ಲಾಂಗ್ ವೀಕೆಂಡ್ ಎಫೆಕ್ಟ್ – ಪ್ರಯಾಣಿಕರಿಗೆ ದರ ಏರಿಕೆ ಬಿಸಿ

1 Min Read

– ಖಾಸಗಿ ಬಸ್‌ಗಳ ದರ ಡಬಲ್

ಬೆಂಗಳೂರು: ಲಾಂಗ್ ವೀಕೆಂಡ್ ಹಾಗೂ ಗಣರಾಜ್ಯೋತ್ಸವ ರಜೆ ಹಿನ್ನೆಲೆ ಪ್ರಯಾಣಿಕರಿಗೆ ದರ ಏರಿಕೆ ಬಿಸಿ ತಟ್ಟಿದೆ. ಸಾಲುಸಾಲು ರಜೆ ಹಿನ್ನೆಲೆ ಖಾಸಗಿ ಬಸ್‌ಗಳ (Private Bus) ದರ ಏರಿಕೆಯಾಗಿದೆ.

ಪ್ರತಿ ಬಾರಿಯೂ ಸಾಲು ಸಾಲು ರಜೆ ಬಂದಾಗ ಖಾಸಗಿ ಬಸ್‌ಗಳು ಬೇಕಾಬಿಟ್ಟಿ ದರ ಏರಿಕೆ ಮಾಡುತ್ತವೆ. ಇದೀಗ ಮತ್ತೆ ಖಾಸಗಿ ಬಸ್‌ಗಳ ದರ ಡಬಲ್ ಆಗಿದ್ದು, ವೀಕೆಂಡ್ ಜೊತೆ ಗಣರಾಜ್ಯೋತ್ಸವ ರಜೆ ಅಂತ ಊರಿಗೆ ಹೊರಟವರ ಜೇಬು ಸುಡುತ್ತಿದೆ.

ಎಲ್ಲಿಂದ ಎಲ್ಲಿಗೆ, ಎಷ್ಟು ದರ ಏರಿಕೆ?
ಬೆಂಗಳೂರು-ಮಂಗಳೂರು
ಸಾಮಾನ್ಯ ದಿನದ ದರ 500 – 800 ರೂ.
ಇಂದಿನ ದಿನದ ದರ 1,400 – 2,000 ರೂ.

ಬೆಂಗಳೂರು – ಉಡುಪಿ
ಸಾಮಾನ್ಯ ದಿನದ ದರ 600 – 750 ರೂ.
ಇಂದಿನ ದಿನದ ದರ 1,650 – 1,700 ರೂ.

ಬೆಂಗಳೂರು – ಚಿಕ್ಕಮಗಳೂರು
ಸಾಮಾನ್ಯ ದಿನದ ದರ 550 – 600 ರೂ.
ಇಂದಿನ ದರ 1,500 – 1,600 ರೂ.

ಬೆಂಗಳೂರು-ಹಾಸನ
ಸಾಮಾನ್ಯ ದಿನದ ದರ 650 – 850 ರೂ.
ಇಂದಿನ ದರ 700 – 1,500 ರೂ.

ಬೆಂಗಳೂರು- ಬೆಳಗಾವಿ
ಸಾಮಾನ್ಯ ದಿನದ ದರ 1,200- 1,400 ರೂ.
ಇಂದಿನ ದರ 2,500 – 3,000 ರೂ.

Share This Article