4 ಮನೆ ಸೇರಿ 14 ಕೋಟಿ ಆಸ್ತಿ – ಜಮೀರ್ ಆಪ್ತನ ಮನೆಯಲ್ಲಿ ಲೋಕಾ ದಾಳಿ ವೇಳೆ ಸಿಕ್ಕ ಆಸ್ತಿ ಮೌಲ್ಯ ಬಹಿರಂಗ!

1 Min Read

ಬೆಂಗಳೂರು: ಸಚಿವ ಜಮೀರ್ ಅಹಮದ್ ಖಾನ್ ಆಪ್ತ ಸರ್ಫರಾಜ್ ಖಾನ್ ಮನೆಯಲ್ಲಿ ಲೋಕಾಯುಕ್ತ ದಾಳಿಯ ವೇಳೆ ಸಿಕ್ಕಿರುವ ಆಸ್ತಿಯ ಮೌಲ್ಯದ ಮಾಹಿತಿ ಬಹಿರಂಗಗೊಂಡಿದೆ.

ಒಟ್ಟು 4 ಮನೆ, 8 ಕೋಟಿ ಮೌಲ್ಯದ 37 ಎಕರೆ ವ್ಯವಸಾಯದ ಜಮೀನು ಪತ್ರಗಳು ಸಿಕ್ಕಿವೆ. ಅಲ್ಲದೇ 66,500 ರೂಪಾಯಿ ನಗದು, 2.99 ಕೋಟಿ ಮೌಲ್ಯದ ಚಿನ್ನಾಭರಣ, ಐಷಾರಾಮಿ ಕಾರುಗಳು, 1 ಕೋಟಿ 29 ಸಾವಿರ ಠೇವಣಿ ಖಾತೆ ಸೇರಿ ಒಟ್ಟು ಆಸ್ತಿ 14.38 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ವಸತಿ ಸಚಿವರ ಪಿಎಸ್‌ ನಿಂದಲೇ ಅಕ್ರಮ ರೆಸಾರ್ಟ್‌ ನಿರ್ಮಾಣ; ಭಾರೀ ಆಕ್ರೋಶ

ಡಿಸೆಂಬರ್ 12 ರಂದು ಲೋಕಾಯುಕ್ತ ಅಧಿಕಾರಿಗಳು ಸರ್ಫರಾಜ್ ಖಾನ್‌ಗೆ ಸೇರಿರುವ ಒಟ್ಟು 13 ಸ್ಥಳಗಳಲ್ಲಿ ದಾಳಿ ಮಾಡಿದ್ದರು. ಇದನ್ನೂ ಓದಿ:  ತೈಲ ಸ್ಮಗ್ಲಿಂಗ್ ದಂಧೆ – ಶಿಪ್‌ ಮಾಲೀಕರು ಶಾಮೀಲಾಗಿರೋ ಶಂಕೆ; 2 ಆಯಾಮಗಳಲ್ಲಿ ಪೊಲೀಸ್‌ ತನಿಖೆಗೆ ಸಿದ್ಧತೆ

ಇತ್ತೀಚೆಗಷ್ಟೇ ಸರ್ಫರಾಜ್‌ ಖಾನ್‌ ವಿರುದ್ಧ ಮಡಿಕೇರಿ (Madikeri) ತಾಲೂಕಿನ ಗಾಳಿಬೀಡು ಗ್ರಾಪಂ ವ್ಯಾಪ್ತಿಯ ವಣಚಲಿನಲ್ಲಿ ಅಕ್ರಮವಾಗಿ ರೆಸಾರ್ಟ್‌ ನಿರ್ಮಾಣ ಮಾಡಿರುವ ಆರೋಪ ಕೇಳಿಬಂದಿತ್ತು. ಇದನ್ನೂ ಓದಿ: ವಿಜಯಪುರ ಪೊಲೀಸರ ಭರ್ಜರಿ ಬೇಟೆ – ಬರೋಬ್ಬರಿ 1.32 ಕೋಟಿ ನಗದು ಜಪ್ತಿ

Share This Article