ಶನಿವಾರದಿಂದ ಸತತ ಮೂರು ದಿನ ರಜೆ – ಬಿಎಂಟಿಸಿಯಿಂದ ಹೆಚ್ಚುವರಿ ಬಸ್‌ಗಳ ನಿಯೋಜನೆ

1 Min Read

– ರಾಜ್ಯದ ಹಲವು ಜಿಲ್ಲೆಗಳಿಗೆ ಬಿಎಂಟಿಸಿ ಸಂಚಾರ

ಬೆಂಗಳೂರು: ಶನಿವಾರದಿಂದ ಸತತ ಮೂರು ದಿನಗಳ ರಜೆ ಹಿನ್ನೆಲೆ ಬಿಎಂಟಿಸಿಯಿಂದ (BMTC) ಹೆಚ್ಚುವರಿ ಬಸ್‌ಗಳ ನಿಯೋಜನೆ ಮಾಡಲಾಗಿದೆ.

ಜ.24 ನಾಲ್ಕನೇ ಶನಿವಾರ, ಜ.25 ಭಾನುವಾರ ಹಾಗೂ ಜ.26ರಂದು ಗಣರಾಜ್ಯೋತ್ಸವ ಹಿನ್ನೆಲೆ ಸಾಲುಸಾಲು ರಜೆ ಇದೆ. ಈ ಹಿನ್ನೆಲೆ ಪ್ರಯಾಣಿಕರಿಗೆ ತೊಂದರೆ ಆಗದಂತೆ ಕೆಎಸ್‌ಆರ್‌ಟಿಸಿ ಬಸ್‌ಗಳ ಜೊತೆ ಬಿಎಂಟಿಸಿ ಬಸ್‌ಗಳು ಕೂಡ ಓಡಾಟ ನಡೆಸಲಿವೆ. ರಾಜ್ಯದ ಹಲವು ಜಿಲ್ಲೆಗಳಿಗೆ ಬಿಎಂಟಿಸಿ ಬಸ್‌ಗಳು ಸಂಚರಿಸಲಿವೆ. ಇದನ್ನೂ ಓದಿ: ಹುಬ್ಬಳ್ಳಿಯ ಪ್ರತಿಷ್ಠಿತ ಮಾಲ್‌ನಲ್ಲಿ ಅಗ್ನಿ ಅವಘಡ – ಹೊತ್ತಿಯುರಿದ 60ಕ್ಕೂ ಹೆಚ್ಚು ಅಂಗಡಿಗಳು

ಇಂದು 265 ಬಿಎಂಟಿಸಿ ಬಸ್‌ಗಳು ರಾಜ್ಯದ ಹಲವು ಜಿಲ್ಲೆಗಳಿಗೆ ಸಂಚರಿಸಲಿವೆ. ನಾಳೆ 500ಕ್ಕೂ ಹೆಚ್ಚು ಬಿಎಂಟಿಸಿ ಬಸ್‌ಗಳು ಸಂಚಾರ ಮಾಡಲಿವೆ. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಬೈಕ್ ಟ್ಯಾಕ್ಸಿಗೆ ಅವಕಾಶ

Share This Article