ಸ್ವಿಮ್ಮಿಂಗ್ ಪೂಲ್‌ನಲ್ಲಿ ಮಹಿಳೆಯ ಶವ ಪತ್ತೆ – ಪತಿಯಿಂದಲೇ ಕೊಲೆ ಆರೋಪ

1 Min Read

ರಾಮನಗರ: ಸ್ವಿಮ್ಮಿಂಗ್ ಪೂಲ್‌ನಲ್ಲಿ (Swimming Pool) ಅನುಮಾನಾಸ್ಪದ ರೀತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿರುವ ಘಟನೆ ಕನಕಪುರ (Kanakapura) ತಾಲೂಕಿನ ಬೆಟ್ಟೆಗೌಡನಪಾಳ್ಯದಲ್ಲಿ ನಡೆದಿದೆ.

ಪ್ರತಿಭಾ (29) ಮೃತ ಮಹಿಳೆ. ಪ್ರತಿಮಾ ಹಾಗೂ ಪತಿ ಬಾಬು ಗ್ರಾಮದ ಹೊರವಲಯದಲ್ಲಿರೋ ತೋಟದ ಮನೆಯಲ್ಲಿ ವಾಸವಾಗಿದ್ದರು. ಪ್ರತಿಮಾ ಬಾಬುಗೆ ಎರಡನೇ ಪತ್ನಿಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಕೌಟುಂಬಿಕ ಕಲಹದಿಂದ ಗಲಾಟೆಯಾಗಿ ಪತಿ ಬಾಬು ಕೊಲೆ ಮಾಡಿದ್ದಾನೆ ಎಂದು ಪ್ರತಿಭಾ ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: NOC ಇಲ್ಲ, ಯಾವುದೇ ಟೂರ್ನಿಯಿಲ್ಲ – ಬಾಂಗ್ಲಾಗೆ ಬೆಂಬಲ ನೀಡಲು ಹೋಗಿ ಅಡಕತ್ತರಿಯಲ್ಲಿ ಸಿಲುಕಿದ ಪಾಕ್‌

ಇನ್ನೂ ಸ್ಥಳಕ್ಕೆ ಕೋಡಿಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಪ್ರತಿಮಾ ಕುಟುಂಬಸ್ಥರ ದೂರಿನ ಮೇಲೆ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯ ಸಜೀವ ದಹನ – ಪ್ರೀ ಪ್ಲ್ಯಾನ್ಡ್‌ ಮರ್ಡರ್‌ ಅಂತ ಕುಟುಂಬ ಆರೋಪ

Share This Article