ಕಲಬುರಗಿ, ಯಾದಗಿರಿಯಲ್ಲಿ ಮನ್ರೇಗಾದಲ್ಲಿ ಭಾರೀ ಅಕ್ರಮ: ಶಿವರಾಜ್‌ ಸಿಂಗ್‌ ಚೌಹಾಣ್‌

2 Min Read

ಬೆಂಗಳೂರು: ಕಲಬುರಗಿ (Kalaburagi), ಯಾದಗಿರಿಯಲ್ಲಿ (Yadagiri) ಮನ್ರೇಗಾದಲ್ಲಿ (MGNREGA) ಭಾರೀ ಅಕ್ರಮ ನಡೆದಿದೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಚೌಹಾಣ್ (Shivraj Singh Chauhan) ಗಂಭೀರ ಆರೋಪ ಮಾಡಿದ್ದಾರೆ.

ಜಿರಾಮ್ ಜಿ ಕಾಯ್ದೆ ಬಗ್ಗೆ ಬಿಜೆಪಿ (BJP) ಹಾಗೂ ಜೆಡಿಎಸ್ ಶಾಸಕರಿಗೆ ಶಿವರಾಜ್ ಸಿಂಗ್ ಚೌಹಾಣ್ ಬೆಂಗಳೂರಿಗೆ ಆಗಮಿಸಿ ಉಪನ್ಯಾಸ ನೀಡಿದ್ದಾರೆ. ಈ ಕಾಯ್ದೆಯ ಸಾಧಕ-ಬಾಧಕ ಬಗ್ಗೆ ವಿವರಣೆ ನೀಡಿದ್ದಾರೆ.

ಇದಕ್ಕೂ ಮುನ್ನ ಮಾತನಾಡಿದ ಶಿವರಾಜ್ ಸಿಂಗ್ ಚೌಹಾಣ್, ಕಾಂಗ್ರೆಸ್ ತನ್ನ ಪರಿಕಲ್ಪನೆ, ಸಿದ್ಧಾಂತ, ಆದರ್ಶ ಕಳೆದುಕೊಂಡಿದೆ. ಈಗ ಗಾಂಧೀಜಿ ಆದರ್ಶ, ಸಿದ್ಧಾಂತವನ್ನೂ ಕಾಂಗ್ರೆಸ್ ಮುಗಿಸುವ ಪಾಪ ಮಾಡಿದೆ. ಇವತ್ತು ವಿಧಾನಸಭೆಯಲ್ಲಿ ರಾಜ್ಯಪಾಲರಿಗೆ ಅಗೌರವ ತೋರಿ ಪ್ರಜಾಪ್ರಭುತ್ವ ವಿರೋಧಿ ನಡೆ ತೋರಿದೆ ಅಂತ ದೂರಿದ್ದಾರೆ. ಇದನ್ನೂ ಓದಿ: ಚುಟುಕು ಭಾಷಣಗೈದು ಜಾಣತನ ಮೆರೆದ ಗೆಹ್ಲೋಟ್‌! – ಇಂದು ಸದನದಲ್ಲಿ ಏನಾಯ್ತು?

ಮನರೇಗಾದಲ್ಲಿ ಹೇಗೆ ಅಕ್ರಮ ಆಗಿದೆ ಎನ್ನುವುದಕ್ಕೆ ಕಲಬುರಗಿ, ಯಾದಗಿರಿಯ ಉದಾಹರಣೆ ನೀಡಿ, ಕಲಬುರಗಿಗೆ ಕೇಂದ್ರದ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಒಂದು ತಂಡ ಕಳಿಸಲಾಗಿತ್ತು. ಅಲ್ಲಿನ 5 ಗ್ರಾಮಗಳ ಮನ್ರೇಗಾ ಕೆಲಸಗಳ ಪರಿಶೀಲನೆ ನಡೆಸಿದಾಗ ಭಾರೀ ಅಕ್ರಮ ಬಯಲಿಗೆ ಬಂತು. ಯಂತ್ರಗಳಿಂದ ಕೆಲಸ ಮಾಡಿಸಿ ಕೂಲಿಗಳಿಗೆ ಕೊಟ್ಟಿರುವ ದಾಖಲೆ ಸೃಷ್ಟಿಸಲಾಗಿತ್ತು ಎಂದು ಆರೋಪಿಸಿದರು.

ಸ್ಮಶಾನವನ್ನು ಭೂ ಅಭಿವೃದ್ಧಿ ರೂಪದಲ್ಲಿ ತೋರಿಸಿ ಲೂಟಿ ಮಾಡಲಾಗಿತ್ತು. ಯಾದಗಿರಿಯಲ್ಲಿ ಪುರುಷರು ಮಹಿಳೆಯರ ವೇಷ ಧರಿಸಿ ಮನ್ರೇಗಾ ಕೂಲಿ ಹಣ ಪಡೆದಿದ್ದಾರೆ. ಆಡಿಟ್‌ನಲ್ಲಿ ಅಕ್ರಮ, ಅವ್ಯವಹಾರ ಬಯಲಿಗೆ ಬಂದಿದೆ. 3,551 ಪ್ರಕರಣಗಳಲ್ಲಿ ಕಾಂಗ್ರೆಸ್ ತನಿಖೆ ಮಾಡಲಿಲ್ಲ. ಮನ್ರೇಗಾದಲ್ಲಿ ಪಾರದರ್ಶಕತೆ ಇರಲಿಲ್ಲ. ಸಿಎಜಿ ವರದಿಯಲ್ಲಿ ಮನ್ರೇಗಾ ಅಕ್ರಮ ಬಗ್ಗೆ ಉಲ್ಲೇಖ ಆಗಿದೆ ಅಂತ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

Share This Article