– ನಿಮ್ಮ ಪ್ರೀತಿ, ಪ್ರೋತ್ಸಾಹ ಹೀಗೆ ಇರಲಿ, ನಾನು ಕೊನೆವರೆಗೂ ಉಳಿಸಿಕೊಳ್ಳುತ್ತೇನೆ
– ಯಾರು ಅಂತಾನೇ ಗೊತ್ತಿಲ್ಲ ಪಾಪ ಟ್ಯಾಟೋ ಹಾಕೊಂಡಿದ್ದಾರೆ: ಗಿಲ್ಲಿ ಧನ್ಯವಾದ
ಬಿಗ್‌ಬಾಸ್ ಕನ್ನಡ ಸೀಸನ್ 12ರ (Bigg Boss Season 12) ವಿನ್ನರ್ ಗಿಲ್ಲಿ ನಟ (Gilli Nata) ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ದೇಶ ಕಾಯುವ ಯೋಧರು, ಚಿಕ್ಕಮಕ್ಕಳಿಂದಲೂ ಹಿಡಿದು ಎಲ್ಲರೂ ಪ್ರೀತಿ ಕೊಟ್ಟು, ಸಪೋರ್ಟ್ ಮಾಡಿದ್ದೀರಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ತಮ್ಮ ಇನ್‌ಸ್ಟಾ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಶೇರ್ ಮಾಡಿರುವ ವಿಡಿಯೋದಲ್ಲಿ, ನಮ್ಮ ಕನ್ನಡಿಗರಿಗೆ, ನಮ್ಮ ಕನ್ನಡ ಜನತೆಗೆ ನಿಜಕ್ಕೂ ಯಾವ ರೀತಿ ಕೃತಜ್ಞತೆ ಹೇಳಬೇಕು ಎಂದು ತಿಳಿಯುತ್ತಿಲ್ಲ. ನಾನು ಬಿಗ್‌ಬಾಸ್ ಮನೆಯಲ್ಲಿದ್ದಾಗ ಹೊರಗಡೆ ನನಗೆ ಈ ತರ ಸಪೋರ್ಟ್ ಸಿಗ್ತಿದೆ, ನನ್ನನ್ನೂ ಎಲ್ಲರೂ ಈ ರೀತಿಯಾಗಿ ಪ್ರೀತಿಸ್ತಿದ್ದಾರೆ. ಇಷ್ಟೊಂದು ಪ್ರೀತಿ, ಪ್ರೋತ್ಸಾಹ ಕೊಡ್ತಿದ್ದಾರೆ ಎಂದು ಕನಸಲ್ಲಿಯೂ ಅಂದುಕೊಂಡಿರಲಿಲ್ಲ. ಆಚೆ ಬಂದಮೇಲೆ ಇದನ್ನೆಲ್ಲಾ ನೋಡಿ ಸಖತ್ ಖುಷಿಯಾಗಿದೆ. ನಿಜಕ್ಕೂ ನಂಬೋದಕ್ಕೆ ಆಗುತ್ತಿಲ್ಲ ಎಂದಿದ್ದಾರೆ.
View this post on Instagram
ದೇಶ ಕಾಯುವ ಯೋಧರು ಕೂಡ ವಿಡಿಯೋ ಮಾಡಿ, ನನಗೆ ಹರಸಿ, ಹಾರೈಸಿದ್ದಾರೆ. ನಮ್ಮ ಕನ್ನಡ ಜನತೆ ಮಾತ್ರವಲ್ಲದೇ ಬೇರೆ ರಾಜ್ಯದವರು ತಮಿಳುನಾಡು, ಆಂಧ್ರದವರು, ಬೇರೆ ದೇಶದವರು ಬೆಂಬಲಿಸಿದ್ದಾರೆ. ನಮ್ಮ ರೈತರು ಸಂಕ್ರಾಂತಿ ಹಬ್ಬದಲ್ಲಿ ಹಸುಗಳ ಮೇಲೆ ಚಿತ್ರ ಬಿಡಿಸಿ, ಫೋಟೋ ಹಾಕಿ ಸಪೋರ್ಟ್ ಮಾಡಿದ್ದಾರೆ. ಆಟೋ ಡ್ರೈವರ್‌ಗಳು ಸ್ಟಿಕ್ಕರ್ ಹಾಕಿ, ಯಾರು ಅಂತಾನೇ ಗೊತ್ತಿಲ್ಲ ಪಾಪ ಟ್ಯಾಟೂ ಹಾಕೊಂಡಿದ್ದಾರೆ. ಒಬ್ರು, ಇಬ್ರೂ ಅಂತಲ್ಲ, ಚಿಕ್ಕ ಮಕ್ಕಳಿಂದಲೂ ಹಿಡಿದು ದೊಡ್ಡವರ ತನಕ ಎಲ್ಲರೂ ಪ್ರೀತಿ, ಪ್ರೋತ್ಸಾಹ ಕೊಟ್ಟಿದ್ದಾರೆ. ಈಗಲೂ ಕೊಡ್ತಿದ್ದಾರೆ ಎಂದು ಕೃತಜ್ಞತೆ ತಿಳಿಸಿದ್ದಾರೆ.
ಎಲ್ಲಾ ಮೀಡಿಯಾಗಳು ಅಷ್ಟೊಂದು ಸಪೋರ್ಟ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈವರೆಗೂ ನನ್ನ ಬಗ್ಗೆ ಒಂದು ನೆಗೆಟಿವ್, ಟ್ರೋಲ್ ವಿಡಿಯೋ ನೋಡಲಿಲ್ಲ, ನಿಮ್ಮ ಪ್ರೀತಿ, ಪ್ರೋತ್ಸಾಹ ಹೀಗೆ ಇರಲಿ. ನಾನು ಕೊನೆವರೆಗೂ ಉಳಿಸಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.


