yamaha Motor) ಹೇಳಿದೆ.

ಮೇ 2, 2024 ರಿಂದ ಸೆಪ್ಟೆಂಬರ್ 3, 2025 ರ ನಡುವೆ ತಯಾರಿಸಲಾದ ತನ್ನ 125 ಸಿಸಿ ಸ್ಕೂಟರ್ ಮಾದರಿಗಳ 3,06,635 ಯೂನಿಟ್‌ಗಳಿಗೆ ಕಂಪನಿಯು ಸ್ವಯಂಪ್ರೇರಿತವಾಗಿ ಹಿಂಪಡೆಯುವ ಅಭಿಯಾನವನ್ನು ಪ್ರಾರಂಭಿಸಿದೆ. ಇದು ತಕ್ಷಣದಿಂದ ಜಾರಿಗೆ ಬರುತ್ತದೆ ಎಂದು ಇಂಡಿಯಾ ಯಮಹಾ ಮೋಟಾರ್ ಹೇಳಿಕೆಯಲ್ಲಿ ತಿಳಿಸಿದೆ.

ಈ ಅಭಿಯಾನದ ಅಡಿಯಲ್ಲಿ ಬರುವ ಎಲ್ಲಾ ವಾಹನಗಳಿಗೆ ನಿರ್ದಿಷ್ಟ ಭಾಗವನ್ನು ಅಧಿಕೃತ ಯಮಹಾ ಸರ್ವಿಸ್‌ ಕೇಂದ್ರಗಳಲ್ಲಿ ಉಚಿತವಾಗಿ ಬದಲಾಯಿಸಿ ಕೊಡಲಾಗುತ್ತದೆ ಎಂದು ಕಂಪನಿ ಹೇಳಿದೆ. ಇದನ್ನೂ ಓದಿ: Explained | ಮತ್ತೆ ಬಟನ್‌ ಫೀಚರ್‌ನೊಂದಿಗೆ ಬರಲಿವೆ ಕಾರುಗಳು- ಟಚ್‌ಸ್ಕ್ರೀನ್‌ ಬೇಡ ಯಾಕೆ?

ಕೆಲವು ಸ್ಕೂಟರ್‌ಗಳಲ್ಲಿ ಮುಂಭಾಗದ ಬ್ರೇಕ್ ಕ್ಯಾಲಿಪರ್‌ನಲ್ಲಿ ದೋಷವಿರುವುದು ಕಂಪನಿಯ ಆಂತರಿಕ ಮೌಲ್ಯಮಾಪನದಲ್ಲಿ ಬಹಿರಂಗವಾಗಿದೆ. ಎಲ್ಲಾ ಸ್ಕೂಟರ್‌ಗಳಲ್ಲಿ ಈ ದೋಷ ಇಲ್ಲದೇ ಇದ್ದರೂ ಸುರಕ್ಷತೆ ದೃಷ್ಟಿಯಿಂದ ಹಿಂಪಡೆಯಲು ಯಮಹಾ ಮುಂದಾಗಿದೆ.

ಯಮಹಾ ಮಾಲೀಕರಿಗೆ ಚಾಸಿಸ್ ಸಂಖ್ಯೆ ಆಧಾರಿತ ಪರಿಶೀಲನಾ ವ್ಯವಸ್ಥೆಯನ್ನು ಆರಂಭಿಸಿದೆ. ಗ್ರಾಹಕರು ಅಧಿಕೃತ ಇಂಡಿಯಾ ಯಮಹಾ ಮೋಟಾರ್ ವೆಬ್‌ಸೈಟ್‌ಗೆ ಲಾಗಿನ್ ಆಗಿ ಚಾಸಿಸ್ ಸಂಖ್ಯೆಯನ್ನು ನಮೂದಿಸಿ ಪರಿಶೀಲಿಸಿಕೊಳ್ಳಬಹುದು.

Share This Article