ರೆಡ್ಡಿಗೆ ಸೇರಿದ ಮಾಡೆಲ್‌ ಹೌಸ್‌ನಲ್ಲಿ ಅಗ್ನಿ ಅವಘಡ – ಕಾಂಗ್ರೆಸ್‌ನವರ ಕೃತ್ಯ ಎಂದ ಸೋಮಶೇಖರ ರೆಡ್ಡಿ

1 Min Read

ಬಳ್ಳಾರಿ: ಜನಾರ್ದನ ರೆಡ್ಡಿ (Janardhan Reddy), ಶ್ರೀರಾಮುಲು ಅವರಿಗೆ ಸೇರಿದ ಮಾಡೆಲ್ ಹೌಸ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಇಂದು ಸಂಜೆ ಆರೂವರೆ ವೇಳೆಗೆ ಜಿ ಸ್ಕೈರ್ ಲೇಔಟ್‌ನಲ್ಲಿರುವ ಮಾಡೆಲ್ ಹೌಸ್ ಬೆಂಕಿ ಹೊತ್ತಿಕೊಂಡು ಉರಿದಿದೆ.

ಕಾಂಗ್ರೆಸ್‌ನವರ ಕೃತ್ಯದಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಅರೋಪ ಮಾಡಿದ್ದಾರೆ. ಮೊನ್ನೆ ಬ್ಯಾನರ್ ಗಲಾಟೆಯಾದಾಗ ಬೆಂಕಿ ಹಚ್ಚುತ್ತೇನೆಂದು ಗದರಿಸಿದ್ದರು. ಅಂದಿನ ಹೇಳಿಕೆಗೆ ಪೂರಕ ಎನ್ನುವಂತೆ ನಮಗೆ ಸೇರಿದ ಮಾಡೆಲ್ ಹೌಸ್ ಗೆ ಬೆಂಕಿ ಹಚ್ಚಿದ್ದಾರೆ ಎಂದು ದೂರಿದ್ದಾರೆ.  ಇದನ್ನೂ ಓದಿ:  ಕುಡಿದು ವಾಹನ ಚಾಲನೆ – 11,500 ಚಾಲಕರ ಡಿಎಲ್‌ ರದ್ದು

ಬೆಂಕಿ ಹಚ್ಚಿದ ನಂತರ ಕೆಲವರು ಓಡಿದ್ದಾರೆ. ಅವರು ಹಿಡಿಯಲು ಹೋದಾಗ ಪರಾರಿಯಾಗಿದ್ದಾರೆ. ನೂರು ಎಕರೆ ಪ್ರದೇಶದಲ್ಲಿ ಲೇಔಟ್ ಮಾಡಲಾಗಿತ್ತು. ಇದರಲ್ಲಿ ಮನೆ ಖರೀದಿ ಮಾಡುವವರಿಗೆ ತೋರಿಸಲು ಮಾಡೆಲ್ ಹೌಸ್ ನಿರ್ಮಾಣ ಮಾಡಲಾಗಿತ್ತು ಎಂದು ಸೋಮೇಶಖರ್‌ ರೆಡ್ಡಿ ಹೇಳಿದರು.

Share This Article